ಕಾಸರಗೋಡು: ಕಾಸರಗೋಡು ನಗರದ ಪ್ರಮುಖ ರಸ್ತೆಗಳನ್ನು ಅತ್ಯಾಧುನಿಕ ಯೋಜನೆಯಡಿ ಅಭಿವೃದ್ಧಿ ಪಡಿಸಲಾಗುವುದು ಎಂದು ಕೇರಳ ಲೋಕೋಪಯೋಗಿ ಸಚಿವ ಜಿ.ಸುಧಾಕರನ್ ಹೇಳಿದರು.
ಅವರು ಶನಿವಾರ ಬೆದ್ರಡ್ಕ ಜ೦ಕ್ಷನ್ ನಲ್ಲಿ ನಡೆದ ಸಮಾರಂಭದಲ್ಲಿ ನೀರ್ಚಾಲು-ಶಿರಿಬಾಗಿಲು-ಭೆಲ್-ಕಂಬಾರು ರಸ್ತೆ ಅಭಿವೃದ್ಧಿ ಯೋಜನೆಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡುತ್ತಿದ್ದರು.
ಕಾಸರಗೋಡು ಸೇರಿದಂತೆ ನಾಲ್ಕು ಜಿಲ್ಲೆಯ ಪ್ರಮುಖ ನಗರದ ಪ್ರಮುಖ ರಸ್ತೆಗಳನ್ನು ಅಭಿವೃದ್ಧಿಗೊಳಿಸಲಾಗುವುದು. ಹದಿನೈದು ವರ್ಷದ ಅವಧಿಯಲ್ಲಿ ಈ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು.
ಮಳೆಗಾಲದ ಮೊದಲು ಹದೆಗೆಟ್ಟ ಎಲ್ಲಾ ರಸ್ತೆಗಳನ್ನು ದುರಸ್ತಿಗೊಳಿಸಲಾಗುವುದು ಎಂದು ಸಚಿವರು ಹೇಳಿದರು.
ಶಾಸಕ ಎನ್. ಎ ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದು, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ. ಜಿ .ಸಿ ಬಷೀರ್, ಕಾಸರಗೋಡು ಬ್ಲಾಕ್ ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಕುಞ, ಗ್ರಾಮ ಪಂಚಾಯತ್ ಅಧ್ಯಕ್ಷ ಎ. ಎ ಜಲೀಲ್, ಮುಜೀಬ್ ಕಂಬಾರ್, ಮಾಜಿ ಶಾಸಕ ಸಿ.ಎಚ್ ಕುಞ೦ಬು, ಅಧಿಕಾರಿಗಳಾದ ಕೆ.ಎಸ್ ರಾಜನ್, ಪಿ .ಕೆ ಸತೀಶನ್, ಎಸ್. ಹಾರಿಸ್ ಮೊದಲಾದವರು ಉಪಸ್ಥಿತರಿದ್ದರು.