ಉಳ್ಳಾಲ: ಉಳ್ಳಾಲದ ಫಿಶ್ ಮಿಲ್ ಗೆ ಕೆಲಸಕ್ಕೆ ಬಂದಿದ್ದ ಉತ್ತರ ಕನ್ನಡ ಹಳಿಯಾಳದ ರಾಯಪಟ್ಟಣದ ಯುವತಿ ನಾಪತ್ತೆಯಾಗಿದ್ದು, ಯುವತಿಯನ್ನು ಹುಡುಕಿ ಕೊಡುವಂತೆ ಯುವತಿಯ ಸಂಬಂಧಿಕರು ಉಳ್ಳಾಲ ಪೊಲೀಸರ ಮೊರೆ ಹೋಗಿದ್ದಾರೆ.
ಹಳಿಯಾಳದ ರಾಯಪಟ್ಟಣದ ಸಿದ್ದಿ ಜನಾಂಗದ ಬಾಬು ಚಿಮನು ಬಾಜಾರಿ ಅವರ ಪುತ್ರಿ ದೊಂಡಿಬಾಯಿ ಚಿಮನು ಬಾಜಾರಿ(20) ನಾಪತ್ತೆಯಾದ ಯುವತಿಯಾಗಿದ್ದು, ಈಕೆ ಉಳ್ಳಾಲದ ಕೈಕೋ ಫಿಶ್ ಮಿಲ್ ಗೆ ಎಂಟು ತಿಂಗಳ ಹಿಂದೆ ಕೆಲಸಕ್ಕೆ ಸೇರಿದ್ದಳು. ಈಕೆಯನ್ನು ಯಲ್ಲಾಪುರದ ಸುನಿತಾ ದುಳು ಬಿಚ್ಚಕಲೆ ಉಳ್ಳಾಲಕ್ಕೆ ಕೆಲಸಕ್ಕೆ ಸೇರಿಸಿದ್ದಳು.
ಹೋಳಿಗೆ ಬಂದಿರಲಿಲ್ಲ : ಉಳ್ಳಾಲದಲ್ಲಿ ಕೆಲಸ ಮಾಡುತ್ತಿದ್ದ ದೊಂಡಿ ಬಾಯಿ ಹೋಳಿಗೆ ಊರಿಗೆ ಬರುವವಳಿದ್ದಳು ಅದರೆ ಈಕೆ ಹೋಳಿ ಹಬ್ಬಕ್ಕೆ ಬಾರದೆ ಇದ್ದಾಗ ಮನೆಯವರು ದೂರವಾಣಿ ಕರೆ ಮಾಡಿದ್ದು, ದೂರವಾಣಿ ಕರೆ ಸ್ವೀಕರಿಸಿರಲಿಲ್ಲ. ಬಳಿಕ ಕಲೆಸಕ್ಕೆ ಕರೆದುಕೊಂಡು ಹೋಗಿದ್ದ ಸುನಿತಾಳಿಗೆ ಕರೆ ಮಾಡಿದಾಗ ಆಕೆಯೂ ಕರೆ ಸ್ವೀಕರಿಸದೇ ಇದ್ದಾಗ ಮನೆಯವರಿಗೆ ಅತಂಕ ಉಂಟಾಗಿದ್ದು, ಹಳಿಯಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದು ಅಲ್ಲಿಯ ಪೊಲೀಸರ ಮಾಹಿತಿಯಂತೆ ಉಳ್ಳಾಲ ಪೊಲೀಸರ ಮೊರೆ ಹೋಗಿದ್ದಾರೆ. ಈ ನಡುವೆ ದೊಂಡಿಬಾಯಿ ತನ್ನ ಸಹೋದರನಿಗೆ ಮೊಬೈಲ್ ಮೆಸೇಜ್ ಅನ್ನು ಮಾಡಿದ್ದು, ನನ್ನನ್ನು ಹುಡುಕುವ ಪ್ರಯತ್ನ ಮಾಡಬೇಡಿ ಎಂದು ಮೆಸೇಜ್ ಹಾಕಿದ್ದು, ಇದರಿಂದ ಅತಂಕಿತರಾದ ಈಕೆಯ ಸಂಬಂಧಿಕರು ಉಳ್ಳಾಲದಲ್ಲಿ ಈಕೆಯ ಹುಡುಕಾಟದಲ್ಲಿ ತೊಡಿದ್ದಾರೆ.
ಈಕೆಯನ್ನು ಕರೆದುಕೊಂಡು ಬಂದಿರುವ ಏಜೆಂರ್ ನ ಸುನಿತಾ ಕರೆ ಸ್ವೀಕರಿಸದೇ ಇದ್ದಾಗ ದೊಂಡಿಬಾಯಿ ನಾಪತ್ತೆಯಲ್ಲಿ ಈಕೆಯ ಕೈವಾಡ ಶಂಕಿಸಲಾಗಿದ್ದು, ಇದೇ ರೀತಿ ಯುವತಿಯರನ್ನು ಉತ್ತರ ಕರ್ನಾಟಕದಿಂದ ಕರೆದುಕೊಂಡು ಬಂದು ಮಾರಾಟ ಮಾಡಿರುವ ಸಾಧ್ಯತೆಯನ್ನು ಸಿದ್ಧಿ ಜನಾಂಗದ ಸಾಮಾಜಿಕ ಕಾರ್ಯಕರ್ತ ಮ್ಯಾನುವೆಲ್ ಸಿದ್ಧಿ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ.