ಕಾಸರಗೋಡು: ಮ೦ಜೇಶ್ವರ ವರ್ಕಾಡಿ ಸಮೀಪದ ಮಾವಿನಕಟ್ಟೆಯಲ್ಲಿ ಬೈಕ್ ಮತ್ತು ಆಕ್ಟಿವಾ ಸ್ಕೂಟರ್ ಪರಸ್ಪರ ಢಿಕ್ಕಿ ಹೊಡೆದು ನಾಲ್ಕು ಮಂದಿ ಗಾಯಗೊಂಡ ಘಟನೆ ನಡೆದಿದ್ದು, ಸ್ಥಳದಲ್ಲಿ ತಲವಾರು ಪತ್ತೆಯಾಗಿರುವುದು ಸಂಶಯಕ್ಕೆ ಕಾರಣವಾಗಿದೆ.
ಬೈಕ್ ಸವಾರರಾದ ಕಡಂಬಾರಿನ ಇಬ್ರಾಹಿಂ(30), ಹೊಸಂಗಡಿ ಕಜೆಯ ಅನ್ಸಾರ್(28), ಸ್ಕೂಟರ್ ಸವಾರರಾದ ಮೊರತ್ತಣೆಯ ಗಂಗಾಧರ(30) ಮತ್ತು ಬಟ್ಯಪದವಿನ ಭರತ್(28) ಎಂಬವರು ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಈ ಪೈಕಿ ಗಂಗಾಧರ ಮತ್ತು ಇಬ್ರಾಹಿಂ ಗಂಭೀರ ಗಾಯಗೊಂಡಿದ್ದು ,ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಈ ನಡುವೆ ಅಪಘಾತ ಸ್ಥಳದಲ್ಲಿ ತಲವಾರು ಪತ್ತೆಯಾಗಿದ್ದು, ಅನುಮಾನಕ್ಕೆ ಕಾರಣವಾಗಿದೆ. ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.