ಕಾಸರಗೋಡು: ಚಾರಣಪ್ರಿಯರ ಸ್ವರ್ಗ ಎಂಬ ಖ್ಯಾತಿ ಹೊಂದಿರುವ ರಾಣಿಪುರ ಪ್ರವಾಸಿ ಕೇಂದ್ರ ಪ್ರಕೃತಿ ಸೌ೦ದರ್ಯ ಅರಿವು ಮೂಡಿಸುವ ನಿಟ್ಟಿನಲ್ಲಿ ಅಡೂರು ಸರಕಾರಿ ಶಾಲಾ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಗಳಿಗಾಗಿ ಅರಣ್ಯ ಇಲಾಖೆಯ ಸಾಮಾಜಿಕ ಅರಣ್ಯ್ ಕರಣ ವಿಭಾಗ ರಾಣಿಪುರದಲ್ಲಿ ಏಕದಿನ ಪ್ರಕೃತಿ ಅಧ್ಯಯನ ಶಿಬಿರ ಆಯೋಜಿಸಲಾಗಿತ್ತು.
ವಿವಿಧ ವಿಷಯಗಳ ಬಗ್ಗೆ ತಜ್ಞರಿಂದ ತರಗತಿ, ಅರಣ್ಯದಲ್ಲಿ ಮೂರುಗಂಟೆಗಳ ಟ್ರಕ್ಕಿಂಗ್, ಚಿಟ್ಟೆಗಳ, ಪಕ್ಷಿಗಳು ಅಪೂರ್ವ ಸಸ್ಯ ಗಳ ಪರಿಚಯ ಮೊದಲಾದವು ಶಿಬಿರದಂಗವಾಗಿ ನಡೆಯಿತು. ಆನೆ ಸೇರಿದಂತೆ ವನ್ಯ ಮೃಗಗಳು ಸಾಗುವ ದಾರಿಯ ಸಂಚಾರ ಮಕ್ಕಳಿಗೆ ಹೊಸ ಅನುಭವ ನೀಡಿತು. ಆದರೆ ಹಲವೆಡೆ ಮಾನವನ ಸ್ವಾರ್ಥ ಕ್ಕೆ ಕೇಂದ್ರವು ಬಲಿಯಾಗುತ್ತಿರುವ ದ್ರಶ್ಯಗಳು ಶಿಬಿರಾರ್ಥಿಗಳಲ್ಲಿ ನಿರಾಸೆ ಮೂಡಿಸಿತು. ಮರಗಳನ್ನು ಕಡಿದು, ಗುಡ್ಡ ಅಗೆದು ಸಂಪತ್ತು ಲೂಟಿ ಮಾಡುವ ದ್ರಶ್ಯಗಳು ಕಂಡು ಬಂದವು. ಶಿಬಿರವು ಮಕ್ಕಳಲ್ಲಿ ಪರಿಸರ ಉಳಿವಿನ ಬಗ್ಗೆ ಕಾಳಜಿ ವಹಿಸಲು ಒತ್ತು ನೀಡಿತು.
ಎಸ್ ಪಿಸಿ ಯೋಜನೆಯ ಜಿಲ್ಲಾ ನೋಡಲ್ ಅಧಿಕಾರಿ, ಡಿವೈ ಎಸ್ ಪಿ ಸಿನಿ ಡೆನ್ನಿಸ್ ಶಿಬಿರವನ್ನು ಉದ್ಘಾಟಿಸಿದರು. ಅರಣ್ಯ ಸಂರಕ್ಷಣಾಧಿಕಾರಿ ಎನ್.ವಿ ಸತ್ಯನ್, ಎಸ್.ಎನ್ ರಾಜೇಶ್, ಟಿ.ಕೆ ಲೋಹಿತಾಕ್ಷನ್, ಪರಿಸರ ಹೋರಾಟಗಾರ ಪಿ.ವಿ ನಿಶಾಂತ್, ವಿ.ವಿ ರವಿ, ಶಶಿಧರ ಮೇನಕ್ಕರ ತರಗತಿ ನಡೆಸಿಕೊಟ್ಟರು. ಎಸ್.ಪಿ.ಸಿ ಸಹಾಯಕ ನೋಡಲ್ ಅಧಿಕಾರಿ ರವಿ, ರಮೇಶ್, ಪ್ರಶಾಂತ್ ಕಾಡಗಂ, ಅಧ್ಯಾಪಕರಾದ ಎ. ಎಂ ಅಬ್ದುಲ್ ಸಲಾಂ, ಪಿ.ಇಬ್ರಾಹಿಂ ಖಲೀಲ್, ಶಬಾನಾ, ಸಮೀರಾ, ಶ್ರೀರೇಖಾ, ಶಕೀರಾ, ಖಮರುನ್ನೀಸಾ, ಆಶಿತ್, ಸಾಜಿದ್, ಆಸ್ಟಿನ್ ಸಾಂಜಿರಾಜ್ ಅನಿಸಿಕೆ ವ್ಯಕ್ತಪಡಿಸಿದರು. ಎ. ಗಂಗಾಧರನ್ ಸ್ವಾಗತಿಸಿ , ಪಿ .ಶಾರದಾ ವಂದಿಸಿದರು.