ಬೆಳ್ತಂಗಡಿ: ಮುಸ್ಸಂಜೆ ವೇಳೆ ಚಾರಣದ ತಾಣವಾದ ನರಸಿಂಹ ಗಡದಲ್ಲಿ ಬೆಂಕಿಯಧಗಧಗ. ಈ ಬಗ್ಗೆ ಎಲ್ಲರಲ್ಲೂ ಕುತೂಹಲ. ಗಡಾಯಿ ಕಲ್ಲಿಗೆ ಬೆಂಕಿ ಬಿದ್ದಿದೆ ಎಂದು ಎಲ್ಲೆಡೆ ಸುದ್ದಿ.
ಬಳಿಕ ಈ ಬಗ್ಗೆ ಹೆಚ್ಚಿನ ವಿವರಕ್ಕಾಗಿ ಪ್ರಯತ್ನಿಸಿದಾಗ ಗಡಾಯಿಕಲ್ಲಿನಲ್ಲಿ ಒಣಹುಲ್ಲು ಬೆಳೆದಿದ್ದು ಇದಕ್ಕೆ ಪ್ರವಾಸಿಗರಿಂದ ಅಥವಾ ಇನ್ನಿತರ ಯಾವುದೇ ಕಾರಣದಿಂದ ಬೆಂಕಿ ಅವಘಡ ಸಂಭವಿಸಬಾರದು ಎಂದು ಬೆಳ್ತಂಗಡಿ ವನ್ಯಜೀವಿ ವಿಭಾಗದವರು ಶನಿವಾರ ರಾತ್ರಿ ಒಣಹುಲ್ಲಿಗೆ ಬೆಂಕಿ ಹಚ್ಚಿದ್ದರು. ಇದು ಇಲಾಖೆಯವರೇ ಹಚ್ಚಿದ ಬೆಂಕಿ ಹೊರತು ಜನಸಾಮಾನ್ಯರು ಹಚ್ಚಿದ್ದಲ್ಲ ಎಂದು ತಿಳಿದು ಬಂತು.
ಹಗಲಿನಲ್ಲಿ ಪ್ರವಾಸಿಗರು ಬರುತ್ತಿದ್ದು ಇದರಿಂದ ಅರಣ್ಯ ನಾಶವಾಗಬಹುದೆಂದು ಮುನ್ಸೂಚನೆಗಾಗಿ ಪ್ರವಾಸಿಗರು ಇಲ್ಲದ ಸಂದರ್ಭ ನೋಡಿರಾತ್ರಿ ಹೊತ್ತು ಸಿಬ್ಬಂದಿಗಳು ಒಣಹುಲ್ಲಿಗೆ ಬೆಂಕಿಹಚ್ಚಿದ್ದಾರೆ. ಇತ್ತೀಚೆಗೆ ಗುರುವಾಯನಕೆರೆಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಕುದುರೆಮುಖ ಪ್ರದೇಶದಲ್ಲಿ ಶಿಕಾರಿಗೆ ಹೋಗುವವರು ಕಾಡಿಗೆ ಬೆಂಕಿ ಹಚ್ಚುವ ಪ್ರಕರಣ ಆರೋಪ ಬಂದಿದ್ದು ಇದರಿಂದ ಎಚ್ಚೆತ್ತ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ.
.