News Kannada
Monday, October 03 2022

ಕರಾವಳಿ

ಕುಡಿಯುವ ನೀರಿನ ಪೈಪ್ ತುಂಡಿರಿಸಿದ ಅರಣ್ಯ ಇಲಾಖೆ- ನೀರಿಲ್ಲದೆ ಸಮಸ್ಯೆಗೆ ಸಿಲುಕಿದ 15 ಕುಟುಂಬಗಳ ಪರದಾಟ - 1 min read

Photo Credit :

 ಕುಡಿಯುವ ನೀರಿನ ಪೈಪ್ ತುಂಡಿರಿಸಿದ ಅರಣ್ಯ ಇಲಾಖೆ- ನೀರಿಲ್ಲದೆ ಸಮಸ್ಯೆಗೆ ಸಿಲುಕಿದ 15 ಕುಟುಂಬಗಳ ಪರದಾಟ

ಸುಳ್ಯ: ಕಡು ಬೇಸಿಗೆಯಲ್ಲಿ ಎಲ್ಲೆಡೆ ನೀರಿಗಾಗಿ ಆಹಾಕಾರ ಉಂಟಾಗಿರುವ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕುಡಿಯುವ ನೀರಿನ ಪೈಪ್ ಗಳನ್ನು ಕಡಿದು ತುಂಡರಿಸಿದ ಪರಿಣಾಮ ಹಲವು  ಹೆಚ್ಚು ಕುಟುಂಬಗಳು ನೀರಿಲ್ಲದೆ ತೊಂದರೆ ಪಡಬೇಕಾಗಿ ಬಂದ ಘಟನೆ ಸುಳ್ಯ ತಾಲೂಕಿನ ಮರ್ಕಂಜ ಮತ್ತು ಅರಂತೋಡು ಗ್ರಾಮದ ಗಡಿ ಭಾಗದಲ್ಲಿ ಸಂಭವಿಸಿದೆ. ಮರ್ಕಂಜ ಗ್ರಾಮದ ಅಜ್ಜಿಕಲ್ಲು, ಕಟ್ಟಕೋಡಿ, ಅರಂತೋಡು ಗ್ರಾಮದ ಬಾಜಿನಡ್ಕ ಪ್ರದೇಶದ 15 ಕ್ಕೂ ಹೆಚ್ಚು ಕುಟುಂಬದ ಜನರು ಸುಮಾರು 15 ವರ್ಷಗಳಿಂದ ಮೈರಾಜೆ ಅರಣ್ಯ ಪ್ರದೇಶದ ಹೊಂಡಗಳಲ್ಲಿ ತುಂಬುವ ನೀರನ್ನು ಪೈಪ್ ಹಾಕಿ ತಂದು ಹೋಗಿ ಕುಡಿಯಲು ಮತ್ತು ಇತರ ಉಪಯೋಗಕ್ಕೆ ಬಳಸುತ್ತಿದ್ದರು. ಬಧವಾರ ಮೈರಾಜೆ ಅರಣ್ಯದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದೆ ಎಂಬ ಕಾರಣಕ್ಕೆ ಸ್ಥಳಕ್ಕೆ ಆಗಮಸಿದ ಅರಣ್ಯ ಇಲಾಖೆಯ ಕೆಲವು ಸಿಬ್ಬಂದಿಗಳು ಪೈಪ್ಗಳನ್ನು ಯದ್ವಾ ತದ್ವ ಕಡಿದು  ತುಂಡರಿಸಿದ್ದು ನೀರು ಸರಬರಾಜು ಸಂಪೂರ್ಣ ಸ್ಥಗಿತಗೊಂಡಿದೆ ಎಂದು ನೀರಿಲ್ಲದೆ ಸಮಸ್ಯೆಗೆ ಸಿಲುಕಿರುವ ಕುಟುಂಬಗಳು ಆರೋಪಿಸಿದ್ದಾರೆ.

Forest dept pulls out water pipelines leaving pots of 15 families in Sullia dry-1ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ  ಜನರೇ ಹೆಚ್ಚಾಗಿರುವ ಈ ಪ್ರದೇಶದ ಜನರು ನೀರಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಪ್ರದೇಶದಲ್ಲಿ ವಾಸಿಸುವ ಬಡ ಮತ್ತು ಮಧ್ಯಮ ಪ್ರದೇಶದ ಜನರಿಗೆ ಕುಡಿಯಲು, ಜಾನುವಾರುಗಳಿಗೆ ನೀಡಲು ಕೆರೆ, ಬಾವಿ, ಬೋರ್ವೆಲ್ಗಳಾಗಲೀ ಇತರ  ನೀರಿನ ಮೂಲಗಳು ಇಲ್ಲ. ಬೇಸಿಗೆಯಲ್ಲಿ ಪೈಪ್ನಲ್ಲಿ ಬರುವ ನೀರು ಮಾತ್ರ ಆಶ್ರಯ ಎಂದು ಈ ಪ್ರದೇಶದ ಸಂತ್ರಸ್ಥ ಕುಟುಂಬಗಳು ಹೇಳುತ್ತಾರೆ. ಈ ಪೈಪ್ನಲ್ಲಿ ಬರುವ ನೀರಿಲ್ಲದಿದ್ದರೆ ಎರಡು-ಮೂರು ಕಿ.ಮಿ.ದೂರದಿಂದ ವಾಹನಗಳಲ್ಲಿ ನೀರು ತರಬೇಕಾದ ಪರಿಸ್ಥಿತಿ ಉಂಟಾಗಿದೆ. ಜನರಿಗೆ, ಜಾನುವಾರುಗಳಿಗೆ ಕುಡಿಯಲು, ಬಟ್ಟೆ ತೊಳೆಯಲು, ಅಡುಗೆ ಮಾಡಲು ಯಾವುದಕ್ಕೂ ನೀರಿಲ್ಲದ ಪರಿಸ್ಥಿತಿ ನಿರ್ಮಾಣ ಆಗಿದೆ ಎನ್ನುತ್ತಾರೆ ಈ ಪ್ರದೇಶದ ಮಹಿಳೆಯರು ಸೇರಿದಂತೆ ಈ ಪ್ರದೇಶದ ಜನರು ಹೇಳುತ್ತಾರೆ.

ಇಲ್ಲಿನ ಕುಟುಂಬಗಳು ಸೇರಿ ಸುಮಾರು 1700 ಮೀಟರ್ ಉದ್ದದಲ್ಲಿ ಎಂಟು ಪೈಪ್ಗಳನ್ನು ಅಳವಡಿಸಿ ನೀರನ್ನು ತರುತ್ತಾರೆ. ಇದರ ಬಹುತೇಕ ಭಾಗದಲ್ಲಿ ಪೈಪ್ಗಳನ್ನು ಅಲ್ಲಲ್ಲಿ ತುಂಡರಿಸಲಾಗಿದ್ದು ನೀರು ಬರುವುದು ಸ್ಥಗಿತಗೊಂಡಿದೆ. ಇದರಿಂದ ಇದನ್ನೇ ನಂಬಿದ ಕುಟುಂಬಗಳ ಮನೆಗಳಲ್ಲಿ ಕಡು ಬೇಸಿಗೆಯಲ್ಲಿ ನೀರಿಲ್ಲದ ಪರಿಸ್ಥಿತಿ ಉಂಟಾಗಿದೆ ಎನ್ನುತ್ತಾರೆ ಸ್ಥಳೀಯರಾದ ಅಣ್ಣು ಕಟ್ಟಕೋಡಿ. ಒಂದೂವರೆ ಕಿ.ಮಿ.ಗಿಂತಲೂ ಅಧಿಕ ದೂರಕ್ಕೆ ಪೈಪ್ ಅಳವಡಿಸಲು ಒಂದೊಂದು ಕುಟುಂಬಕ್ಕೆ 15 ಸಾವಿರಕ್ಕಿಂತಲೂ ಹೆಚ್ಚು ಖಚರ್ು ತಗುಲಿತ್ತು. ಸುಮಾರು ಒಂದು ಲಕ್ಷಕ್ಕೂ ಹೆಚ್ಚು ವೆಚ್ಚದ ಪೈಪ್ ಹಾಕಲಾಗಿದ್ದು ಅದನ್ನು ತುಂಡರಿಸಲಾಗಿದೆ. ತಮ್ಮಿಂದ ಪುನಾಃ ಅಷ್ಟು ಖಚರ್ು ಮಾಡಲು ಸಾಧ್ಯವಿಲ್ಲ. ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದೇ ಇಲ್ಲಿ ಪೈಪ್ಗಳನ್ನು ಅಳವಡಿಸಲಾಗಿದ್ದು ಕಳೆದ ಅನೇಕ ವರ್ಷಗಳಿಂದ ಯಾವುದೇ ಸಮಸ್ಯೆ ಇರಲಿಲ್ಲ. ಇದೀಗ ಕಾಡ್ಗಿಚ್ಚು ನಂದಿಸಲೆಂದು ಬಂದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಏಕಾ ಏಕಿ ಪೈಪ್ಗಳನ್ನು ಕಡಿದು ಹಾಕಿ ನೀರು ಬಾರದ ಹಾಗೆ ಮಾಡಿದ್ದಾರೆ ಎನ್ನುತ್ತಾರವರು. ಸೋಮವಾರದ ಒಳಗಾಗಿ ಪೈಪ್ ಅಳವಡಿಸಿಕೊಟ್ಟು ನೀರಿನ ವ್ಯವಸ್ಥೆ ಮಾಡಿಸಿಕೊಡದಿದ್ದರೆ ಸುಳ್ಯ ಅರಣ್ಯ ಇಲಾಖೆಯ ಕಚೇರಿ ಎದುರಿನಲ್ಲಿ ಅಹೋರಾತ್ರಿ ಧರಣಿ ನಡೆಸಲು ನಿರ್ಧರಿಸಲಾಗಿದೆ. ಪೈಪ್ ಅಳವಡಿಸಿಕೊಡದಿದ್ದರೆ ಮಹಿಳೆಯರೂ, ಮಕ್ಕಳೂ ಸೇರಿ ಎಲ್ಲರೂ ಅರಣ್ಯ ಇಲಾಖೆ ಕಚೇರಿ ಎದುರಿನಲ್ಲಿ ಕುಳಿತುಕೊಳ್ಳುತ್ತೇವೆ ಎಂದು ಅಣ್ಣು ಕಟ್ಟಕೋಡಿ ತಿಳಿಸಿದ್ದಾರೆ.

See also  ವ್ಯಾಪಾರ ರಾಜಕಾರಣ ಬದಲಿಸಿ ಪ್ರಜಾಪ್ರಭುತ್ವಕ್ಕೊಂದು ಹೊಸ ಆಯಾಮ: ನಟ ಉಪೇಂದ್ರ

ಅರಣ್ಯದಿಂದ ಕುಡಿಯುವ ನೀರು ತೆಗೆದುಕೊಳ್ಳುವುದು ಬೇಡ ಎಂದರೆ ನಮಗೆ ಸರ್ಕಾರ ಬೇರೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಕೊಡಲಿ. ತಮಗೆ ಯಾವುದೇ ಮಾಹಿತಿ ನೀಡದೆ ಪೈಪ್ ಗಳನ್ನು ತುಂಡರಿಸಲಾಗಿದೆ. ನಮಗೆ ಕುಡಿಯಲು ಮತ್ತು ಇತರ ಅಗತ್ಯಕ್ಕೆ ಬೇರೆ ಯಾವುದೇ ನೀರಿನ ಮೂಲಗಳು ಇಲ್ಲ ಎನ್ನುತ್ತಾರೆ ಸ್ಥಳೀಯರಾದ ಲಕ್ಷ್ಮೀ ಕುದ್ಕುಳಿ.
ಕಳೆದ 15 ವರ್ಷಗಳಿಂದ ಪೈಪ್ ಹಾಕಿ ನೀರು ತರುತ್ತಿದ್ದೇವೆ. ಆದರೆ ಈಗ ಅರಣ್ಯ ಇಲಾಖೆಯ ಸಿಬ್ಬಂದಿಗಳು ಬಂದು ನೀವೇ ಅರಣ್ಯಕ್ಕೆ ಬೆಂಕಿ ಹಾಕುತ್ತೀರಿ ಎಂದು ಪದೇ ಪದೇ ಗದರಿಸುತ್ತಾರೆ. ಇದೀಗ ಕಾಡಿಗೆ ಬೆಂಕಿ ಹಾಕಿದ್ದು ನೀವೇ ಎಂದು ನಮ್ಮ ಕುಡಿಯುವ ನೀರಿನ ಪೈಪ್ ಗಳನ್ನು ತುಂಡರಿಸಿದ್ದಾರೆ. ಕಾಡ್ಗಿಚ್ಚು ಕಂಡು ಬಂದರೆ ಸ್ಥಳೀಯರೇ ಇಲಾಖೆಗೆ ಮಾಹಿತಿ ನೀಡಿ ಬೆಂಕಿ ನಂದಿಸಲು ಸಹಕರಿಸುತ್ತಾರೆ ಎಂದು ಮಹಾದೇವಿ ಅಜ್ಜಿಕಲ್ಲು ತಮ್ಮ ನೋವನ್ನು ತೋಡಿ ಕೊಂಡಿದ್ದಾರೆ.

ಪೈಪ್ ಹಾಕಿ ಕೊಡಲು ಒಪ್ಪಿಗೆ:
ಪೈಪ್ ತುಂಡರಿಸಿದ ವಿಷಯ ತಿಳಿದು ಗುರುವಾರ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಬೇರೆ ಪೈಪ್ ತಂದು ಹಾಕಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಸೋಮವಾರಕ್ಕೆ ಮುಂಚಿತವಾಗಿ ಪೈಪ್ ತಂದು ಅಳವಡಿಸಿ ನೀರಿನ ವ್ಯವಸ್ಥೆ ಮಾಡಿಸಿಕೊಡುವುದಾಗಿ ಹೇಳಿ ಹೋಗಿದ್ದಾರೆ ಎಂದು ಸ್ಥಳೀಯರಾದ ಲೋಹಿತ್ ಅಜ್ಜಿಕಲ್ಲು ಹೇಳಿದ್ದಾರೆ.

“ಘಟನೆಯ ಬಗ್ಗೆ ಮಾಹಿತಿ ಬಂದಿದ್ದು ಪರಿಶೀಲನೆ ನಡೆಸಿದ್ದೇನೆ. ಕಡು ಬೇಸಿಗೆಯ ಈ ಸಂದರ್ಭದಲ್ಲಿ ಕುಡಿಯುವ ನೀರಿನ ಪೈಪ್ ಗಳನ್ನು ಅರಣ್ಯ ಇಲಾಖೆಯ ಸಿಬ್ಬಂದಿ ತುಂಡರಿಸಿರುವುದು ತಪ್ಪಾಗಿದೆ. ಇದನ್ನು ಸರಿಪಡಿಸಲು ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ”
 -ಜಗನ್ನಾಥ್ , ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಳ್ಯ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು