ಬೆಳ್ತಂಗಡಿ: ಉಡುಪಿಯ ಅಜ್ಜರಕಾಡು ಪುರಭವನದಲ್ಲಿ ನಡೆದ ಮೂರು ದಿನಗಳ ರಾಜ್ಯ ಮಟ್ಟದ ಯುವಜನ ಮೇಳದಲ್ಲಿ ಬೆಳ್ತಂಗಡಿಯ ಕಲಾತಂಡ ಶ್ರೀ ಗುರು ಮಿತ್ರ ಸಮೂಹ ಯುವತಿಯರ ವಿಭಾಗದ ಕೋಲಾಟ ಹಾಗೂ ಜನಪದ ನೃತ್ಯದಲ್ಲಿ ಸ್ಪರ್ಧಿಸಿ ಪ್ರಥಮ ಸ್ಥಾನ ಪಡೆದುಕೊಂಡಿದೆ.
ಯುವತಿಯರ ತಂಡದಲ್ಲಿ ಹರ್ಷಿತಾ ಟಿ.ಪಿ., ಅಮೃತಾ ಎನ್.ಎಸ್., ರಾಜಶ್ರೀ, ರೂಪಶ್ರೀ, ಪೂಜಶ್ರೀ, ಕಾವ್ಯ, ಶಾಲಿನಿ ಬೆಳಾಲ್, ಅಶ್ವಿತಾ ಧರ್ಮಸ್ಥಳ, ಸೌಜನ್ಯ ಉಜಿರೆ, ಲಿಖಿತಾ, ಪೂರ್ಣಿಮ ಬೆಳ್ತಂಗಡಿ, ಶ್ವೇತಾ ಉಜಿರೆ, ತೀರ್ಥ ಧರ್ಮಸ್ಥಳ ಭಾಗವಹಿಸಿದ್ದರು. ತಂಡದ ಸ್ಥಾಪಕಾಧ್ಯಕ್ಷ ರಮಾನಂದ ಸಾಲ್ಯಾನ್, ಸುಧಾಮಣಿ ಆರ್., ಅಧ್ಯಕ್ಷ ಸ್ಮಿತೇಶ್ ಎಸ್ ಬಾರ್ಯ, ಕಾರ್ಯದರ್ಶಿ ಚಂದ್ರಹಾಸ ಬಳಂಜ, ಕೋಶಾಧಿಕಾರಿ ಸುಧೀರ್ ಜೈನ್, ಸದಸ್ಯ ಅನಿತ್ ಬಳಂಜ, ಸತೀಶ್ ಬಳಂಜ, ಶಿವಶಂಕರ್ ಗೇರುಕಟ್ಟೆ, ಪ್ರಶಾಂತ್ ಮಚ್ಚಿನ, ಪ್ರದೀಪ್ ಕೋಡ್ಯೇಲ್, ಜಗದೀಶ್ ಕುಲಾಲ್ ಇದ್ದರು.