ಮೂಡುಬಿದಿರೆ: ಮಂಗಳೂರು ವಿ.ವಿ ಎಂಸಿಜೆ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ದೀವಿತ್ ಎಸ್.ಕೋಟ್ಯಾನ್ ಎರಡು ಚಿನ್ನದ ಪದಕಗಳನ್ನು ಹಾಗೂ ಅರ್ಥಶಾಸ್ತ್ರದಲ್ಲಿ ಜಯಲಕ್ಷ್ಮೀ ಚಿನ್ನದ ಪದಕ ಗಳಿಸುವುದರೊಂದಿಗೆ ಸಾಧನೆ ಮಾಡಿದ್ದಾರೆ. ಆಳ್ವಾಸ್ ನಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ವಿಭಾಗದ(ಎಂಸಿಜೆ) ಪ್ರಥಮ ಬ್ಯಾಚ್ ನಲ್ಲಿ ಎರಡು ಚಿನ್ನದ ಪದಕ ಪಡೆದಿರುವುದು ಗಮನಾರ್ಹವಾಗಿದೆ.
ಸ್ನಾತಕೋತ್ತರ ವಿಭಾಗದಲ್ಲಿ ಆಳ್ವಾಸ್ ನ 4 ಮಂದಿ ವಿದ್ಯಾರ್ಥಿಗಳು ಒಟ್ಟು 8 ನಗದು ಬಹುಮಾನಗಳನ್ನೂ ಪಡೆದುಕೊಂಡಿದ್ದಾರೆ. ಸ್ನಾತಕೋತ್ತರ ಇಂಗ್ಲೀಷ್ ವಿಭಾಗದಲ್ಲಿ ಕೀರ್ತಿ 3 ನಗದು ಬಹುಮಾನ, ಎಂಸಿಜೆಯಲ್ಲಿ ದೀವಿತ್ ಗೆ 2 ನಗದು ಬಹುಮಾನ, ಅರ್ಥಶಾಸ್ತ್ರ ವಿಭಾಗದಲ್ಲಿ ಜಯಲಕ್ಷ್ಮೀಗೆ 2 ಹಾಗೂ ಅದೇ ವಿಭಾಗದ ದಾಕ್ಷಯಣಿಗೆ ಒಂದು ನಗದು ಬಹುಮಾನ ಲಭಿಸಿದೆ.