ಕಾಸರಗೋಡು: ಸರಕು ಸಾಮಾಗ್ರಿ ನೆಪದಲ್ಲಿ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಏಳು ಲಾರಿಗಳನ್ನು ಮಂಜೇಶ್ವರ ಪೊಲೀಸರು ವಶಪಡಿಸಿಕೊಂಡಿದ್ದು, ಏಳು ಮಂದಿ ಚಾಲಕರನ್ನು ಬಂಧಿಸಿದ್ದಾರೆ.
ಹೊಸಂಗಡಿಯಲ್ಲಿ ಲಾರಿಗಳನ್ನು ತಡೆದು ತಪಾಸಣೆ ನಡೆಸಿದ್ದಾಗ ಅಕ್ರಮ ಸಾಗಾಟ ಪತ್ತೆಯಾಗಿದೆ. ಮರಳು ತುಂಬಿಸಿ ಅದರ ಮೇಲೆ ಟರ್ಪಾಲು ಹೊದಿಸಿ ಸಾಗಾಟ ಮಾಡಲಾಗುತ್ತಿತ್ತು. ಕಲ್ಲಿಕೋಟೆ ನಿವಾಸಿ ಮೊಹಮ್ಮದ್ ಇಜಾಸ್ (21), ಉಮ್ಮರ್ ಫಾರೂಕ್ (32), ನಂಜನಗೂಡು ನ ದಶರಥ (25), ಬಂಟ್ವಾಳ ದ ಮೊಹಮ್ಮದ್ ರಫೀಕ್ (೨೫), ಮಾಣಿ ಯ ಮೊಹಮ್ಮದ್ ರಫೀಕ್ (26), ತಮಿಳುನಾಡಿನ ಪೆರಿಂಬಲ್ಲೂರು ವಿನ ಶಶಿ ಕುಮಾರ್ (39), ತಿರುಚ್ಚಿಯ ಧನಶೇಖರ (23) ಎಂಬವರನ್ನು ಬಂಧಿಸಲಾಗಿದೆ.
ಏಳು ಲಾರಿಗಳ ಪೈಕಿ ಐದು ಕರ್ನಾಟಕ ಮತ್ತು ಎರಡು ತಮಿಳುನಾಡು ನೋಂದಾವಣೆ ಲಾರಿಗಳಾಗಿವೆ.