News Kannada
Friday, September 30 2022

ಕರಾವಳಿ

17ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬಂಟ್ವಾಳ ತಾಲೂಕಿನಲ್ಲಿ ಅದ್ಧೂರಿ ಚಾಲನೆ - 1 min read

Photo Credit :

17ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬಂಟ್ವಾಳ ತಾಲೂಕಿನಲ್ಲಿ ಅದ್ಧೂರಿ ಚಾಲನೆ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ಸಿದ್ಧಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಠಾರದ ಏರ್ಯ ಚಂದ್ರಭಾಗಿ ರೈ ಸಭಾಂಗಣದ ಐ.ಕೃಷ್ಣರಾಜ ಬಲ್ಲಾಳ್ ವೇದಿಕೆಯಲ್ಲಿ ಶನಿವಾರ ಜರಗಿದ ಬಂಟ್ವಾಳ ತಾಲೂಕು 17ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿಯ ಚಾಲನೆ ದೊರಕಿತು.  

ಬೆಳಗ್ಗೆ ಸಿದ್ಧಕಟ್ಟೆ ಸೈಂಟ್ ಪ್ಯಾಟ್ರಿಕ್ ಹಿರಿಯ ಪ್ರಾಥಮಿಕ ಶಾಲಾ ಮುಂಭಾಗದಲ್ಲಿ ಆಕರ್ಷಕ ಮೆರವಣಿಗೆಗೆ ಸಂಗಬೆಟ್ಟು ಗ್ರಾ.ಪಂ.ಅಧ್ಯಕ್ಷೆ ಗುಲಾಬಿ ಶೆಟ್ಟಿ ಅವರು ಚಾಲನೆ ನೀಡಿದರು. ಕುಕ್ಕಿಪಾಡಿ ಗ್ರಾ.ಪಂ.ಅಧ್ಯಕ್ಷ ದಿನೇಶ ಸುಂದರ ಶಾಂತಿ ಅವರು ಕನ್ನಡ ಭುವನೇಶ್ವರಿಗೆ ಪುಷ್ಪಾರ್ಚನೆ ನಡೆಸಿದರು. ಶಾಲಾ ಮುಂಭಾಗದಿಂದ ಪ್ರೌಢಶಾಲಾ ವೇದಿಕೆಯವರೆಗೆ ಆಕರ್ಷಕ ತೆರೆದ ವಾಹನದಲ್ಲಿ ಸಮ್ಮೇಳನಾಧ್ಯಕ್ಷರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ವಿವಿಧ ಬ್ಯಾಂಡ್, ವಾದ್ಯಗಳು, ಕಲಾತಂಡಗಳು ಮೆರವಣಿಗೆಗೆ ಮೆರುಗು ನೀಡಿದವು.

ಬಳಿಕ ಶಾಲಾ ಮೈದಾನದಲ್ಲಿ ಬಂಟ್ವಾಳ ತಾ.ಪಂ. ಉಪಾಧ್ಯಕ್ಷ  ಅಬ್ಬಾಸ್ ಅಲಿ ಅವರು ರಾಷ್ಟ್ರ ಧ್ವಜಾರೋಹಣ ನಡೆಸಿದರು. ಜಿ.ಪಂ.ಸದಸ್ಯ ಎಂ. ತುಂಗಪ್ಪ ಬಂಗೇರ ಅವರು ಕನ್ನಡ ಧ್ವಜಾರೋಹಣ ಮಾಡಿದರು. ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅವರು ಪರಿಷತ್ ಧ್ವಜಾರೋಹಣ ಮಾಡಿದರು. ವಿಧಾನಪರಿಷತ್ತಿನ ಸರಕಾರಿ ಮುಖ್ಯ ಸಚೇತಕ ಐವನ್ ಡಿ’ಸೋಜ ಪೌಢಶಾಲಾ ಸೋಲಾರ್ ವ್ಯವಸ್ಥೆ ಅನಾವರಣಗೊಳಿಸಿದರು.

ಸಮ್ಮೇಳನದ ಅಧ್ಯಕ್ಷ ವಿಶ್ರಾಂತ ಪ್ರಾಧ್ಯಾಪಕ,ಲೇಖಕ ಡಾ.ಪುಂಡಿಕಾ ಗಣಪಯ್ಯ ಭಟ್, ಉದ್ಘಾಟಕ ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ, ವಿಧಾನ ಪರಿಷತ್ತು ಸರಕಾರಿ ಮುಖ್ಯ ಸಚೇತಕ ಐವನ್ ಡಿಸೋಜ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕೆ.ಮೋಹನ್ ರಾವ್, ಸ್ವಾಗತ ಸಮಿತಿ ಅಧ್ಯಕ್ಷ ಪ್ರಭಾಕರ ಪ್ರಭು, ಗೌರವಾಧ್ಯಕ್ಷ ಅರ್ಕಕೀರ್ತಿ ಇಂದ್ರ, ಪ್ರ.ಕಾರ್ಯದರ್ಶಿ ರಮಾನಂದ, ಕೋಶಾಧಿಕಾರಿ ಡಾ. ಸುದೀಪ್ ಕುಮಾರ್, ನಿಕಟಪೂರ್ವ ಅಧ್ಯಕ್ಷ ಜಯಾನಂದ ಪೆರಾಜೆ, ಪ್ರಮುಖರಾದ ಬಿ. ತಮ್ಮಯ್ಯ, ಸುದರ್ಶನ್ ಜೈನ್, ಬಿ.ಎಚ್.ಖಾದರ್, ಡಾ.ಕೆ.ಚಿನ್ನಪ್ಪ ಗೌಡ, ಕೆ.ಮಾಯಿಲಪ್ಪ ಸಾಲಿಯಾನ್, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ., ಡಾ. ಪ್ರಭಾಚಂದ್ರ ಜೈನ್, ಪದ್ಮರಾಜ ಬಲ್ಲಾಳ್,ಸುರೇಶ್ ಶೆಟ್ಟಿ, ಗೋಪಿನಾಥ್ ರೈ, ಪ್ರಫುಲ್ಲ ರೈ, ಲೋಕಯ್ಯ ಗಾಡಿಪಲ್ಕೆ, ಹರಿಪ್ರಸಾದ್ ಶೆಟ್ಟಿ, ಮಂದಾರತಿ ಎಸ್. ಶೆಟ್ಟಿ,ಸೀತಾರಾಮ ಶಾಂತಿ, ಸೀತಾರಾಮ ಶೆಟ್ಟಿ ಮತ್ತಿತರರು ಭಾಗವಹಿಸಿದ್ದರು.  

ದಿನೇಶ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು. ಸೀತಾರಾಮ ಶೆಟ್ಟಿ ವಂದಿಸಿದರು.

ಸವಿಸವಿ ಊಟ:
ಸಾಹಿತ್ಯಾಭಿಮಾನಿಗಳನ್ನು ಸಂತೃಪ್ತಗೊಳಿಸಲು ಆಹಾರ ವ್ಯವಸ್ಥೆ, ಸವಿ ಸವಿಯಾದ ಊಟ ಉಪಹಾರದೊಂದಿಗೆ ಸಾಹಿತ್ಯಾಭಿಮಾನಿಗಳನ್ನು ಸಂತೃಪ್ತಗೊಳಿಸಲು ಆಹಾರ ವ್ಯವಸ್ಥೆ ಮಾಡಲಾಗಿತ್ತು ಬೆಳಗಿನ ಉಪಾಹಾರಕ್ಕೆ ಉಪ್ಪಿಟ್ಟು, ಅವಲಕ್ಕಿ, ಕಡಳೆ ಉಸುಳಿ,ಶೀರಾ, ಚಹಾ, ಕಾಫಿ ಹಾಗೂ ಮಧ್ಯಾಹ್ನ ಪಲ್ಯ, ಸಾರು, ಮಜ್ಜಿಗೆ, ಚಟ್ನಿ, ಹುಳಿ ಉಪ್ಪಿನಕಾಯಿ, ಸಾಂಬಾರು, ಪಾಯಸ, ಹೋಳಿಗೆ ಹೀಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಸಂಜೆ  ಚಹಾ, ಕಾಫಿ, ಚಟ್ಟಂಬಡೆ. ಇವೆಲ್ಲದರ ನಡು ನಡುವೆ ಸಾಹಿತ್ಯಾಸಕ್ತರ ಬಾಯಾರಿಕೆಯನ್ನು ನೀಗಲು ಪಾನೀಯದ ವ್ಯವಸ್ಥೆ ಮಾಡಲಾಗಿತ್ತು.

See also  ಕಲಾವಿದ ವಿಜಯ್ ಕುಮಾರ್ ಶೆಟ್ಟಿ, ಮುಂಬಯಿಯ ಮೂವರು ಉದ್ಯಮಿಗಳಿಗೆ ಸನ್ಮಾನ

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು