ಕಾಸರಗೋಡು : ಏಪ್ರಿಲ್ ಒಂದರಂದು ಕಾಸರಗೋಡು ಪಾಸ್ ಪೋರ್ಟ್ ಸೇವಾ ಕೇಂದ್ರ ಕಾರ್ಯಾರಂಭಗೊಳ್ಳಲಿದ್ದು, ಇದರ ಪೂರ್ವಭಾವಿಯಾಗಿ ಪರೀಕ್ಷಾರ್ಥ ಕಾರ್ಯ ಬುಧವಾರ ನಡೆಯಿತು.
ನಾಲ್ಕು ತಿಂಗಳ ಮಗು ಸೇರಿದಂತೆ 10 ಮಂದಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದರು. ಇವರ ಪೈಕಿ ಮೂವರು ಬುಧಾವರ ಬೆಳಿಗ್ಗೆ ಕಚೇರಿಗೆ ಆಗಮಿಸಿ ದ್ದರು. ನಾಲ್ವರು ಸಿಬಂದಿಗಳನ್ನು ಈಗ ಸೇವಾ ಕೇಂದ್ರದಲ್ಲಿದ್ದಾರೆ. ಒಟ್ಟು 12 ಮಂದಿಯನ್ನು ನೇಮಿಸಲಾಗಿದೆ. ಈಗ ದಿನಕ್ಕೆ 10 ಅರ್ಜಿ ಸ್ವೀಕರಿಸಲಾಗುತ್ತಿದ್ದು , ಮುಂದಿನ ದಿನಗಳಲ್ಲಿ ಇನ್ನಷ್ಟು ಅರ್ಜಿಗಳನ್ನು ಸ್ವೀಕರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಗಸ್ಟ್ ನಿಂದ 150 ಅರ್ಜಿಗಳ ವಿಲೇವಾರಿಗೆ ವ್ಯವಸ್ಥೆ ಕಲ್ಪಿಸಲಿದೆ.