News Kannada
Tuesday, February 07 2023

ಕರಾವಳಿ

ನಿರ್ಗತಿಕರಿಗೆ ನೆರವಾಗುವುದು ಉಳ್ಳವರ ಕರ್ತವ್ಯ : ಖತೀಬ್ ಉಸ್ಮಾನ್ ದಾರಿಮಿ

Photo Credit :

ನಿರ್ಗತಿಕರಿಗೆ ನೆರವಾಗುವುದು ಉಳ್ಳವರ ಕರ್ತವ್ಯ : ಖತೀಬ್ ಉಸ್ಮಾನ್ ದಾರಿಮಿ

ಬಂಟ್ವಾಳ: ಬಡವರು ಮತ್ತು ನಿರ್ಗತಿಕರಿಗೆ ನೆರವಾಗುವ ಮೂಲಕ ಅವರ ಬಾಳನ್ನು ಬೆಳಗಿಸುವ ಜವಾಬ್ದಾರಿ ಉಳ್ಳವರ ಹಾಗೂ ಸಮಾಜದಲ್ಲಿ ಜವಾಬ್ದಾರಿಯುಕ್ತ ಸ್ಥಾನದಲ್ಲಿರುವವರ ಕರ್ತವ್ಯವಾಗಿದೆ ಎಂದು ಫರಂಗಿಪೇಟೆ ಜುಮಾ ಮಸೀದಿ ಖತೀಬ್ ಉಸ್ಮಾನ್ ದಾರಿಮಿ ಹೇಳಿದರು.

ಮುಹಿಯ್ಯುದ್ದೀನ್ ಜುಮಾ ಮಸೀದಿ ಫರಂಗಿಪೇಟೆ ಇದರ ಸಹಕಾರದೊಂದಿಗೆ ಖಿದ್ಮತುಲ್ ಇಸ್ಲಾಮ್ ಅಸೋಸಿಯೇಶನ್ ಫರಂಗಿಪೇಟೆ ಇದರ ವತಿಯಿಂದ ಫರಂಗಿಪೇಟೆ ನೇತ್ರಾವತಿ ನದಿ ಕಿನಾರೆಯಲ್ಲಿ ರವಿವಾರ ನಡೆದ 10 ಜೋಡಿಗಳ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ರಾಜ್ಯ ಆಹಾರ ಸಚಿವ ಯು.ಟಿ.ಖಾದರ್ ಮಾತನಾಡಿ, ಸರ್ವರ ಸಹಕಾರ ಪಡೆದು ಸಾಮೂಹಿಕ ವಿವಾಹವನ್ನು ಆಯೋಜಿಸುವ ಮೂಲಕ ಖಿದ್ಮತುಲ್ ಇಸ್ಲಾಂ ಎಸೋಸಿಯೇಷನ್ ಸಮಾಜಕ್ಕೆ ಅರ್ಥಪೂರ್ಣ ಸಂದೇಶವನ್ನು ನೀಡಿದೆ. ಜನ ಸಾಮಾನ್ಯರ ಕಣ್ಣೀರು ಒರೆಸುವ ಮೂಲಕ ಶಾಶ್ವತ ಸಂತೋಷದ ದಿನಗಳನ್ನು ನೀಡುವ ಕಾರ್ಯ ಮಾಡಿದೆ ಎಂದರು. ಬಿ.ಅಹ್ಮದ ಹಾಜಿಯವರು ಹಲವು ವರ್ಷಗಳ ಹಿಂದೆ ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಬಡಜನರಿಗೂ ಶಿಕ್ಷಣ ನೀಡುವ ಕಾರ್ಯವನ್ನು ಮಾಡಿದ್ದಾರೆ ಅವರು ಇಂದಿನ ಯುವಜನಾಂಗಕ್ಕೆ ಮಾದರಿ ಎಂದರು.

ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್ ದುಅ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಫರಂಗಿಪೇಟೆ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಎಫ್.ಮುಹಮ್ಮದ್ ಬಾವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪಾಣಕ್ಕಾಡ್ ಶಮೀರ್ ಅಲಿ ತಂಙಳ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಮ್.ಎ.ಗಫೂರ್, ಮನಪಾ ಆಯುಕ್ತ ಮುಹಮ್ಮದ್ ನಝೀರ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಬಿ.ಎ. ಸಮೂಹ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ಡಾ. ಬಿ.ಅಹ್ಮದ್ ಹಾಜಿ ಮುಹಿಯುದ್ದೀನ್ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಎಮ್ಜೆಎಂ ಫರಂಗಿಪೇಟೆ ಕಾರ್ಯದರ್ಶಿ ಹಾಜಿ ಎ.ಯೂಸುಫ್ ಅಲಂಕಾರ್, ಮಂಗಳೂರು ಹಿದಾಯ ಫೌಂಡೇಶನ್ ಅಧ್ಯಕ್ಷ ಹನೀಫ್ ಹಾಜಿ, ಎಸ್ಡಿಪಿಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೋಡಾಜೆ, ಜಿಪಂ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಕೆ.ಶಾಹುಲ್ ಹಮೀದ್, ಅರಫಾ ಗ್ರೂಫ್ ತುಂಬೆಯ ಅಬ್ದುಲ್ ಲತೀಫ್, ಫರಂಗಿಪೇಟೆ ರಾಜಧಾನಿ ಜ್ಯುವೆಲ್ಲರ್ಸ್ ನ ಶುಕುರ್, ಉದ್ಯಮಿಗಳಾದ ಅಬ್ದಲ್ ಮೋನು, ಅಬ್ದುಲ್ ರಶೀದ್, ಮಂಗಳೂರು ಫಿಶ್ ಮರ್ಚೆಂಟ್ ನ ಇಸ್ಮಾಯೀಲ್ ಕೆಇಎಲ್, ಕಣ್ಣೂರು ಅಶೋಕ್ ಬೀಡಿಯ ಹಾಜಿ ಮುಹಮ್ಮದ್, ವಳಿಬೈಲ್ ಜುಮಾ ಮಸೀದಿಯ ಗೌರವಾಧ್ಯಕ್ಷ ಝಫರುಲ್ಲಾ ಒಡೆಯರ್, ಸಲೀಂ ಟೈಲರ್ ಫರಂಗಿಪೇಟೆ, ಬೈಕಂಡಿ ಚಿಕನ್ ಸ್ಟಾಲ್ ನ ಹಂಝ, ಮಾಹಿನ್ ದಾರಿಮಿ ಪಾತೂರು, ಮಂಗಳೂರು ಟಿಆರ್ಎಫ್ ಗೌರವ ಸಲಹೆಗಾರ ರಫೀಕ್ ಮಾಸ್ಟರ್, ಝುಬೈರ್ ಸಜಿಪಪಡು, ಬಿ.ಕೆ.ಇದಿನಬ್ಬ ಸಹಿತ ಮೊದಲಾದವರು ಉಪಸ್ಥಿತರಿದ್ದರು.

ಜಿಪಂ ಮಾಜಿ ಸದಸ್ಯ ಎಫ್.ಉಮರ್ ಫಾರೂಕ್ ಪ್ರಾಸ್ತಾವಿಸಿ ಸ್ವಾಗತಿಸಿದರು. ಅಬ್ದುಲ್ ಹಮೀದ್ ಗೋಳ್ತಮಜಲು ಧನ್ಯವಾದಗೈದರು. ಮಾಸ್ಟರ್ ಅಬ್ದುಲ್ ರಝಾಕ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು. ಫರಂಗಿಪೇಟೆ ಜುಮಾ ಮಸೀದಿ ಮತ್ತು ಖಿದ್ಮತ್ತುಲ್ ಇಸ್ಲಾಮ್ ಅಸೋಸಿಯೇಶನ್ ನ ಸರ್ವ ಸದಸ್ಯರು ಈ ಸಂದರ್ಭದಲ್ಲಿ ಸಹಕರಿಸಿದರು.

See also  ದಡ್ಡಲಕಾಡು ಶಾಲೆಯ ಕಟ್ಟದ ಲೋಕಾರ್ಪಣೆ ಮಾಡಿದ ರಾಜ್ಯಪಾಲ ವಜೂಭಾಯಿ

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು