News Kannada
Wednesday, February 08 2023

ಕರಾವಳಿ

ಕೋಳಿ ತ್ಯಾಜ್ಯದಿಂದಾಗಿ ನದಿ ನೀರು ಕಲುಷಿತ: ಕಂಗಾಲಾಗಿರುವ ಕೃಷಿಕರು!

Photo Credit :

ಕೋಳಿ ತ್ಯಾಜ್ಯದಿಂದಾಗಿ ನದಿ ನೀರು ಕಲುಷಿತ: ಕಂಗಾಲಾಗಿರುವ ಕೃಷಿಕರು!

ಬೆಳ್ತಂಗಡಿ: ತಾಲೂಕಿನಲ್ಲಿ ಕೋಳಿ ತ್ಯಾಜ್ಯದಿಂದಾಗಿ ನದಿ ನೀರು ಕಲುಷಿತವಾಗುತ್ತಿರುವುದು ಕೃಷಿಕರನ್ನು ಕೆರೆಳಿಸಿರುವ, ಕಂಗಾಲಾಗಿಸಿರುವ  ವಿದ್ಯಮಾನ ಮ್ಯತ್ಯುಂಜಯ ನದಿ ದಡದಲ್ಲಿ ನಡೆದಿದೆ. ಕೋಳಿ ತ್ಯಾಜ್ಯ ವಿಲೇವಾರಿ ಮಾಡುವುದಕ್ಕೆ ನದಿಯನ್ನೇ ಅವಲಂಬಿಸಿರುವುದು ಯಾಕೆ ಎಂಬ ಪ್ರಶ್ನೆ ಎದ್ದಿದೆ.

ಈ ಬಾರಿ ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ನೀರಿನ ಸೆಲೆ ಕಡಿಮೆಯಾಗಿದ್ದು  ಕುಡಿಯಲು, ಕೃಷಿ ಮೂಲಕ್ಕೆ, ಜಾನುವಾರುಗಳಿಗೆ ನೀರಿನ ಕೊರತೆ ಎದುರಾಗುತ್ತಿದೆ. ಇಂತಹ ಕಠಿನ ಪರಿಸ್ಥಿತಿಯಿರುವ ಸಂದರ್ಭದಲ್ಲಿಯೂ ಮುಂಡಾಜೆ ಗ್ರಾಮ ಮತ್ತು ಚಿಬಿದ್ರೆ ಗ್ರಾಮದ ಗಡಿಭಾಗ ರಾಷ್ಟ್ರೀಯ ಹೆದ್ದಾರಿ ಸನಿಹ ಕಾಪು ರಕ್ಷಿತಾರಣ್ಯದ ಬಳಿ ಮೃತ್ಯುಂಜಯ ನದಿಗೆ ಕೋಳಿ ತ್ಯಾಜ್ಯಗಳನ್ನು ತಂದು ಸುರಿಯುತ್ತಿದ್ದಾರೆ. ಇದರಿಂದ  ನೀರು ಕಲುಷಿತಗೊಳ್ಳುತ್ತಿದ್ದು ನೀರು ಇದ್ದರೂ  ಉಪಯೋಗಿಸದಂತಹ ಪರಿಸ್ಥಿತಿ ಎದುರಾಗಿದೆ. ಬೇಸಗೆಯ ಬಿರುಬಿಸಿಲಿನ ತಾಪಕ್ಕೆ ಹಲವು ನದಿಗಳು ತನ್ನ ಹರಿವನ್ನು ಈಗಾಗಲೇ ಕಳೆದುಕೊಂಡಿವೆ.

ತಾಲೂಕಿನ ಪ್ರಮುಖ ನದಿಗಳಲ್ಲೊಂದಾಗಿರುವ ಮೃತ್ಯುಂಜಯ ನದಿಯು ಚಾರ್ಮಾಡಿಯಲ್ಲಿ ಉಗಮಗೊಂಡು ಹಲವು ಗ್ರಾಮಗಳಲ್ಲಿ ಸಂಚರಿಸುತ್ತಾ ನದಿ ಪಾತ್ರದಲ್ಲಿನ ಕೃಷಿಕರಿಗೆ, ಜನರಿಗೆ ಬಹು ಉಪಯೋಗಿಯಾಗಿದೆ. ಈ ನದಿ ಫಜಿರಡ್ಕ ಎಂಬಲ್ಲಿ ನೇತ್ರಾವತಿ ನದಿಯನ್ನು ಸಂಗಮಗೊಂಡು ನೇತ್ರಾವತಿಗೆ ಜೀವ ತುಂಬುವ ಕೆಲಸ ನಿರ್ವಹಿಸುತ್ತಿದೆ. ಬಳಿಕ ಈ ನೀರು ಧರ್ಮಸ್ಥಳ ಸ್ನಾನಘಟ್ಟವನ್ನು ತಲುಪುತ್ತದೆ.

ಈ ರೀತಿ ಕೋಳಿ ತ್ಯಾಜ್ಯಗಳನ್ನು ಗೋಣಿ ಚೀಲದಲ್ಲಿ ಮೂಟೆಕಟ್ಟಿ ಹಾಕುವುದರಿಂದ ಕೋಳಿಯ ಕೊಬ್ಬಿನಾಂಶ ನೀರಿನಲ್ಲಿ ಮಿಶ್ರಣಗೊಂಡು ನೀರು ಕಲುಷಿತವಾಗುತ್ತಿದೆ. ಗೋಣಿಯ ಮೇಲೆ ಹುಳಗಳು ಜಿನುಗುತ್ತಿದೆ. ಈ ಪರಿಸರದಲ್ಲಿ ಅರಣ್ಯ ಇಲಾಖೆಯ ನರ್ಸರಿಯೂ ಕಾರ್ಯನಿರ್ವಹಿಸುತ್ತಿದೆ. ನದಿಗೆ ಡ್ಯಾಂ ಕೂಡಾ ಇದ್ದು ಅದರ ನಿರ್ವಹಣೆಯೂ ಕೂಡಾ ನಡೆಯುತ್ತಿದೆ. ಉಳ್ಳಾಲ್ತಿ ಕಟ್ಟೆಯೂ ಇದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನದವರಿಗೆ ಮಾರ್ಗದ ಬದಿಯಲ್ಲಿಯೇ ಹಾಕಿರುವ ಕೋಳಿ ತ್ಯಾಜ್ಯ, ಕೊಳೆತ ತರಕಾರಿ ದುರ್ವಾಸನೆ ಬೀರುತ್ತಿದೆ. ಸಾಂಕ್ರಾಮಿಕ ರೋಗ ಹರಡುವ ಭೀತಿ ಜನರನ್ನು ಕಾಡುತ್ತಿದೆ.

ಹಲವು ಸಮಯದಿಂದ ಇಲ್ಲಿ ಕೋಳಿ ತ್ಯಾಜ್ಯ ವಿಲೇವಾರಿ ಮಾಡುತ್ತಿರುವವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲು ಸಾಧ್ಯವಾಗದ ಆಡಳಿತದ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂಡಾಜೆ ಹಾಗೂ ಚಾರ್ಮಾಡಿ ಗ್ರಾ. ಪಂ. ನವರು ಒಗ್ಗೂಡಿ ಜನರ ಹಿತದೃಷ್ಟಿಯಿಂದ ನೀರಿನ ಸುರಕ್ಷತೆಯ ಬಗ್ಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ. ಇಲ್ಲಿ ತ್ಯಾಜ್ಯ ಸುರಿಯುತ್ತಿರುವ ಕುರಿತು ಗ್ರಾ. ಪಂ.ಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬ ಮಾತು ಗ್ರಾಮಸ್ಥರಿಂದ ಕೇಳಿ ಬರುತ್ತಿದೆ.

ಮುಂಡಾಜೆ ಗ್ರಾ. ಪಂ. ವತಿಯಿಂದ ಈ ಪರಿಸರದಲ್ಲಿ ಕೋಳಿ ತ್ಯಾಜ್ಯ ವಿಲೇವಾರಿ ಮಾಡದಂತೆ ಎಚ್ಚರಿಕೆಯ ಫಲಕವನ್ನು ಅಳವಡಿಸಲಾಗಿದೆ. ಮುಂಡಾಜೆ ಪಂಚಾಯತ್ ವ್ಯಾಪ್ತಿಯ ಅಂಗಡಿಗಳಿಗೆ ಈಗಾಗಲೇ ನೋಟೀಸು ನೀಡಿ ಸೂಕ್ತ ರೀತಿಯಲ್ಲಿ ವಿಲೇ ಮಾಡಲು ಸೂಚನೆ ನೀಡಲಾಗಿದೆ. –  ಶಾಲಿನಿ, ಅಧ್ಯಕ್ಷರು, ಗ್ರಾ. ಪಂ. ಮುಂಡಾಜೆ

ರೋಗ ಭೀತಿ
ಮೃತ್ಯುಂಜಯ ನದಿಗೆ ಕೋಳಿ ತ್ಯಾಜ್ಯ ಹಾಕುತ್ತಿರುವುದರಿಂದ ನೀರು ಕಲುಷಿತಗೊಂಡಿದ್ದು, ಉಪಯೋಗಕ್ಕೆ ಯೋಗ್ಯವಾಗಿಲ್ಲ. ಇಲ್ಲಿ ಕೋಳಿ ತ್ಯಾಜ್ಯ ವಿಲೇ ಮಾಡುವವರ ವಿರುದ್ಧ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಂಡು ಇದರಿಂದ ಮುಕ್ತಿ ನೀಡಬೇಕಾಗಿದೆ- ಸಚಿನ್ ಭಿಡೆ, ಮುಂಡಾಜೆ

See also  ಬೆಳ್ತಂಗಡಿಯಲ್ಲಿ ವಾಹನ ಸವಾರರಿಗೆ ಕುದುರೆಗಳ ಕಾಟ

ಸಭೆಯಲ್ಲಿ ಚರ್ಚೆ

ಚಾರ್ಮಾಡಿ ಗ್ರಾ. ಪಂ. ಸಾಮಾನ್ಯ ಸಭೆಯಲ್ಲಿ ಚರ್ಚಿಸಲು ಕಾರ್ಯಸೂಚಿ ರಚಿಸಲಾಗಿದೆ. ತ್ಯಾಜ್ಯವಿಲೇ ಮಾಡದಂತೆ ಅಲ್ಲಲ್ಲಿ ಬ್ಯಾನರ್ ಗಳನ್ನು ಅಳವಡಿಸಿ ಜಾಗೃತಿ ಮೂಡಿಸಿ, ತ್ಯಾಜ್ಯ ಹಾಕುವವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುವುದು.
ಪ್ರಕಾಶ್ ಶೆಟ್ಟಿ ನೊಚ್ಚ, ಪಿಡಿಓ, ಗ್ರಾ. ಪಂ. ಚಾರ್ಮಾಡಿ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು