News Kannada
Monday, February 06 2023

ಕರಾವಳಿ

ಅಕ್ರಮ ಮರದ ದಿಮ್ಮಿ ಸಾಗಾಟ: 8 ಲಕ್ಷ ರೂ ಮೌಲ್ಯದ ಸ್ವತ್ತು ವಶ

Photo Credit :

ಅಕ್ರಮ ಮರದ ದಿಮ್ಮಿ ಸಾಗಾಟ: 8 ಲಕ್ಷ ರೂ ಮೌಲ್ಯದ ಸ್ವತ್ತು ವಶ

ಬೆಳ್ತಂಗಡಿ: ಅಕ್ರಮವಾಗಿ ಮರಗಳನ್ನು ಕಡಿದು ದಿಮ್ಮಿಗಳಾಗಿ ಪರಿವರ್ತಿಸಿ ಪಿಕಪ್ ವಾಹನದಲ್ಲಿ ಸಾಗಿಸುತ್ತಿದ್ದ ಬಗ್ಗೆ ಮಾಹಿತಿ ಪಡೆದ ವೇಣೂರು ಅರಣ್ಯ ಇಲಾಖಾಧಿಕಾರಿಗಳು ದಾಳಿ ನಡೆಸಿ ಸ್ವತ್ತು ಸಹಿತ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಗುಂಡೇರಿ ಬಳಿ ಪಿಕಪ್ ವಾಹನದಲ್ಲಿ ಅಕ್ರಮವಾಗಿ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದರು ಎನ್ನಲಾಗಿದೆ. ವೇಣೂರು ವಲಯ ಅರಣ್ಯಾಧಿಕಾರಿ ಸುಬ್ರಹ್ಮಣ್ಯ ಆಚಾರ್ಯ ಅವರ ಸೂಚನೆಯಂತೆ ಉಪವಲಯ ಅರಣ್ಯಾಧಿಕಾರಿ ರಾಜೇಶ್ ಅವರ ತಂಡದಲ್ಲಿದ್ದ ಅರಣ್ಯ ರಕ್ಷಕರಾದ ಶಶಿಕಾಂತ್, ಜನಾರ್ಧನ ಗೌಡ, ಅರಣ್ಯ ವೀಕ್ಷಕರಾದ ಸಂತೋಷ್, ವೆಂಕಪ್ಪ ನಾಯ್ಕ ದಾಳಿ ನಡೆಸಿದ್ದಾರೆ.

ವಶಪಡಿಸಿಕೊಂಡ ಒಟ್ಟು ಮೌಲ್ಯ ರೂ. 8 ಲಕ್ಷ ಎಂದು ಅಂದಾಜಿಸಲಾಗಿದ್ದು, ಕುಂದಾಪುರ ವಿಭಾಗದ ಉಪ ಅರಣ್ಯ ಸಂರಕ್ಷಕರಾದ ಎಂ.ವಿ. ಅಮರ್ ನಾಥ್ ನಿರ್ದೇಶನದಂತೆ ಮೂಡಬಿದಿರೆ ಸಹಾಯಕ ಅರಣ್ಯ ಸಂರಕ್ಷಕ ಸುಬ್ರಹ್ಮಣ್ಯ ಎಚ್.ಆರ್. ಅವರು ಪ್ರಕರಣದ ಮುಂದಿನ ತನಿಖೆ ನಡೆಸುತ್ತಿದ್ದಾರೆ.

See also  ಮಳೆಯ ಅಬ್ಬರಕ್ಕೆವಿದ್ಯುತ್ ವ್ಯತ್ಯಯ- ಲೈನ್ ಮನ್‌ಗಳು ಸುಸ್ತು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು