ಕಾಸರಗೋಡು: ಕಾಸರಗೋಡಿನಿಂದ ಹಿಮಾಚಲ ಪ್ರದೇಶದ ಮನಾಲಿಗೆ ತೆರಳಿದ್ದ ಕಾಸರಗೋಡು ಪೊವ್ವಲ್ ನ ಎಲ್ ಬಿಎಸ್ ಕಾಲೇಜು ವಿದ್ಯಾರ್ಥಿಗಳು ಸಂಚರಿಸುತ್ತಿದ್ದ ಜೀಪು ಕಂದಕಕ್ಕೆ ಉರುಳಿಬಿದ್ದ ಪರಿಣಾಮ ಓರ್ವ ವಿದ್ಯಾರ್ಥಿ ಮೃತಪಟ್ಟು, ಮೂವರು ಗಾಯಗೊಂಡ ಘಟನೆ ನಡೆದಿದೆ.
ಮೃತಪಟ್ಟವನನ್ನು ತಲಶ್ಯೇರಿ ನಿವಾಸಿ ಹಾಗೂ ಕಂಪ್ಯೂಟರ್ ಸಯನ್ಸ್ ಮೂರನೇ ವರ್ಷದ ವಿದ್ಯಾರ್ಥಿ ಪಿ. ರಮಾನಾಥ (23) ಎಂದು ಗುರುತಿಸಲಾಗಿದೆ.
ಮೂವರು ಗಾಯಗೊಂಡಿರುವುದಾಗಿ ಮಾಹಿತಿ ಲಭಿಸಿದೆ. ಕಳೆದ ಆದಿತ್ಯವಾರದಂದು ಇವರು ಅಧ್ಯಯನ ಪ್ರವಾಸಕ್ಕೆ ಮನಾಲಿಗೆ ತೆರಳಿದ್ದರು. ಮಾರ್ಚ್ ಒಂದರಂದು ಮರಳುವರರಿದ್ದರು. ಶನಿವಾರ ಮಧ್ಯಾಹ್ನ ಜೀಪಿನಲ್ಲಿ ತೆರಳುತ್ತಿದ್ದಾಗ ಅಪಘಾತ ನಡೆದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.