News Kannada
Tuesday, February 07 2023

ಕರಾವಳಿ

10 ವರ್ಷಕ್ಕೂ ಮಿಕ್ಕಿ ನಿರ್ವಹಣೆ ಇಲ್ಲದೇ ಕೊರಗುತ್ತಿರುವ ವಸತಿಗೃಹಗಳು

Photo Credit :

10 ವರ್ಷಕ್ಕೂ ಮಿಕ್ಕಿ ನಿರ್ವಹಣೆ ಇಲ್ಲದೇ ಕೊರಗುತ್ತಿರುವ ವಸತಿಗೃಹಗಳು

ಕಾರ್ಕಳ: ತಾಲೂಕು ಸರಕಾರಿ ಆಸ್ಪತ್ರೆಯ ವಸತಿಗೃಹಗಳ ನಿರ್ವಹಣೆ ಇಲ್ಲದೇ ಸರಿಸುಮಾರು ಹತ್ತು ವರ್ಷಗಳೇ ಸಂದಿದೆ. ಇಂತಹ ಪರಿಸ್ಥಿತಿಯ ನಡುವೆಯೂ ಇದೇ ವಸತಿಗೃಹದಲ್ಲಿ ವಾಸಿಸುತ್ತಿರುವ ಸಿಬ್ಬಂದಿಗಳ ವೇತನದಲ್ಲಿ ಶೇ.10ರಷ್ಟು ಮೊತ್ತವು ಬಾಡಿಗೆ ವಸತಿಗೃಹದ ನಿರ್ವಹಣೆಗೆಂದು ಕಡಿತಗೊಳಿಸುತ್ತಿರುವುದು ದುರಂತವೇ ಸರಿ.

ಹಂತ ಹಂತವಾಗಿ ಮೇಲ್ದಾರ್ಜೆಗೇರುತ್ತಾ 1990ರಲ್ಲಿ ತಾಲೂಕು ಸಾರ್ವಜನಿಕ ಆಸ್ಪತ್ರೆ ಎಂದು ಮಾರ್ಪಡಾಗಿದ್ದು ಇಲ್ಲಿ ಒಟ್ಟು 14 ವಸತಿಗೃಹಗಳಿವೆ. 1954ರಲ್ಲಿ ನಿರ್ಮಾಣಗೊಂಡಿರುವ ಪ್ರಾಥಮಿಕ ವಸತಿಗೃಹ ಸೇರಿದಂತೆ ಒಟ್ಟು 8 ವಸತಿಗೃಹಗಳು ಇಲ್ಲಿವೆ. ಇವೆಲ್ಲದರ ಪರಿಸ್ಥಿತಿ ಶೋಚನೀಯವಾಗಿದೆ. ನಿರ್ವಹಣೆ ಇಲ್ಲದೇ ಇರುವುದರಿಂದ ಇದರಲ್ಲಿ ವಾಸವಾಗಿರುವ ಸಿಬ್ಬಂದಿಗಳು ತಮ್ಮ ಸ್ವತಃ ಖರ್ಚಿನಲ್ಲಿ ವಸತಿಗೃಹದ ಒಂದಿಷ್ಟು ದುರಸ್ಥಿ ಪಡಿಸುತ್ತಿದ್ದಾರೆ.

ಹೆಂಚಿನಮಾಡು ಸಂಪೂರ್ಣ ಶಿಥಿಲವಸ್ಥೆಗೆ ತಲುಪಿದೆ. ತಡಪಾಲು ಹೊದಿಕೆ ಮಾಡಿಗೆ ಆಧಾರವಾಗಿದೆ. ಪಕ್ಕಾಸಿನಿಂದ ರೀಪುಗಳು ಬೇರ್ಪಟ್ಟು ಹೆಂಚುಗಳು ಧರೆಶಾಹಿಯಾಗಿರುವುದು ಕಂಡುಬಂದಿದೆ. ಮಳೆಗಾಲದ ಸಂದರ್ಭದಲ್ಲಿ ಮಳೆನೀರು ವಸತಿಗೃಹದೊಳಗೆ ಸೋರಿಕೆಯಾಗುತ್ತಿದೆ. ನೆಲದಿಂದ ಬೇರ್ಪಟ್ಟ ಸಿಮೆಂಟ್ ಕಂಡುಬರುತ್ತಿವೆ.

ಪ್ರಾಥಮಿಕ ಆರೋಗ್ಯ ಸಹಾಯಕಿ, ಫಾರ್ಮಸಿಸ್ಟ್, ಖಾಯಂ ದಾದಿಯರ 4 ವಸತಿಗೃಹಗಳು, ವೈದ್ಯರ 2 ವಸತಿಗೃಹ ಇದರಲ್ಲಿ ಒಳಗೊಂಡಿದೆ. ಇದರಲ್ಲಿ ಫಾರ್ಮಸಿಸ್ಟ್ ಸೇರಿದಂತೆ ವೈದ್ಯರ 2 ವಸತಿ ವಸತಿಗೃಹಗಳು ಖಾಲಿ ಬಿದ್ದಿದೆ. ವೈದ್ಯರೊಬ್ಬರ ವಸತಿಗೃಹವೊಂದರಲ್ಲಿ ಕಾನೂನು ಬಾಹಿರವಾಗಿ ಕೂಲಿಕಾರ್ಮಿಕರು ವಾಸಕ್ಕೆ ಅವಕಾಶ ಕಲ್ಪಿಸಲಾಗಿರುವುದು ಕಂಡುಬಂದಿದೆ.

2005ರಲ್ಲಿ ಕೆಎಚ್ಎಸ್ಡಿಪಿ ವತಿಯಿಂದ 6 ವಸತಿಗೃಹಗಳು ನಿರ್ಮಾಣಗೊಂಡಿದ್ದು ಅದರ ನಿರ್ವಹಣೆ ಇಲ್ಲ. ಮೇಲ್ಛಾವಣೆ ಸಂಪೂರ್ಣ ಸೋರಿಕೆಯಾಗುತ್ತಿದೆ. ಶೌಚಾಯಲಯಕ್ಕೆ ಕಲ್ಪಿಸಲಾಗಿದ್ದ ಪೈಪ್ ಒಡೆದು ಹೋಗಿ ತ್ಯಾಜ್ಯನೀರು ಹೊರಸೋಸುತ್ತಿದೆ. ವೈದ್ಯರ 2 ವಸತಿಗೃಹ ತೆರವುಗೊಂಡಿದೆ. ಕಾರ್ಮಿಕ ಗುಂಪಿನ ನಾಲ್ವರು ವಾಸವಾಗಿದ್ದಾರೆ.
 
ನೂತನ ವಸತಿಗೃಹ ನಿರ್ಮಾಣದ ಯೋಜನೆ ಅಗತ್ಯ:
1954ರಲ್ಲಿ ನಿರ್ಮಿಸಲಾಗಿದ್ದ ವಸತಿಗೃಹಗಳನ್ನು ತೆರವುಗೊಳಿಸಿ ಅದೇ ಪರಿಸರದಲ್ಲಿ ಬಹುಮಹಡಿ ವಸತಿಗೃಹ ನಿರ್ಮಾಣದ ಯೋಜನೆಯನ್ನು ಅನುಷ್ಠಾನಗೊಳಿಸುವುದರಿಂದ ಆಸ್ಪತ್ರೆಯ ಇನ್ನಷ್ಟು ಸಿಬ್ಬಂದಿಗಳ ವಾಸಕ್ಕೆ ಅನುಕೂಲವಾಗಲಿದೆ. ಪ್ರಸ್ತುತ ಇರುವಂತಹ ಹಳೆ ವಸತಿಗೃಹಗಳಿಂದಾಗಿ ಪರಸರದ ಜಾಗ ವ್ಯರ್ಥವಾಗಿದೆ.

ಸಿಬ್ಬಂದಿಗಳ ಕೊರತೆ: ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ 40 ಮಂದಿ ಖಾಯಂ ಸಿಬ್ಬಂದಿಗಳು ಇದ್ದಾರೆ. 39 ಖಾಯಂ ಹುದ್ದೆಗಳು ತೆರವುಗೊಂಡಿದೆ. ಕಚೇರಿಯಲ್ಲಿ ಒಟ್ಟು 6 ಖಾಯಂ ಹುದ್ದೆಗಳು ಇದ್ದರೂ ಅವರಲ್ಲಿ ಒಬ್ಬರು ಮಾತ್ರ ಖಾಯಂ ನೌಕರರಾರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರಥಮ ದರ್ಜೆ ಸಹಾಯಕರು-2, ಹಿರಿಯ ಬೆರಳಚ್ಚುದಾರರು-1, ದ್ವಿರೀಯ ದರ್ಜೆ ಸಹಾಯಕರು-1, ಅಧೀಕ್ಷಕರು-1 ಹುದ್ದೆಗಳು ತೆರವುಗೊಂಡಿದೆ. ಸಹಾಯಕ ಆಡಳಿತ ಅಧಿಕಾರಿ ಮಾತ್ರ ನಿಯುಕ್ತರಾಗಿದ್ದಾರೆ. ಇದೇ ಕಾರಣದಿಂದ ಸರಕಾರಿ ಕೆಲಸದಲ್ಲಿ ವಿಳಂಬವಾಗುತ್ತಿರಲು ಕಾರಣವಾಗಿದ್ದು, ಹೊರಗುತ್ತಿಗೆ ಆಧಾರದಲ್ಲಿ ಇಬ್ಬರನ್ನು ನೇಮಿಸಲಾಗಿದೆ. 25 ಡಿಗುಂಪು ಹುದ್ದೆಗಳಿದ್ದು ಕೇವಲ ನಾಲ್ವರು ಮಾತ್ರವೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ವೈದ್ಯರು ಇಲ್ಲದೆ ರೋಗಿಗಳು ಕಂಗಾಲು: ವೈದ್ಯಕೀಯ ತಜ್ಞ, ರೆಡಿಯಾಲಾಜಿ, ಸರ್ಜನ್, ಸ್ತ್ರೀರೋಗ, ಆಡಳಿತ ಮುಖ್ಯ ವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಭಾಗ್ಯ ಇನ್ನೂ ಕೂಡಿ ಬಂದಿಲ್ಲ.

ಬಾಡಿಗೆ ವಸತಿ ನಿರ್ವಹಣೆ ಮೊತ್ತವು ಆರೋಗ್ಯ ಇಲಾಖೆಯ ಖಾತೆಗೆ?!
-ಅನುಸೂಯ, ಸಹಾಯಕ ಆಡಳಿತ ಅಧಿಕಾರಿ
ಆಸ್ಪತ್ರೆಯ ವಸತಿಗೃಹದಲ್ಲಿ ವಾಸಿಸುತ್ತಿರುವ ಸಿಬ್ಬಂದಿಗಳ ವೇತನದಲ್ಲಿ ಶೇ. 10ರಷ್ಟು ಮೊತ್ತವನ್ನು ಬಾಡಿಗೆ ವಸತಿ ನಿರ್ವಹಣೆದೆಂದು ಕಡಿತಗೊಳಿಸಿ ಅದನ್ನು ಕರ್ನಾಟಕ ಲೋಕೋಪಯೋಗಿ ಇಲಾಖೆಯ ಖಾತೆಗೆ ಹಾಕಲಾಗುತ್ತಿತ್ತು. ಕಳೆದ 10 ವರ್ಷಕ್ಕೂ ಮಿಕ್ಕಿ ವಸತಿಗೃಹ ನಿರ್ವಹಣೆ ಇಲ್ಲದೇ ಕೊರಗುತ್ತಿದ್ದು ಆ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆಯಲಾಗಿತ್ತಾದರೂ ಅವರಿಂದ ಸ್ವಂದನೆ ಸಿಗಲಿಲ್ಲ. ಅದೇ ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ಬಾಡಿಗೆ ವಸತಿ ನಿರ್ವಹಣೆಯ ಮೊತ್ತವನ್ನು ಆರೋಗ್ಯ ಇಲಾಖೆಯ ಖಾತೆಗೆ ಜಮೆ ಮಾಡಲಾಗುತ್ತಿದೆ.

See also  45 ವರ್ಷ ವಯಸ್ಸು ಮೀರಿದವರಿಗೆ ಕೋವಿಡ್ ಲಸಿಕೆ, ಸ್ವಯಂಪ್ರೇರಿತರಾಗಿ ಬನ್ನಿ: ಸಚಿವ ಡಾ.ಕೆ.ಸುಧಾಕರ್ ಮನವಿ

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು