News Kannada
Monday, February 06 2023

ಕರಾವಳಿ

ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ 9ನೇ ವರ್ಷದ ಸಾಮೂಹಿಕ ವಿವಾಹ

Photo Credit :

ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ 9ನೇ ವರ್ಷದ ಸಾಮೂಹಿಕ ವಿವಾಹ

ಬಂಟ್ವಾಳ: ಸಾಮೂಹಿಕ ವಿವಾಹಗಳನ್ನು ನಡೆಸುವುದರಿಂದ ಹೆಣ್ಣುಮಕ್ಕಳನ್ನು ಹೆತ್ತವರಿಗೆ ಮಾನಸಿಕ ಸ್ಥೈರ್ಯ ತುಂಬಿದಂತಾಗುತ್ತದೆ. ಕಳೆದ 9 ವರ್ಷಗಳಲ್ಲಿ 300 ಕ್ಕೂ ಅಧಿಕ ಜೋಡಿಗಳಿಗೆ ಮದುವೆ ಭಾಗ್ಯ ಒದಗಿಸಿದ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ನ ಕಾರ್ಯ ಅಭಿನಂದನೀಯ ಎಂದು ಖ್ಯಾತ ಚಲನಚಿತ್ರ ನಟ, ಪಡುಮಲೆ ಕುತ್ಯಾಲ ಶ್ರೀ ಮಹಾವಿಷ್ಣು ದೇವಸ್ಥಾನದ ಆಡಳಿತ ಮೊಕ್ತೇಸರ  ವಿನೋದ್ ಆಳ್ವ ಹೇಳಿದರು.

ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ (ರಿ) ಪುಂಜಾಲಕಟ್ಟೆ ಹಾಗೂ ಜೆ.ಸಿ.ಐ.ಮಡಂತ್ಯಾರು ಇವರ ಜಂಟಿ ಆಶ್ರಯದಲ್ಲಿ ಭಾನುವಾರ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ  33ನೇ ವರ್ಷದ ಸಂಭ್ರಮ ಆಚರಣೆ ಪ್ರಯುಕ್ತ ನಡೆದ 9ನೇ ವರ್ಷದ ಸಾಮೂಹಿಕ ವಿವಾಹ ಸಮಾರಂಭದ ಸಭಾಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಂಘಟನೆ ಮೂಲಕ ಸಾಮಾಜಿಕ ಸೇವೆ ಸಾಧ್ಯ, ಎಲ್ಲರ ಸಹಕಾರದಿಂದ  ಉತ್ತಮ ಸಾಮಾಜಿಕ ಕಾರ್ಯ ನಡೆಯಲು ಸಾಧ್ಯವಾಗುತ್ತದೆ  ಎಂಬುದನ್ನು ತುಂಗಪ್ಪ ಬಂಗೇರರು ಹಾಗೂ ಸ್ವ್ಸತಿಕ್ ಫ್ರೆಂಡ್ಸ್ ಕ್ಲಬ್ ತೋರಿಸಿಕೊಟ್ಟಿದೆ ಎಂದವರು ಶ್ಲಾಘನೆ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾ.ಗಣೇಶ್ ಕಾರ್ಣಿಕ್ ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ಬೇರೆ ಬೇರೆ ಕಾರಣಗಳಿಂದ ಪ್ರೀತಿ ವಿಶ್ವಾಸ, ಸಂಸ್ಕಾರ, ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ,  ದ್ವೇಷ ಮತ್ತು ಸ್ವಾರ್ಥಕ್ಕೆ ಶರಣಾಗುತ್ತಿದ್ದೇವೆ ಇದು ಅಪಾಯಕಾರಿಯಾಗಿದ್ದು, ಈ ಬಗ್ಗೆ ಜಾಗೃತಿ ಅಗತ್ಯ ಎಂದರು.

ದ.ಕ. ಸದಸ್ಯ ನಳಿನ್ ಕುಮಾರ್ ಕಟೀಲು, ಮಾಜಿ ಸಚಿವ ನಾಗರಾಜ್ ಶೆಟ್ಟಿ, ಶ್ರೀ.ಕ್ಷೆ.ಧ. ಗ್ರಾ.ಯೋಜನೆಯ ಪ್ರಾದೇಶಿಕ ನಿರ್ದೇಶಕ ಮಹಾವೀರ ಅಜ್ರಿ, ಸ್ವರ್ಣಲತಾ, ವಸಂತ ಹೆಗ್ಡೆ, ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜು ಪ್ರಾಂಶುಪಾಲ ಅಲೆಕ್ಸ್ ಐವನ್ ಸಿಕ್ವೇರ, ಬೆಳ್ತಂಗಡಿ ಬಿ.ಜೆ.ಪಿ ಅಧ್ಯಕ್ಷ ರಂಜನ್ ಗೌಡ,ಉದ್ಯಮಿ ಜಿತೇಂದ್ರ ಎಸ್.ಕೊಟ್ಟಾರಿ,ಬಿಲ್ಲವ ಮಹಾಮಂಡಲ ವಕ್ತಾರ ಹರಿಕೃಷ್ಣ ಬಂಟ್ವಾಳ,ಬಂಟ್ವಾಳ ತಾ.ಪಂ. ಸದಸ್ಯ  ರಮೇಶ್ ಕುಡುಮೇರು,ಡಾ.ಬಾಲಕೃಷ್ಣ ಶೆಟ್ಟಿ ಸುಂದರ ರಾಜ್ ಹೆಗ್ಡೆ,ರಶ್ಮಿ ಸುಂದರ್ರಾಜ್, ಹುಕುಂ ರಾಂ ಪಠೇಲ್, ತುಳುನಾಡ ರಕ್ಷಣಾ ವೇದಿಕೆ ಕೇಂದ್ರೀಯ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು,ಪುಂಜಾಲಕಟ್ಟೆ ಸಿಂಡಿಕೇಟ್  ಬ್ಯಾಂಕ್ ಮ್ಯಾನೇಜರ್ ಹರೀಶ್ ಕುಮಾರ್,ಉದ್ಯಮಿ ಹರೀಶ್ ಪೈ, ಸುಬ್ಬಣ್ಣ, ಚೆನ್ನಕೇಶವ, ದ.ಕ ಜಿಲ್ಲಾ ಪಂ. ಸದಸ್ಯ ಹಾಗೂ ಕ್ಲಬ್ ಸ್ಥಾಪನಾಧ್ಯಕ್ಷ ಯಂ.ತುಂಗಪ್ಪ ಬಂಗೇರ,ಕ್ಲಬ್ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಮಡಂತ್ಯಾರು ಜೆ.ಸಿ.ಐ. ಅಧ್ಯಕ್ಷ ರಾಜೇಶ್ ಪಿ.ಪುಂಜಾಲಕಟ್ಟೆ, ಗೌರವಾಧ್ಯಕ್ಷ ಅಬ್ದುಲ್ಲಾ ಪಿ.,ಕಾರ್ಯದರ್ಶಿ ಜಯರಾಜ್ ಅತ್ತಾಜೆ ಮತ್ತಿತರರು ಉಪಸ್ಥಿತರಿದ್ದರು.
ಪಿ.ಎನ್ ಪ್ರಭಾಕರ ಸ್ವಾಗತಿಸಿದರು.ರಾಮಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಇದೇ ಸಂದರ್ಭ ಸಂದರ್ಭದಲ್ಲಿ ಸಭಾ ಕಾರ್ಯಕ್ರಮದಲ್ಲಿ ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ ಪ್ರದಾನ ಹಾಗೂ ಸ್ವಸ್ತಿಕ್ ಸಂಭ್ರಮ ಪುರಸ್ಕಾರ ಕಾರ್ಯಕ್ರಮ ನಡೆಯಿತು.
ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ : ಡಾ.ರಾಜಶೇಖರ್ ಕೋಟ್ಯಾನ್-(ಚಲನಚಿತ್ರ ರಂಗ),ಸಂಜಯ್ ಕುಮಾರ್ ಶೆಟ್ಟಿ ಗೋಣಿಬೀಡು-(ಯಕ್ಷಗಾನ ಕ್ಷೇತ್ರ), ವಿನಾಯಕ ರಾವ್-(ಸಮಾಜ ಸೇವೆ ), ರಮೇಶ್ ಬಾಯಾರು-(ಶಿಕ್ಷಣ ಕ್ಷೇತ್ರ),ರಮೇಶ್ ಕಲ್ಲಡ್ಕ-(ಕಲಾ ಕ್ಷೇತ್ರ)
ಸ್ವಸ್ತಿಕ್ ಸಂಭ್ರಮ ಪುರಸ್ಕಾರ ಪ್ರಶಸ್ತಿ: ಕಿಶೋರ್ ಪೆರಾಜೆ-(ಪತ್ರಿಕೋದ್ಯಮ),ಸಂಜೀವ ಶೆಟ್ಟಿ ಮುಗೆರೋಡಿ-(ಕ್ರೀಡಾ ಕ್ಷೇತ್ರ),ಶೇಖರ ನಾರಾವಿ-(ಸಮಾಜಸೇವೆ),ಕೆ.ಧರ್ಮಪಾಲ-(ಸರಕಾರಿ ಸೇವೆ),ಕು.ಶೃತಿ ದಾಸ್-(ಬಹುಮುಖ ಪ್ರತಿಭೆ), ಕು.ಶಕಿತಾ (ಬಹುಮುಖ ಪ್ರತಿಭೆ)
ಅತ್ಯುತ್ತಮ ಯುವ ಸಂಘಟನೆ ಸಮಾಜ ಸೇವೆಗಾಗಿ ಶ್ರೀ ಶಾರದಾಂಭ ಭಜನಾ ಮಂಡಳಿ ಕುಕ್ಕೇಡಿ ಬುಳೆಕ್ಕರ
ಅದ್ದೂರಿ ದಿಬ್ಬಣ:
ಬಸವನಗುಡಿ ಶ್ರೀ ಬಸವೇಶ್ವರ ದೇವಾಲಯದ ವಠಾರದಿಂದ ವಧು-ವರರನ್ನು ವೈಭವಪೂರ್ಣ ಮೆರವಣಿಯಲ್ಲಿ ವಿವಾಹ ಮಂಟಪಕ್ಕೆ ಕರೆತರಲಾಯಿತು. ಗೊಂಬೆ ಕುಣಿತ,ವಿವಿಧ ವಾದ್ಯ ಗೋಷ್ಠಿ, ವಿದ್ಯಾಥರ್ಿಗಳ ಚೆಂಡೆ ವಾದನ ಮೆರವಣಿಗೆ ವಿಶೇಷ ಮೆರುಗು ನೀಡಿತು. ವೇದ ಮೂರ್ತಿ ಶ್ರೀ ಕೃಷ್ಣ ಭಟ್ ಗುರುವಾಯನಕೆರೆ ಮತ್ತು ಆರ್ಚಕ ವೃಂದದ ಮಂತ್ರ ಘೋಷಗಳೊಂದಿಗೆ ನೆರೆದ ಬಂಧು-ಭಗಿನಿಯರ ಶುಭಾಶೀರ್ವಾದದೊಂದಿಗೆ 13 ಜೋಡಿ ವಧು-ವರರು ಹಸೆಮಣೆಯನ್ನೇರಿ ಗೃಹಸ್ಥಾಶ್ರಮದ ದೀಕ್ಷೆಯನ್ನು ಪಡೆದರು.

See also  'ಮೋದಿಗೆ ಹಾಕಿದ ಮತವೇ ಉಡುಗೊರೆ': ಮದುವೆಯ ಆಮಂತ್ರಣ ವೈರಲ್

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು