ಪುತ್ತೂರು: ಪರವಾನಿಗೆ ಇಲ್ಲದೆ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ 5 ಲಾರಿಗಳನ್ನು ಪ್ರೊಬೆಷನರಿ ಎ.ಎಸ್ಪಿ ನಾಗೇಶ್ ಡಿ.ಎಲ್ ರವರ ನೇತೃತ್ವದಲ್ಲಿ ಪುತ್ತೂರಿನ 2 ಕಡೆಗಳಲ್ಲಿ ವಶಕ್ಕೆ ಪಡೆದು ಕೊಂಡಿದ್ದು, ಚಾಲಕರನ್ನು ಬಂಧಿಸಲಾಗಿದೆ.
ಬಂಟ್ವಾಳದಿಂದ ಪುತ್ತೂರಿನ ಆಸು ಪಾಸು ಪ್ರದೇಶಗಳಿಗೆ ಪರವಾನಿಗೆ ಇಲ್ಲದೆ ಮರಳು ಸಾಗಾಟ ಮಾಡುತ್ತಿದ್ದ 5 ಲಾರಿ (ಕೆ.ಎ.19 ಡಿ 5561, ಕೆ.ಎ.19 ಎಬಿ 5328, ಕೆ.ಎ. 21 ಬಿ 3857, ಕೆ.ಎ.21 ಎ 8675, ಕೆ.ಎ.19 ಬಿ 9068)) ಗಳಲ್ಲಿ ಮೂರು ಲಾರಿಯನ್ನು ಮುರದಲ್ಲಿ ಮತ್ತು ಎರಡು ಲಾರಿಯನ್ನು ಕಬಕದಲ್ಲಿ ವಶಕ್ಕೆ ಪಡೆದು ಕೊಂಡು ಲಾರಿ ಚಾಲಕರಾದ ಪಂಜಿಕಲ್ಲಿನ ನಾಗೇಶ್, ವಿಟ್ಲ ಬಾಬನಕಟ್ಟೆಯ ವಿಶ್ವನಾಥ್, ಕುರಿಯದ ಮಲ್ಲಾರ ನಿವಾಸಿ ಬಾಲಕೃಷ್ಣ, ಬೆಳ್ಳಿಪ್ಪಾಡಿಯ ಶಿವಪ್ರಸಾದ್, ಮಂಗಿಲಪದವಿನ ರಾಕೇಶ್ರವರನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಕಾರ್ಯಾಚರಣೆಯಲ್ಲಿ ಪ್ರೊಬೆಷನರಿ ಎ.ಎಸ್ಪಿ ನಾಗೇಶ್, ಪುತ್ತೂರು ನಗರ ವೃತ್ತ ನಿರೀಕ್ಷ ಮಹೇಶ್ ಪ್ರಸಾದ್, ಎಸ್.ಐ ಒಮನ, ಸಂಚಾರ ಠಾಣಾ ಎಸ್.ಐ ವಿಠಲ ಶೆಟ್ಟಿ, ಹೆಡ್ ಕಾನ್ಸ್ಟೇಬಲ್ ರಾಧಾಕೃಷ್ಣ, ಸ್ಕರಿಯ, ಕಾನ್ಸ್ ಸ್ಟೇಬಲ್ ಗಳಾದ ಮಂಜುನಾಥ್, ಅಭಿಜಿತ್, ಎ.ಆರ್.ಎಸ್.ಐ ಉಮೇಶ್ ರಾವ್ ಭಾಗವಹಿಸಿದ್ದರು.