ಉಳ್ಳಾಲ: ಕೇರಳ ಸಾರಿಗೆ ಬಸ್ಸಿಗೆ ದುಷ್ಕರ್ಮಿಗಳು ಶುಕ್ರವಾರ ತಡರಾತ್ರಿ ಕಲ್ಲೆಸೆದು ದುಷ್ಕೃತ್ಯ ಎಸಗಿರುವ ಘಟನೆ ಕೇರಳ -ಕರ್ನಾಟಕ ಗಡಿ ಪ್ರದೇಶ ಟೋಲ್ ಗೇಟ್ ಸಮೀಪ ನಡೆದಿದೆ.
ಇಂದು ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಅವರು ಮಂಗಳೂರಿಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಹಿಂದು ಸಂಘಟನೆಗಳು ಬಂದ್ ಗೆ ಕರೆ ನೀಡಿದೆ. ಶುಕ್ರವಾರದಂದು ಭೇಟಿ ವಿರೋಧಿಸಿ ಹರತಾಳವನ್ನು ಆಯೋಜಿಸಿತ್ತು. ಇದೇ ಹಿನ್ನೆಲೆಯಲ್ಲಿ ಗಡಿ ಪ್ರದೇಶದಲ್ಲಿ ಕಿಡಿಗೇಡಿಗಳು ಕಲ್ಲೆಸೆದಿರುವ ಶಂಕೆ ಇದೆ. ಮಂಗಳೂರಿನಿಂದ ಕಾಸರಗೋಡಿಗೆ ತೆರಳುತ್ತಿದ್ದ ವೇಳೆ ಕಲ್ಲೆಸೆಯಲಾಗಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಕೇರಳ ಹಾಗೂ ಕರ್ನಾಟಕ ಪೊಲೀಸರ ಬಿಗಿ ಬಂದೋಬಸ್ತಿನ ನಡುವೆ ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ.