ಬಂಟ್ವಾಳ: ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕನ್ಯಾನದಲ್ಲಿ ಶುಕ್ರವಾರ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದ ತಂಡ ಭಾರೀ ಅಕ್ರಮ ಮರಳು ದಾಸ್ತಾನು ಪತ್ತೆ ಮಾಡಿದೆ.
ಇಲ್ಕಿ ಶಿರಂಕಲ್ಲು ಎಂಬಲ್ಲಿ ಅಕ್ರಮವಾಗಿ ಸಂಗ್ರಸಲಾಗಿದ್ದ ಮರಳು ಅಡ್ಡೆ ಪತ್ತೆಯಾಗಿದ್ದು, ಬರೋಬ್ಬರಿ 450 ಮೆಟ್ರಿಕ್ ಟನ್ ಮರಳು ಪತ್ತೆಯಾಗಿದೆ ಎನ್ನಲಾಗಿದೆ. ಮರಳು ಇಲ್ಲಿನ ಶ್ರೀಧರ ಶೆಟ್ಟಿ ಎಂಬವರಿಗೆ ಸೇರಿದ್ದು ಎನ್ನಲಾಗಿದ್ದು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಪ್ರಕರಣ ಹಸ್ತಾಂತರಿಸಲಾಗಿದೆ ಎಂದು ತಿಳಿದು ಬಂದಿದೆ.
ಅಡಿಶನಲ್ ಎಸ್.ಪಿ ವೇದಮೂರ್ತಿ,ವಿಟ್ಲ ಎಸೈ. ನಾಗರಾಜ್ ನೇತೃತ್ವದಲ್ಲಿ ದಾಳಿ ನಡೆದಿತ್ತು.