ಬೆಳ್ತಂಗಡಿ: ಪಾದಾಚಾರಿಯೋರ್ವರಿಗೆ ಮಾರುತಿ 800 ಡಿಕ್ಕಿಯೊಡೆದು ಮೃತಪಟ್ಟ ಘಟನೆ ಬೆಳ್ತಂಗಡಿ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೊಕ್ರಾಡಿಯಲ್ಲಿ ಗುರುವಾರ ಸಂಭವಿಸಿದೆ.
ಅಂಡಿಂಜೆ ಗ್ರಾಮದ ಕೊಕ್ರಾಡಿ ಮಾನ್ಯಾಡಿಕಟ್ಟೆ ನಿವಾಸಿ ರಾಜೇಶ್ (32) ಮೃತಪಟ್ಟ ದುರ್ದೈವಿ. ಇವರು ಮನೆ ಸಮೀಪದ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ನಾರಾವಿ ಕಡೆಯಿಂದ ಅಂಡಿಂಜೆ ಕಡೆಗೆ ವಿರಾಜ್ ಶೆಟ್ಟಿ ಚಲಾಯಿಸಿಕೊಂಡು ಬರುತ್ತಿದ್ದ (ಕೆಎ 22 ಎಂ 6850) ಮಾರುತಿ 800 ಕಾರು ರಾಜೇಶ್ ಅವರಿಗೆ ಡಿಕ್ಕಿ ಹೊಡೆದಿದೆ.
ಗಂಭೀರ ಗಾಯಗೊಂಡ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಕಾರು ಚಾಲಕ ವಿರಾಜ್ ಶೆಟ್ಟಿ ವಿರುದ್ಧ ವೇಣೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.