News Kannada
Friday, December 09 2022

ಕರಾವಳಿ

ಕಾಸರಗೋಡಿನಲ್ಲಿ ಗಡಿನಾಡ ಕೊಂಕಣಿ ಪ್ರತಿಷ್ಠಾನ ಉದ್ಘಾಟಿಸಿದ ದಿವ್ಯಪ್ರಭಾ ಗೌಡ

Photo Credit :

ಕಾಸರಗೋಡಿನಲ್ಲಿ ಗಡಿನಾಡ ಕೊಂಕಣಿ ಪ್ರತಿಷ್ಠಾನ ಉದ್ಘಾಟಿಸಿದ ದಿವ್ಯಪ್ರಭಾ ಗೌಡ

ಕಾಸರಗೋಡು: ಗಡಿನಾಡಾದ ಕಾಸರಗೋಡಿನಲ್ಲಿ ಗಡಿನಾಡ ಕೊಂಕಣಿ ಪ್ರತಿಷ್ಠಾನ ಅಸ್ತಿತ್ವಕ್ಕೆ ಬಂದಿದೆ.

ಶನಿವಾರ ಕುಂಬಳೆ ಸೇವಾ ಸಹಕಾರಿ ಬ್ಯಾ೦ಕ್ ಸಭಾಂಗಣದಲ್ಲಿ ನಡೆದ ಸಭಾಂಗಣದಲ್ಲಿ ಕರ್ನಾಟಕ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷ ದಿವ್ಯಪ್ರಭಾ ಗೌಡ ಚಿಲ್ತಡ್ಕ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೊಂಕಣಿ ಭಾಷೆಯನ್ನು ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ತನ್ನ ಛಾಪು ವಿಸ್ತರಿಸಲು ಉಳಿವಿಗೆ ಮುಂದಿನ ಪೀಳಿಗೆಗೆ ಉಳಿಸುವ ನಿಟ್ಟಿನಲ್ಲಿ ಗಡಿನಾಡ ಕಾಸರಗೋಡಿನಲ್ಲಿ ಕೊಂಕಣಿ ಪ್ರತಿಷ್ಠಾನ ಆರಂಭಿಸಿದ್ದು, ಮುಂದಿನ ಸಾಲಿನ ಕರ್ನಾಟಕ ಕೊಂಕಣಿ ಅಕಾಡಮಿ ರಚನೆಯಾದಾಗ ಗಡಿನಾಡ ಕೊಂಕಣಿ ಅಕಾಡಮಿಗೆ ಸೂಕ್ತ ಸ್ಥಾನಮಾನಗಳನ್ನೂ ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

ಗಡಿನಾಡು ಕೊಂಕಣಿ ಪ್ರತಿಷ್ಠಾನದ ಅಧ್ಯಕ್ಷ ಎಸ್.ಗುರುದತ್ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಗಡಿನಾಡು ಕೊಂಕಣಿ ಪ್ರತಿಷ್ಠಾನದ ಲಾಂಛನವನ್ನು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಬಿಡುಗಡೆಗೊಳಿಸಿದರು.

ವೇದಮೂರ್ತಿ ದಿನೇಶ ಅನಂತ ಭಟ್, ಕುಂಬಳೆ ಸಂತ ಮೋನಿಕಾ ಚರ್ಚ್ ಧರ್ಮಗುರು ವಂದನೀಯ ಮಾರ್ಸೆಲ್ ಸಲ್ದಾನಾ, ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕಾಧ್ಯಕ್ಷ ಕೇಶವ ಪ್ರಸಾದ ನಾಣಿತ್ತಿಲು  ಶುಭ ಹಾರೈಸಿದರು.

ಮಂಜೇಶ್ವರ ಶ್ರೀಮದ್ ಅನಂತೇಶ್ವರ ಕ್ಷೇತ್ರದ ಅಧ್ಯಕ್ಷ ಡಾ.ಅನಂತ ಕಾಮತ್, ಮಂಜೇಶ್ವರ ಪಿ.ಸಿ.ಎ.ಆರ್.ಡಿ. ಬ್ಯಾಂಕ್ ಅಧ್ಯಕ್ಷ ಸೋಮಶೇಖರ ಜೆ.ಎಸ್., ಮಂಜೇಶ್ವರ ಗ್ರಾ.ಪಂ.ಸದಸ್ಯೆ ಸುಪ್ರಿಯಾ ಪೈ, ಉದ್ಯಮಿ ಕೆ.ಎಸ್.ಮಲ್ಯ, ನಿವೃತ್ತ ಶಿಕ್ಷಕ ಕುಂಡೇರಿ ಜಯಂತ ನಾಯಕ್, ಗಡಿನಾಡ ಕಲಾ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಕೇಳು ಮಾಸ್ತರ್ ಅಗಲ್ಪಾಡಿ,ಉದ್ಯಮಿ ಜಿ.ಚಂದ್ರಕಾಂತ ನಾಯಕ್ ಉಪಸ್ಥಿತರಿದ್ದರು.

ಗಡಿನಾಡು ಕೊಂಕಣಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಪ್ರಭು ಕುಂಬಳೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಬಿ.ಸುಧೀರ್ ಪೈ ವಂದಿಸಿದರು. ರವಿ ನಾಯ್ಕಾಪು ಕಾರ್ಯಕ್ರಮ ನಿರೂಪಿಸಿದರು.

See also  ಮೂಡುಬಿದಿರೆಯಲ್ಲಿ ಕೋಟಿ ಚೆನ್ನಯ ಕಂಬಳಕ್ಕೆ ಚಾಲನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು