ಬೆಳ್ತಂಗಡಿ: ನಂದಿಬೆಟ್ಟದ ರಾಜ್ಯ ಹೆದ್ದಾರಿ ಬದಿಯ ಜಯರಾಮ ಗೌಡ ಅವರಿಗೆ ಸೇರಿದ ರಬ್ಬರ್ ತೋಟಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಬಿದ್ದು ಸಾವಿರಾರು ರೂ. ನಷ್ಟ ಸಂಭವಿಸಿದ ಘಟನೆ ಶುಕ್ರವಾರ ಸಂಭವಿಸಿದೆ.
ಗುರುವಾಯನಕೆರೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ಬೆಳಿಗ್ಗೆ ಸಂಜೆಯವರೆಗಿನ ನಿರಂತರ ಕಾರ್ಯಾಚರಣೆಯ ಮೂಲಕ ಬೆಂಕಿ ನಂದಿಸಿದ್ದಾರೆ. ಸುಮಾರು 300 ರಬ್ಬರ್ ಮರಗಳು ಬೆಂಕಿಗಾಹುತಿಯಾಗಿದೆ.
ಅಗ್ನಿಶಾಮಕ ದಳದ ಅಧಿಕಾರಿ ಕ್ಲೇವಿಯಸ್ ಡಿ ಸೋಜ, ಸಿಬ್ಬಂದಿಗಳಾದ ರಮೇಶ್ ಎಂ., ಬಾಬು, ಲೋಕೇಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.