ಕಾರ್ಕಳ: ಕುಕ್ಕುಂದೂರು ಅಯ್ಯಪ್ಪನಗರ ಕೋಡೇಲ್ ಡೀಮ್ಡ್ ಫಾರೆಸ್ಟ್ ನಲ್ಲಿ ತಲೆ ಎತ್ತಿರುವ ಅಕ್ರಮ ಗಣಿಗಾರಿಕೆಯ ಪರಿಸರದಲ್ಲಿ ವಾಸವಾಗಿರುವ ದಲಿತ ಕುಟುಂಬಗಳು ಕುಡಿಯುವ ನೀರಿನ ತಾತ್ವಾರ ಎದುರಿಸುತ್ತಿವೆ.
ಒಂದುವರೆ ಕಿ.ಮೀ ದೂರದ ಖಾಸಗಿ ಒಡೆತನದಲ್ಲಿ ಇರುವ ಬಾವಿಯ ನೀರೆ ಅವರಿಗೆ ಆಸರೆಯಾಗಿದೆ. ಮಾಸಿದ ಬಟ್ಟೆಯಲ್ಲಿ ಕಾಲ ಕಳೆಯುವ ಅವರಿಗೆ ವಾರಕ್ಕೊಮ್ಮೆ ಸ್ನಾನಭಾಗ್ಯ. ಇಂತಹ ದುಸ್ಥಿತಿಯ ಬದುಕು ನಿರ್ವಹಿಸುತ್ತಿದ್ದರೂ ಅವರತ್ತ ಜನಪ್ರತಿನಿಧಿಗಳಾಗಲಿ, ಇಲಾಖಾಧಿಕಾರಿಗಳು ಕಣ್ಣು ಹಾಯಿಸುತ್ತಿಲ್ಲ ಎಂಬ ಆರೋಪ ವ್ಯಾಪಕವಾಗಿ ಕೇಳಿ ಬರುತ್ತಿದೆ.
ಮೂಲತಃ ತಮಿಳಿಗರಾಗಿದ್ದು, 2 ದಶಕ್ಕೂ ಮಿಕ್ಕಿ ಅವರೆಲ್ಲರೂ ಅಯ್ಯಪ್ಪ ನಗರದ ಕೋಡೇಲ್ ಪರಿಸರದಲ್ಲಿ ಸರಕಾರಿ ಜಾಗದಲ್ಲಿ ಮನೆ ಕಟ್ಟಿ ಬದುಕು ನಿರ್ವಹಿಸುತ್ತಾ ಬಂದಿದ್ದಾರೆ. ಪ್ರಸ್ತುತ ದಿನಗಳಲ್ಲಿ ಆ ಮನೆಗಳಿಗೆ ಹಕ್ಕು ಪತ್ರ ಸಿಕ್ಕಿದೆ. ಮನೆಗೆ ಡೋರ್ ನಂಬ್ರ ಸಿಕ್ಕಿಗೆ, ಮತದಾನದ ಹಕ್ಕು ದೊರೆತಿದೆ. ಮೂಲಸೌಕರ್ಯಗಳಲ್ಲಿ ಒಂದಾದ ಕುಡಿಯುವ ನೀರಿನ ಸೌಲಭ್ಯ ಭಾಗ್ಯ ಇನ್ನು ಅವರ ಪಾಲಿಗೆ ಒದಗಿ ಬಂದಿಲ್ಲ.
ಪರಸರದಲ್ಲಿ ಮಾನವನಿಂದ ನಿರ್ಮಾಣಗೊಂಡಿದ್ದ ಕರಿಕಲ್ಲಿನ ಕೋರೆಯ ಹೊಂಡದಲ್ಲಿ 1.40 ಲಕ್ಷ ರೂ.ವೆಚ್ಚದಲ್ಲಿ ಸಿಮೆಂಟ್ರಿಂಗ್ ಉಪಯೋಗಿಸಿ ಬಾವಿಯೊಂದನ್ನು ನಿರ್ಮಿಸಲಾಗಿತ್ತು. ಅದರಲ್ಲಿ ಡಿಸೆಂಬರ್ ತಿಂಗಳ ಅಂತ್ಯದ ವರೆಗೆ ನೀರು ಕಂಡು ಬರುತ್ತಿದ್ದು, ಆ ನೀರಿನ್ನೇ ದಿನಬಳಕೆಗೆ ಉಪಯೋಗಿಸುತ್ತಿದ್ದರು.
ಬಯಲೇ ಶೌಚಾಲಯ
ನೀರಿನ ತಾತ್ವಾರ ಎದುರುಗೊಂಡಿರುವ ಹಿನ್ನಲೆಯಲ್ಲಿ ಸುಮಾರು 15 ಕುಟುಂಬದ ಸದಸ್ಯರು ದೇಹಭಾದೆ ತೀರಿಸಿಕೊಳ್ಳಲು ಬಯಲು ಶೌಚಾಲಯವನ್ನೇ ಅವಲಂಬಿಸಿದ್ದಾರೆ. ಪರಿಣಾಮವಾಗಿ ಪರಿಸರದಲ್ಲಿ ಗಬ್ಬುನಾತ ಬೀರಲು ಕಾರಣವಾಗಿದೆ. ಸಾಂಕ್ರಾಮಿಕ ರೋಗಕ್ಕೆ ಹರಡಲು ಕಾರಣವಾಗಿದೆ. ಮಳೆಗಾಲ ಎದುರಾದ ಸಂದರ್ಭದಲ್ಲಿ ಸಾಂಕ್ರಮಿಕ ರೋಗ ಇದೇ ಪ್ರದೇಶ ಜನರು ತುತ್ತಾಗುತ್ತಾರುವುದು ಗಮನಾರ್ಹವಾಗಿದೆ.
ವಾರಕ್ಕೊಮ್ಮೆ ಸ್ನಾನ
ಕುಡಿಯಲು ನೀರೇ ಇಲ್ಲದ ಸಮಸ್ಸೆ ಎದುರಿಸುತ್ತಿರುವ ಅಲ್ಲಿನ ನಾಗರಿಕರು ಮಾಸಿದ ಬಟ್ಟೆಯನ್ನೇ ದಿನನಿತ್ಯ ಬಳಸುತ್ತಾ, ವಾರಕ್ಕೊಮ್ಮೆ ಸ್ನಾನ ಮಾಡುತ್ತಿದ್ದಾರಂತೆ ಇಂತಹ ಅನುಭವನ್ನು ಸ್ಥಳೀಯ ಯುವಕ ಶರವಣ್ ಹಂಚಿಕೊಂಡಿದ್ದಾರೆ.
ಗ್ರಾಮ ಪಂಚಾಯತ್ ಗೆ ಮನವಿ: ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಅಣ್ಣಪ್ಪ ನಕ್ರೆ, ರಮೇಶ್ ಪೆರ್ವಾಜೆ ಇವರ ನೇತೃತ್ವದಲ್ಲಿ ಸ್ಥಳೀಯ ನಿವಾಸಿಗಳು ಕುಕ್ಕೂಂದೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮನಾ ರಾವ್, ಗ್ರಾಮಾಭಿವೃದ್ಧಿ ಅಧಿಕಾರಿ ಸುಧಾಕರ ಶೆಟ್ಟಿ ಅವರಿಗೆ ಮನವಿ ಸಲ್ಲಿಸಿದ್ದಾರೆ. ಸ್ಥಳೀಯ ಕುಡಿಯುವ ನೀರಿನ ತಾತ್ವಾರದ ಬಗ್ಗೆ ಗ್ರಾಮ ಸಭೆಯಲ್ಲಿ ಪ್ರಸ್ತಾಪ ಮುಂದಿಟ್ಟರೂ ಇದುವರೆಗೆ ಯಾವುದೇ ಸ್ವಂದನೆ ಸಿಗಲಿಲ್ಲ, ನಾಗರಿಕರ ಮೂಲಸೌಕರ್ಯಗಳಲ್ಲಿ ಒಂದಾಗ ಕುಡಿಯುವ ನೀರನ್ನು ಒದಗಿಸುವಂತೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ನೀರಿನ ಸಮಸ್ಸೆಯಿಂದ ಬಯಲಾಯಿತು ಡ್ರೀಮ್ಡ್ ಫಾರೆಸ್ಟ್ ನಲ್ಲಿ ಗಣಿಗಾರಿಕೆ!
ಕುಡಿಯುವ ನೀರಿನ ಸಮಸ್ಸೆ ಕುರಿತು ಸ್ಥಳೀಯ ನಾಗರಿಕರು ಮಾಧ್ಯಮಗಾರರಿಗೂ ದೂರು ಸಲ್ಲಿಸಿದ್ದರು. ಆ ಕುರಿತು ಮಾಹಿತಿ ಸಂಗ್ರಹಿಸಲು ಘಟನಾ ಸ್ಥಳಕ್ಕೆ ವರದಿಗಾರರ ತಂಡ ಭೇಟಿ ನೀಡಿದರೆ ಪಕ್ಕದಲ್ಲಿ ಇರುವ ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯಲ್ಲಿ ಎಗ್ಗಿಲ್ಲದೇ ಕರಿಕಲ್ಲಿನ ಗಣಿಗಾರಿಕೆ ಎಗ್ಗಿಲ್ಲದೇ ನಡೆಯುತ್ತಿತ್ತು. ಕುಡಿಯುವ ನೀರಿನ ತಾತ್ವಾರ ಎದುರಿಸುತ್ತಿರುವ ಮಂದಿ ಅದೇ ಗಣಿಗಾರಿಕೆಯಲ್ಲಿ ದಿನಗೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಎರಡು ಜೆಸಿಬಿ, ನಾಲ್ಕು ಟಿಪ್ಪರ್, ಎರಡು ಲಾರಿ, ಒಂದು ಟೆಂಪೋ ಅಲ್ಲಿತ್ತು.
ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯಲ್ಲಿ ಮನೆ ನಿರ್ಮಾಣಕ್ಕೆ ಸಾಧ್ಯವಾಗದೇ ಇರುವ ಪ್ರಸಕ್ತ ದಿನಗಳಲ್ಲಿ ಗಣಿಗಾರಿಕೆ ನಡೆಯುತ್ತಿರುವಾಗ ಕಂದಾಯ ಇಲಾಖೆ ಮತ್ತು ಗಣಿಗಾರಿಕೆ ಇಲಾಖೆಯವರು ದಿವ್ಯಮೌನಕ್ಕೆ ಶರಣಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.