ಮೂಡುಬಿದಿರೆ: ಕಾರ್ಕಳದಲ್ಲಿ ಫೆ.18ರಂದು ರಸ್ತೆ ಅಪಘಾತಕ್ಕೀಡಗಿದ್ದ ಮೂಡುಬಿದಿರೆಯ ಪಡುಮಾರ್ನಾಡಿನ ಯುವಕ ಫೆ.20ರಂದು ಮಂಗಳೂರಿನ ಎ.ಜೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಆತನ ಆಂಗಾಂಗಗಳನ್ನು ಕುಟುಂಬದವರು ದಾನ ಮಾಡಿದ್ದಾರೆ.
ಮೂಡುಬಿದಿರೆ ಸಮೀಪದದ ಪಡುಮಾರ್ನಾಡು ಗ್ರಾಮದ ಅಚ್ಚರಕಟ್ಟೆ ನಿವಾಸಿ, ರಾಘವ ಆಚಾರ್ಯ-ಸುಲೋಚನಾ ದಂಪತಿಯ ಪುತ್ರ ಸತೀಶ್(27) ಕಾರ್ಕಳ ನಗರದಲ್ಲಿ ಫೆ.18ರಂದು ಅಪಘಾತಕ್ಕೀಡಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಫೆ.19ರಂದು ಮಂಗಳೂರಿನ ಎ.ಜೆ ಆಸ್ಪತ್ರೆಗೆ ಸೇರಿಸಲಾಗಿತ್ತು. ಫೆ.20ರಂದು ಈತನ ಮಿದುಳು ನಿಷ್ಕ್ರೀಯಗೊಂಡಿತು. ಆತನ ಪೋಷಕರು ಹಾಗೂ ಕುಟುಂಬದ ಸದಸ್ಯರು ಆಂಗಾಂಗ ದಾನ ಮಾಡಲು ನಿರ್ಧರಿಸಿದ್ದು, ಅದರಂತೆ ಮಂಗಳವಾರ ಆತನ ಕಿಡ್ನಿ, ಕಣ್ಣು, ಲಿವರ್ ಮತ್ತು ಹೃದಯವನ್ನು ದಾನ ಮಾಡಲಾಗಿದೆ.
ಮಂಗಳವಾರ ಸಂಜೆ ಮಂಗಳೂರಿನ ಎ.ಜೆ ಆಸ್ಪತ್ರೆಯಿಂದ ಸತೀಶ್ ನ ಹೃದಯವನ್ನು ಬೆಂಗಳೂರಿನ ಎಂ.ಎಸ್ ರಾಮಯ್ಯ ಆಸ್ಪತ್ರೆ, ಲಿವರ್ ಅನ್ನು ಬೆಂಗಳೂರಿನಲ್ಲಿರುವ ಮಣಿಪಾಲ ಆಸದೊತ್ರೆ ಹಾಗೂ ಕಿಡ್ನಿಯನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ರವಾನಿಸಲಾಗಿದೆ.