News Kannada
Tuesday, November 29 2022

ಕರಾವಳಿ

ತಪಾಸಣೆ ಇಲ್ಲದೆ ಹೊರರಾಜ್ಯಗಳಿಂದ ಬಾಟ್ಲಿ ನೀರು ಮಾರಾಟ! - 1 min read

Photo Credit :

ತಪಾಸಣೆ ಇಲ್ಲದೆ ಹೊರರಾಜ್ಯಗಳಿಂದ ಬಾಟ್ಲಿ ನೀರು ಮಾರಾಟ!

ಕಾಸರಗೋಡು : ಬೇಸಿಗೆ ತೀವ್ರಗೊಳ್ಳುತ್ತಿದ್ದಂತೆ  ನೀರಿನ ಬಳಕೆ ಹೆಚ್ಚುತ್ತಿದೆ. ಈ ಹಿನ್ನಲೆಯಲ್ಲಿ ಜಿಲ್ಲೆಗೆ  ಹೊರರಾಜ್ಯಗಳಿಂದ ಬಾಟ್ಲಿ ನೀರು  ಹರಿದು ಬರುತ್ತಿದೆ. ಪ್ರಮುಖವಾಗಿ ತಮಿಳುನಾಡಿನಿಂದ ಬಿಸ್ಲೇರಿ ನೀರು ಮಾರುಕಟ್ಟೆಗೆ ಭಾರೀ ಪ್ರಮಾಣದಲ್ಲಿ ಲಗ್ಗೆಯಿಡುತ್ತಿದ್ದು , ಆದರೆ ಯಾವುದೇ ತಪಾಸಣೆ ಇಲ್ಲದೆ ಬಾಟ್ಲಿ ನೀರು ಜಿಲ್ಲೆಗೆ  ಹರಿದು ಬರುತ್ತಿದೆ.


ಆರೋಗ್ಯ ಇಲಾಖೆ ಈ ಬಗ್ಗೆ ನಿರ್ಲಕ್ಷ ವಹಿಸಿದೆ.  ಬಾಟ್ಲಿ ನೀರು ಎಷ್ಟು ಶುದ್ಧತೆ ಹೊಂದಿದೆ ಎಂಬುದುದನ್ನು ಪರಿಶೀಲಿಸಲು ವ್ಯವಸ್ಥೆ ಗಳಿಲ್ಲ . ಮಾರುಕಟ್ಟೆಗಳಲ್ಲಿ ಲಭಿಸುವ ಬಾಟ್ಲಿ ನೀರು ದಾಹ ತೀರಿಸಲು ಬಳಕೆ ಮಾಡುತ್ತಾರೆ. ಇದೇ ರೀತಿ ಹಲವಾರು ಕಂಪೆನಿಗಳ ಕುಡಿಯುವ  ನೀರು ಲಭಿಸುತ್ತಿದೆ. 300  ಮಿಲ್ಲಿಯ  ಬಾಟಲಿಗಳಲ್ಲಿ ಕುಡಿಯುವ ನೀರು  ಅಂಗಡಿಗಳಲ್ಲಿ  ಸುಲಭವಾಗಿ ಲಭಿಸುತ್ತಿದೆ. ಪ್ರಮುಖವಾಗಿ ವಿವಾಹ  ಹಾಗೂ ಇತರ ಶುಭ ಸಮಾರಂಭಗಳಿಗೆ ಬಾಟಲಿ ನೀರು ಸರಬರಾಜುಗುತ್ತಿದ್ದು , ಈ ಬಾಟಲಿಗಳಲ್ಲಿ ಕಂಪೆನಿ ಹೆಸರು ಬಿಟ್ಟು ವಿಳಾಸ ಹಾಗೂ ಇನ್ನಿತರ ಮಾಹಿತಿಗಳಿಲ್ಲ.  ಪ್ರಮುಖವಾಗಿ ಕಂಪೆನಿ ಹೆಸರು , ನೋಂದಾವಣೆ , ನೀರು ತುಂಬಿಸಿದ  ದಿನ , ಕಾಲಾವಧಿ ಮೊದಲಾದವು  ಉಲ್ಲೇಖಿಸಬೇಕಿದೆ. ಆದರೆ ಯಾವುದೇ  ಸ್ಪಷ್ಟ ಮಾಹಿತಿ ಬಾಟಲಿಗಳಲ್ಲಿ ನಮೂದಿಸಿಲ್ಲ.

ತಮಿಳುನಾಡಿನಿಂದ  ಸರಬರಾಜು ಆಗುತ್ತಿದೆ. ಆದರೆ ಇದು ಯಾವಾಗ  ತುಂಬಿಸಿದ್ದು ಎಂಬ ಬಗ್ಗೆ  ಮಾಹಿತಿ ಇಲ್ಲದಿರುವುದು  ಗಂಭೀರ ವಿಷಯವಾಗಿದೆ.  ಒಂದು ಬಾಟಲಿ ಮಾರಾಟ ಮಾಡಿದ್ದಲ್ಲಿ ವಿತರಕರಿಗೆ ನಾಲ್ಕು ರೂ . ಕಮಿಷನ್ ನೀಡಲಾಗುತ್ತಿದೆ.  ವಿವಾಹ , ಇತರ ಸಮಾರಂಭ ಹಾಗೂ ಅಂಗಡಿಗಳ  ಮೂಲಕ ಮಾರಾಟ ಮಾಡಿ ಕಂಪೆನಿಗಳು ಕೋಟ್ಯಂತರ  ರೂ . ಗಳನ್ನೂ ಸಂಪಾದಿಸುತ್ತಿದೆ. ಇದರಲ್ಲಿ ತುಂಬಿಸಿರುವ ನೀರು ಶುದ್ದೀಕರಿಸಲಾಗುತ್ತಿದೆಯೇ ಎಂಬ ಬಗ್ಗೆ  ಸ್ಪಷ್ಟತೆ ಇಲ್ಲ.   ಹೊಳೆಗಳಿಂದಲೂ ನೀರನ್ನು  ತುಂಬಿಸಿ  ಲೋಡ್ ಗಟ್ಟಲೆ ಜಿಲ್ಲೆಗೆ ತಲುಪಿಸಲಾಗುತ್ತಿದೆ.
ಆದರೆ ಬಾರಿ ಪ್ರಮಾಣದಲ್ಲಿ ಇಂತಹ ಕಂಪೆನಿಗಳು ಕಾರ್ಯಾಚರಿಸುತ್ತಿದ್ದರೂ ನೀರಿನ ಶುದ್ಧತೆ ಬಗ್ಗೆ ತಪಾಸಣೆ ನಡೆಸದಿರುವುದು ಈ ನೀರು ಸೇವನೆ ಆರೋಗ್ಯಕ್ಕೆ ಎಷ್ಟು ಸುರಕ್ಷಿತ  ಎಂಬ ಬಗ್ಗೆ ಗಂಭೀರ ವಾಗಿ ನೋಡಬೇಕು ಮಾತ್ರವಲ್ಲ ಆರೋಗ್ಯ ಇಲಾಖೆ ಈ ನಿಟ್ಟಿನಲ್ಲಿ ಗಮನ ಹರಿಸದೆ ಇದ್ದಲ್ಲಿ  ಗಂಭೀರ ಆರೋಗ್ಯ ಸಮಸ್ಯೆಯನ್ನು ಎದುರಿಸುವಂತಾಗಲಿದೆ.

See also  ಮಂಗಳೂರಿನಲ್ಲಿ ಮೂವರು ಅನುಮಾನಸ್ಪದವಾಗಿ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು