ಪುತ್ತೂರು: ಬೆಂಗಳೂರಿಗೆ ತೆರಳಿದ್ದ ತೆಂಕಿಲದ ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಕುರಿತು ಪೊಲೀಸರಿಗೆ ದೂರು ನೀಡಿರುವ ಕುರಿತು ವರದಿಯಾಗಿದೆ.
ಪರ್ಲಡ್ಕ ತೆಂಕಿಲ ನಿವಾಸಿ ನಾರಾಯಣ ನಾಯ್ಕ ಅವರ ಪುತ್ರ ಮಹೇಶ್ (35ವ) ನಾಪತ್ತೆಯಾದವರು. ಮಹೇಶ್ರವರು ಕಳೆದ 15 ವರ್ಷಗಳಿಂದ ಬೆಂಗಳೂರಿನ ಟಾಟಾ ಕಂಪನಿಯಲ್ಲಿ ಉದ್ಯೋಗ ಮಾಡಿಕೊಂಡಿದ್ದು, ಈ ನಡುವೆ ಮೂರು ವರ್ಷದ ಹಿಂದೆ ವಿವಾಹವಾಗಿ ಬಳಿಕ ಹೆಂಡತಿಯೊಂದಿಗೆ ಬೆಂಗಳೂರಿಗೆ ತೆರಳಿ ಅಲ್ಲಿ ಕೆಲಸ ಮಾಡಿಕೊಂಡಿದ್ದ. ಕಳೆದ ಆರು ತಿಂಗಳ ಹಿಂದೆ ಪತ್ನಿಯೊಂದಿಗೆ ಊರಿಗೆ ಬಂದಾತ ಇಲ್ಲೇ ಮೂರು ತಿಂಗಳು ಕೆಲಸ ಮಾಡಿಕೊಂಡಿದ್ದ. ಇಲ್ಲಿ ಸರಿಯಾದ ಕೆಲಸ ಸಿಗದ ಕಾರಣ ಮತ್ತೆ ಬೆಂಗಳೂರಿಗೆ ತೆರಳಿದ್ದ ಮಹೇಶ್ ಕಳೆದ 15 ದಿನಗಳಿಂದ ತನ್ನ ಹಾಗೂ ಆತನ ಪತ್ನಿಯ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿರುವುದಾಗಿ ಮಹೇಶ್ ರವರ ತಂದೆ ನಾರಾಯಣ ನಾಯ್ಕರವರು ಪುತ್ತೂರು ನಗರ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕಾಣೆಯಾಗಿರುವ ಮಹೇಶ್ ಅವರ ಮಾಹಿತಿ ಇದ್ದಲ್ಲಿ ಜಿಲ್ಲಾ ಎಸ್ಪಿ 0824-2220503, ಇಲ್ಲವೇ ಪುತ್ತೂರು ನಗರ ಠಾಣೆಯ ಪೊಲೀಸರಿಗೆ 08251-230555 ಅಥವಾ 948080536 ಗೆ ಮಾಹಿತಿ ನೀಡುವಂತೆ ಪುತ್ತೂರು ನಗರ ಪೊಲೀಸರು ವಿನಂತಿಸಿಕೊಂಡಿದ್ದಾರೆ.