ಉಳ್ಳಾಲ: ಸಹೋದರರಿಬ್ಬರಿಗೆ ಚೂರಿ ಇರಿತ ನಡೆಸಿ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಉಳ್ಳಾಲ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಮಾಸ್ತಿಕಟ್ಟೆ ಸಂಚರಿಸುತ್ತಿದ್ದ ಉಳ್ಳಾಲ ನಿವಾಸಿ ಪ್ರಸ್ತುತ ಕಲ್ಲಾಪು ಪಟ್ಲದಲ್ಲಿ ವಾಸವಾಗಿರುವ ಸಮೀರ್ ಮತ್ತು ಆತನ ಸಹೋದರ ಸಿರಾಜ್ ಗೆ ಇಲ್ಯಾಸ್ ಯಾನೆ ಟಾರ್ಗೆಟ್ ಇಲಿಯಾಸ್ ನ ತಂಡಕ್ಕೆ ಸೇರಿದ ಸುರ್ಮಾ ಇಮ್ರಾನ್ ಚೂರಿಯಿಂದ ಇರಿದಿದ್ದು, ಅಲ್ತಾಫ್ ಕಾಟಿಪಳ್ಳ, ಹಂಝ ಸಹಾಯ ಮಾಡಿದ್ದರೆಂದು ಗಾಯಗೊಂಡಿದ್ದ ಸಹೋದರರು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಘಟನೆಗ ಸಂಬಂಧಿಸಿದ ಪ್ರಮುಖ ಆರೋಪಿ ಸುರ್ಮಾ ಇಮ್ರಾನ್ ಮತ್ತು ಹಂಝನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಉಳಿದ ಆರೋಪಿಗಳ ಶೋಧ ಕಾರ್ಯದಲ್ಲಿ ತೊಡಗಿಸಿದ್ದಾರೆ. ಕೊಲೆ ಯತ್ನ ನಡೆಸಿದ ಆರೋಪಿಗಳಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಮತ್ತು ಅವರನ್ನು ರಕ್ಷಿಸಲಾಗುತ್ತಿದೆ ಎಂದು ಆರೋಪಿಸಿ ಗಾಯಾಳು ಪರ ತಂಡ ಪೊಲೀಸ್ ಠಾಣೆಯ ಎದುರು ಜಮಾಯಿಸಿದ್ದರು. ಆರೋಪಿಗಳಿಗೆ ರಾಜಕೀಯ ರಕ್ಷಣೆ ನೀಡಲಾಗುತ್ತಿದೆ ಎಂದು ಸಮೀರ್ ಸಂಬಂಧಿಕರು ಆರೋಪಿಸಿದ್ದಾರೆ. ಉಳ್ಳಾಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.