ಮೂಡುಬಿದಿರೆ: ತೆಂಕಮಿಜಾರು ಗ್ರಾಮದ ಪೂಮಾರಪದವು ಎಂಬಲ್ಲಿ ಸುಮರು 1ವರ್ಷದಿಂದ ವಾಸಿಸುತ್ತಿರುವ ಬಸಪ್ಪ ಅವರ ಪುತ್ರಿ ಭಾಗ್ಯಶ್ರೀ (19.ವ) ಕಳೆದ ಫೆ 12ರಿಂದ ಮನೆಯಿಂದ ಕಾಣೆಯಾಗಿರುವುದಾಗಿ ಮೂಡುಬಿದಿರೆ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೂಲತಃ ಬಾಗಲಕೋಟೆ ಜಿಲ್ಲೆಯ ಲವಳಸರ ಹಳ್ಳಿಯ ಈ ಕುಟುಂಬವು ಕೂಲಿ ಕೆಲಸ ಮಾಡಿಕೊಂಡು ಸುಮಾರು 1ವರ್ಷದಿಂದ ಪೂಮಾರಪದವಿನಲ್ಲಿ ವಾಸವಾಗಿತ್ತು. ಫೆ.11 ರಂದು ರಾತ್ರಿ 10.30 ಕ್ಕೆ ಭಾಗ್ಯಶ್ರೀ ಮನೆಯವರೊಂದಿಗೆ ಊಟಮಾಡಿ ಮಲಗಿದ್ದು, ಮರುದಿನ ಬೆಳಿಗ್ಗೆ 4.30 ಕ್ಕೆ ಕಾಣೆಯಾಗಿರುವುದು ಮನೆಯವರ ಗಮನಕ್ಕೆ ಬಂದಿದೆ. ಮನೆಯವರು ಸುತ್ತಮುತ್ತಲಿನ ಪರಿಸರದಲ್ಲಿ, ಸ್ವಂತ ಊರಿನಲ್ಲಿ ಹಾಗೂ ಅವರ ಊರಿನವರು ಕೆಲಸ ಮಾಡುತ್ತಿರುವ ಕಾವೂರು, ಬಜಪೆ, ಕಿನ್ನಿಗೋಳಿ, ಮೂಲ್ಕಿ ಮೊದಲಾದ ಕಡೆಗಳಲ್ಲಿ ಹುಡುಕಾಡಿದರೂ ಈಕೆ ಪತ್ತೆಯಾಗಿಲ್ಲ.
ಎಣ್ಣೆ ಕಪ್ಪು ಮೈಬಣ್ಣ, 5 ಅಡಿ ಎತ್ತರ, ದುಂಡು ಮುಖ,ಕನ್ನಡ ಭಾಷೆ ತಿಳಿದಿರುವ ಭಾಗ್ಯಶ್ರೀ ನಾಪತ್ತೆಯಾದ ಸಂದರ್ಭದಲ್ಲಿ ಅರಸಿನ ಬಣ್ಣದ ಚೂಡಿದಾರ ಧರಿಸಿದ್ದಳು ಎನ್ನಲಾಗಿದೆ. ಈಕೆಯ ಬಗ್ಗೆ ಮಾಹಿತಿ ತಿಳಿದವರು ಪೊಲೀಸ್ ಆಯುಕ್ತರು: 0824-2220801,2220800, ಮೂಡುಬಿದಿರೆ ಪೊಲೀಸು ಠಾಣೆ: 08258-236333 ಸಂಪರ್ಕಿಸಿ ಸಹಕರಿಸುವಂತೆ ಮೂಡುಬಿದಿರೆ ಪೊಲೀಸು ಠಾಣಾಧಿಕಾರಿಯವರ ಪ್ರಕಟಣೆ ತಿಳಿಸಿದೆ.