ಕಾರ್ಕಳ: ಕಾರ್ಕಳ ಪುರಸಭೆಯು ಹೊಸ ಇತಿಹಾಸ ದಾಖಲಿಸಿಕೊಂಡಿದೆ. ಇಂದಿರಾ ಗಾಂಧಿ ವಾಣಿಜ್ಯ ಸಂಕೀರ್ಣದ ಹಾಗೂ ಪುಟ್ಫಾತ್ ವ್ಯಾಪಾರಸ್ಥರಿಂದ ಪ್ರತಿ ದಿನ ಸುಂಕ ವಸೂಲಿ ಟೆಂಡರ್ ಕರೆಯಲಾಗಿದ್ದು, ಗುತ್ತಿಗೆದಾರರ ಮೋಹನ್ ಚಂದ್ರ 16,20,000ರೂ.ಗೆ ಬಿಡ್ ವಹಿಸಿಕೊಂಡಿದ್ದಾರೆ. ಶೇ.15 ಸೇವಾಶುಲ್ಕ 2,43,000 ಸೇರಿದಂತೆ ಒಟ್ಟು 18,63,000ರೂ.ಅನ್ನು ಏಕಘಂಟಿನ ಮೊತ್ತವನ್ನು ಪುರಸಭೆಗೆ ಪಾವತಿಸಬೇಕಾಗಿದೆ. ಅದಕ್ಕೆ ಒಂದು ವಾರದ ಕಾಲಾವಕಾಶವನ್ನು ನೀಡಲಾಗಿದೆ.
ಕಳೆದ ವರ್ಷಾವಧಿಯಲ್ಲಿ ಇದೇ ಟೆಂಡರ್ನ್ನು ಗುತ್ತಿಗೆದಾರರು 10,01,000ರೂ. ಬಿಡ್ ನಲ್ಲಿ ಪಡೆದುಕೊಂಡಿದ್ದು, ಶೇ.15ರಷ್ಟು ಸೇವಾ ಶುಲ್ಕ ಸೇರಿದಂತೆ ಒಟ್ಟು 11,51,000ರೂ.ಗೆ ಏಲಂ ಆಗಿತ್ತು. ಕಳೆದ ವರ್ಷಕ್ಕಿಂತ ಈ ವರ್ಷ 7,12,000ರೂ. ಹೆಚ್ಚಳ ಆದಾಯ ಪುರಸಭೆಗೆ ದೊರೆತಂತಾಗಿದೆ.
ಪುರಸಭೆಗೆ ಇದರಿಂದ ಹೆಚ್ಚಿನ ಆದಾಯ ಬಂದಿದೆಯಾದರೂ ಅದರ ಹೊರೆಯು ಇಂದಿರಾಗಾಂಧಿ ವಾಣಿಜ್ಯ ಸಂಕೀರ್ಣ ವ್ಯಾಪಾರಸ್ಥರು ಹಾಗೂ ಬೀದಿ, ಫುಟ್ಪಾತ್ ವ್ಯಾಪಾರಿಗಳ ಮೇಲೆ ಬೀಳುವುದರಿಂದ ಮುಂದಿನ ದಿನಗಳಲ್ಲಿ ಯಾವೆಲ್ಲ ಬೆಳವಣಿಗೆಗೆ ಪೀಠಿಕೆಯಾಗಲಿದೆ ಎಂಬುವುದು ಕಾಡು ನೋಡಬೇಕಾಷ್ಟೇ.
ಬಿಗು ಪೊಲೀಸ್ ಪಹರೆ..
ಕಳೆದ ವರ್ಷಾವಧಿಯಲ್ಲಿ ನಡೆದಿರುವ ಕೆಲವೊಂದು ಬೆಳವಣಿಗೆಯಿಂದಾಗಿ ಪ್ರಸಕ್ತ ವರ್ಷಾವಧಿಯಲ್ಲಿ ಏಲಂ ಪ್ರಕ್ರಿಯೆ ನಡೆದಾಗ ಸ್ಥಳದಲ್ಲಿ ಪೊಲೀಸರು ಹಾಜರಾಗಿರುವುದು ಎದ್ದುಕಂಡು ಬಂದಿತ್ತು.
ಷರತ್ತುಗಳೇನು..?
* ಬಿಡ್ ನಲ್ಲಿ ಭಾಗವಹಿಸುವಾತ ಆರಂಭದಲ್ಲಿ 2,75,000ರೂ. ಇಎಂಡಿ ಮೊತ್ತ ಮುಂಗಡ ಪಾವತಿಸಬೇಕು.
* ಬಿಡ್ ನಲ್ಲಿ ಗುತ್ತಿಗೆ ವಹಿಸಿಕೊಂಡಾತ ಏಲಂಗೊಂಡ ಮೊತ್ತವನ್ನು ಒಂದು ವಾರದೊಳಗೆ ಪುರಸಭೆ ಪಾವತಿಸಿದ ಬಳಿಕ ಆತನಿಗೆ ಕಾರ್ಯಾದೇಶ ನೀಡಲಾಗುವುದು.
* ಷರತ್ತಿನನ್ವಯ ಮೊತ್ತವನ್ನು ಮುಂಚಿತವಾಗಿ ಪಾವತಿಸಲು ಬಿಡ್ದಾರ ವಿಫಲರಾದಲ್ಲಿ ಇಎಂಡಿ ಮೊತ್ತ ಮುಟ್ಟುಗೋಲು ಹಾಕಲಾಗುವುದು.
ಪುರಸಭೆ ಉಪಾಧ್ಯಕ್ಷ ಗಿರಿಧರ್ ನಾಯಕ್, ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಷಯ್ ರಾವ್, ಸದಸ್ಯರಾದ ಅಶ್ಪಕ್ ಅಹ್ಮದ್, ಮೊಹಮ್ಮದ್ ಶರೀಫ್, ವಿವೇಕಾನಂದ ಶೆಣೈ, ಯೋಗೀಶ್ ದೇವಾಡಿಗ, ಮುಖ್ಯಾಧಿಕಾರಿ ಮೇಬಲ್ ಡಿಸೋಜಾ ಉಪಸ್ಥಿತರಿದ್ದರು.