News Kannada
Monday, February 06 2023

ಕರಾವಳಿ

ತಪ್ಪು ಮಾಹಿತಿ ನೀಡಿದರೆ, ಮಧ್ಯಸ್ಥಿಕೆ ವಹಿಸಿದರೆ ಕ್ರಿಮಿನಲ್ ಕೇಸು: ತಹಶೀಲ್ಧಾರ್ ಎಚ್ಚರಿಕೆ

Photo Credit :

ತಪ್ಪು ಮಾಹಿತಿ ನೀಡಿದರೆ, ಮಧ್ಯಸ್ಥಿಕೆ ವಹಿಸಿದರೆ ಕ್ರಿಮಿನಲ್ ಕೇಸು: ತಹಶೀಲ್ಧಾರ್ ಎಚ್ಚರಿಕೆ

ಕಾರ್ಕಳ: ಹುಲಿ ಯೋಜನೆ ಮತ್ತು ಕಸ್ತೂರಿ ರಂಗನ್ ವರದಿಯ ಅನುಷ್ಠಾನದ ಕುರಿತು ಸರ್ಕಾರದಿಂದ ಈ ಕ್ಷಣದವರೆಗೆ ಯಾವುದೇ ಅಧಿಸೂಚನೆ ಬಂದಿಲ್ಲ, ಕಸ್ತೂರಿರಂಗನ್ ವರದಿಯು ಪರಿಸರ ಮತ್ತು ಪಶ್ಚಿಮಘಟ್ಟದ ಸಂರಕ್ಷಣೆಗೆ ತಜ್ಞರ ಸಮಿತಿಯು ಸರ್ಕಾರಕ್ಕೆ ನೀಡಿದ ವರದಿ, ಇದರಿಂದ ಜನಜೀವನಕ್ಕೆ ಯಾವುದೇ ತೊಂದರೆ ಇಲ್ಲ, ಜನ ಭಯ ಪಡುವ ಅಗತ್ಯ ಇಲ್ಲ, ಜನ ಬಯಸಿದರೆ ಪುರ್ನವಸತಿ ನೀಡಿ ಪರಿಹಾರ ನೀಡುವ ಯೋಜನೆ ಸರ್ಕಾರ ಮಾಡುತ್ತಿದೆ, ಆದರೆ ಜನತೆಗೆ ತಪ್ಪು ಮಾಹಿತಿ ನೀಡಿ, ಪರಿಹಾರ ನೀಡುತ್ತೇವೆ ಎಂದು ಮಧ್ಯಸ್ಥಿಕೆ ವಹಿಸಿ ಜನರಿಗೆ ಅನ್ಯಾಯ ಮಾಡುವುದು ಗಮನಕ್ಕೆ ಬಂದರೆ ಅಂತವರ ಮೇಲೆ ಕ್ರೀಮಿನಲ್ ಪ್ರಕರಣ ದಾಖಲು ಮಾಡಲಾಗುವುದು ಎಂದು ಕಾರ್ಕಳ ತಹಶೀಲ್ಧಾರ್ ಟಿ.ಜೆ.ಗುರುಪ್ರಸಾದ್ ಎಚ್ಚರಿಕೆ ನೀಡಿದರು.

ಅವರು ಮುಟ್ಲುಪಾಡಿ ಅರ್ಧನಾರೀಶ್ವರ ದೇವಸ್ಥಾನದಲ್ಲಿ ಮಂಗಳವಾರ ನಡೆದ ಕಸ್ತೂರಿರಂಗನ್ ವರದಿ ಅನುಷ್ಠಾನ ಮತ್ತು ಪುರ್ನವಸತಿ ಕುರಿತ ಮಾಹಿತಿ ಕಾರ್ಯಕ್ರಮದಲ್ಲಿ ಗ್ರಾಮಸ್ಥರ ಪರವಾಗಿ ಅಹವಾಲು ಸಲ್ಲಿಸಿ ಮಾತನಾಡಿದರು. ಪುರ್ನವಸತಿ, ಒಕ್ಕಲೆಬ್ಬಿಸುವ ಪ್ರಕ್ರಿಯೆಯನ್ನು ಸರ್ಕಾರ ಗೌಪ್ಯವಾಗಿ ಮಾಡುವುದಿಲ್ಲ, ತಪ್ಪು ಮಾಹಿತಿ ನೀಡಿ ಯೋಜನೆ ಅನುಷ್ಠಾನ ಮಾಡುವ ಕೆಲಸ ಕೂಡ ಸರ್ಕಾರದ ಮುಂದಿಲ್ಲ ಎಂದು ತಹಶೀಲ್ಧಾರ್ ಸ್ಪಷ್ಟಪಡಿಸಿದರು.

ಕಸ್ತೂರಿರಂಗನ್ ವರದಿಯ ಅನುಷ್ಠಾನದಿಂದ ನಮಗೆ ಭಯ ಹುಟ್ಟಿದೆ. ಈಗಾಗಲೇ ಮುಟ್ಲುಪಾಡಿಯಲ್ಲಿ 2 ಕುಟುಂಬಗಳು ಪುರ್ನವಸತಿ ಯೋಜನೆಯಡಿ ಪರಿಹಾರ ಪಡೆದು ಬೇರೆ ಊರಿಗೆ ಹೋಗಿದೆ. ಇಲ್ಲಿ ಇದ್ದವರ ಗತಿ ಏನು, ಇಲ್ಲಿ ಇರುವುದಾದರೇ ಹೇಗೆ, ನಮ್ಮನ್ನು ನಿಧಾನವಾಗಿ ಸಾಯುವ ವಿಷ ಹಾಕಿ ಕೊಲ್ಲಬೇಡಿ,( ಸ್ಲೋ ಪಾಯ್ಸನ್) ಇಲ್ಲೇ ಇರಬೇಕೆಂದಿದ್ದೀವೆ. ಹೋಗುವುದಾದರೇ ಎಲ್ಲರೂ ಒಟ್ಟಿಗೆ ಹೋಗುತ್ತೇವೆ, ದುಪ್ಪಟ್ಟು ಪರಿಹಾರ ನೀಡಿ ಎಂದು ಕಸ್ತೂರಿರಂಗನ್ ವರದಿ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ಕಾರ್ಕಳ ಎಪಿಎಂಸಿ ಸದಸ್ಯ ಮುಟ್ಲುಪಾಡಿ ಸತೀಶ್ ಶೆಟ್ಟಿ ತಾಲ್ಲೂಕು ಆಡಳಿತಕ್ಕೆ ಒಕ್ಕೋರಲ ಮನವಿ ಮಾಡಿದರು. ಇದಕ್ಕೆ ಸ್ವಷ್ಟನೆ ತಹಶೀಲ್ದಾರ್ ಕಾನೂನು ರೀತಿಯಲ್ಲಿ ಕ್ರಮ ಜರಗಿಸುತ್ತೇವೆ ಎಂದರು.

ಅರಣ್ಯ ಇಲಾಖೆಯ ಎ.ಎ. ಗೋಪಾಲ್, ಕೃಷಿ ಇಲಾಖೆಯ ರೂಪಾ ಮಾಡ, ತೋಟಗಾರಿಗೆಯ ಶ್ರೀನಿವಾಸ್, ಸಮಾಜ ಕಲ್ಯಾಣ ಇಲಾಖೆ ವಿಜಯ ಕುಮಾರ್ ಪುನರ್ ವಸತಿ ಯೋಜನೆಯ ಮಾಹಿತಿ ನೀಡಿದರು. ಗ್ರಾಮಸ್ಥರಾದ ಸಮೃದ್ದಿ ಪ್ರಕಾಶ್ ಶೆಟ್ಟಿ, ರಾಜೇಶ ಮಡಿವಾಳ್, ಸುದೀಪ ಅಜಿಲ, ಸುಂದರ ಶೆಟ್ಟಿ ಮತ್ತಿತರರು ವಿವಿಧ ಸಮಸ್ಯೆಗಳನ್ನು ಅಧಿಕಾರಿಗಳ ಮುಂದಿಟ್ಟರು. ಸಭೆಯಲ್ಲಿ ಕಂದಾಯ ನೀರಿಕ್ಷಕ ಮಂಜುನಾಥ ನಾಯಕ್, ಜಿಲ್ಲಾ ಪಂಚಾಯಿತಿ ಸದಸ್ಯೆ ಜ್ಯೋತಿ ಹರೀಶ ಪೂಜಾರಿ, ವರಂಗ ಪಂಚಾಯಿತಿ ಅಧ್ಯಕ್ಷ ಸುರೇಂದ್ರ ಶೆಟ್ಟಿ, ಸದಸ್ಯ ದಯಾನಂದ ಶೆಟ್ಟಿ, ದೇವಸ್ಥಾನದ ಮೋಕ್ತೇಸರ ಸುದೀಪ ಅಜಿಲ, ಮಾಳದ ಹರೀಶ್ಚಂದ್ರ ತೆಂಡೂಲ್ಕರ್ ಮತ್ತಿತರರು ಭಾಗವಹಿಸಿದ್ದರು. ಒಕ್ಕಲೆಬ್ಬಿಸುವುದಾದರೇ ಎಲ್ಲರನ್ನೂ ಒಟ್ಟಿಗೆ ಎಬ್ಬಿಸಿ ದುಪ್ಪಟ್ಟು ಪರಿಹಾರ ನೀಡಿ, ಇಲ್ಲವಾದರೇ ಸಕಲ ರೀತಿಯಲ್ಲಿ ಊರಿನ ಅಭಿವೃದ್ದಿ ಮಾಡಿ ಬದುಕಲು ಬಿಡಿ ಎಂದು ಗ್ರಾಮಸ್ಥರು ಒತ್ತಾಯಿಸಿದರು.
 

See also  ಮೊಬೈಲ್ ಟವರಿನ ಬುಡದಲ್ಲಿ ಬೆಂಕಿ:ಆತಂಕ ಸೃಷ್ಠಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು