News Kannada
Sunday, September 25 2022

ಕರಾವಳಿ

ಹಾವು ಸಂರಕ್ಷಣೆ-ಪ್ರಾತ್ಯಕ್ಷಿಕೆ : ಮಗುವಿನಂತಹ ಹಾವು - 1 min read

Photo Credit :

ಹಾವು ಸಂರಕ್ಷಣೆ-ಪ್ರಾತ್ಯಕ್ಷಿಕೆ : ಮಗುವಿನಂತಹ ಹಾವು

ಮೂಡಬಿದಿರೆ: ಹಾವುಗಳ ಬಗ್ಗೆ ನಮಗಿರುವ ಅಜ್ಞಾನವೇ  ನಾವು ಮತ್ತು  ಹಾವಿನ ನಡುವೆ  ಇರುವ ಭಯದ ಮೂಲ. ಹಾವುಗಳು ಆತ್ಮರಕ್ಷಣೆಗೋಸ್ಕರವೇ ಮನುಷ್ಯನನ್ನ ಕಚ್ಚುತ್ತವೆಯೋ ಹೊರತು, ದ್ವೇಷದಿಂದಲ್ಲ. ವಾಸ್ತವದಲ್ಲಿ ಹಾವುಗಳು ಒಂದು ವರ್ಷದ ಮಗುವಿನಷ್ಟೇ ಗುಣಸ್ವಭಾವದ ಮುಗ್ಧಜೀವಿಗಳು ಎಂದು ಉರಗ ತಜ್ಞ ಗುರುರಾಜ್ ಸನಿಲ್ ತಿಳಿಸಿದರು.

ಅವರು ಸೋಮವಾರ, ಕಾಲೇಜಿನ ಪಿಜಿ ಸೆಮಿನಾರ್ ಹಾಲ್ ನಲ್ಲಿ ಆಳ್ವಾಸ್ ಸ್ನಾತ್ತಕೋತ್ತರ ಪತ್ರಿಕೋದ್ಯಮ ವಿಭಾಗ ಆಳ್ವಾಸ್ ಮೀಡಿಯಾ ಬಝ್-2017 ರ ಅಂಗವಾಗಿ, ಮಾರ್ಚ್ ಟುವಡ್ಸ್ ನೇಚರ್ ಎಂಬ ಘೋಷವಾಕ್ಯದಡಿ ನಡೆಸಿದ ಹಲವು ಕಾರ್ಯಕ್ರಮಗಳಲ್ಲಿ ಒಂದಾದ 1ಹಾವು ಸಂರಕ್ಷಣೆ ಮತ್ತು ಪ್ರಾತ್ಯಕ್ಷಿಕೆ ಎಂಬ ವಿನೂತನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.  ಹಾವುಗಳಿಗೆ ದ್ವೇಷ ಎಂಬ ಪದದ ಅರ್ಥವೇ ಗೊತ್ತಿಲ್ಲ. ಮೂಢನಂಬಿಕೆ ಹಾಗೂ ಕಾಲ್ಪನಿಕ ಕಥೆಗಳನ್ನ ಆಧಾರಿಸಿ ಬಂದ ಸಿನಿಮಾಗಳು ಹಾವಿನ ದ್ವೇಷ ಹನ್ನೆರೆಡು ವರುಷ ಎಂಬ ನಿರಾಧರ ನಂಬಿಕೆಗಳನ್ನ ಜನರಲ್ಲಿ ಮೂಡುವಂತೆ ಮಾಡಿವೆ. ಹೆಬ್ಬಾವು ಮನುಷ್ಯನನ್ನು ನುಂಗುತ್ತೆ, ಕೇರೆ ಹಾವು ಬಾಲದಲ್ಲಿ ಹೊಡೆಯುತ್ತೆ, ಕನ್ನಡಿ ಹಾವನ್ನು ಮುಟ್ಟಿದರೆ ಕೈಕೊಳೆಯುತ್ತೆ ಎಂಬ ಇನ್ನೂ ಹಲವು ಸುಳ್ಳಿನ ಕಂತೆಗಳನ್ನು ಜನರಲ್ಲಿ ಮೂಡಿಸಿವೆ.  ಆದರೆ ಇಲ್ಲಿಯವರೆಗೆ ಇಂಥ ಘಟನೆ ನಡೆದ ಉದಾಹರಣೆ ಇಲ್ಲ.  ಭಾರತದ ಹೆಬ್ಬಾವು ಮನುಷ್ಯನನ್ನು ಆಹಾರಕ್ಕಾಗಿ ತಿಂದ  ದಾಖಲೆಗಳಿಲ್ಲ.  ಅಲ್ಲದೇ ಮನುಷ್ಯ ಅದರ ಆಹಾರ ಪಟ್ಟಿಯಲ್ಲಿ ಇನ್ನೂ ಸೇರ್ಪಡೆಗೊಂಡಿಲ್ಲ ಎಂದು ತಿಳಿಸಿದರು.  ಪರಿಸರದ ಬಗ್ಗೆ ನಮ್ಮಲ್ಲಿ ಜಾಗೃತಿ ಮೂಡಬೇಕಾದರೆ, ಈ ಜೀವ ಸಂಕುಲದ ಅತೀ ಚಿಕ್ಕ ಜೀವರಾಶಿಯನ್ನೂ ಪ್ರೀತಿಸುವುದನ್ನ ಕಲಿಯಬೇಕು.  ಎಲ್ಲಾ ಜೀವಿಗಳು ನಾವು ಮಾಡುವ ಸಹಕಾರಕ್ಕಿಂತ ನೂರು ಪಟ್ಟು ಹೆಚ್ಚು ಸಹಕಾರ  ಪರಿಸರಕ್ಕೆ ಮಾಡುತ್ತವೆ ಎಂದು ತಿಳಿಸಿದರು.  ಹಾವನ್ನು ಹೂವಿನ ಹಾಗೆ ಸ್ಪರ್ಶಿಸಬೇಕು. ಹಾವಿಗೆ ಮನುಷ್ಯನ ಪ್ರೀತಿ, ಕೋಪ,ಕ್ರೌರ್ಯ ಗಳನ್ನು ಗ್ರಹಿಸುವ ಶಕ್ತಿಯಿದೆ ಎಂದರು.

ಪ್ರಾತ್ಯಕ್ಷಿಕೆಯಲ್ಲಿ ಸಾರಿಬಳ, ಇರ್ತಲೆಹಾವು, ಕೇರೆಹಾವು ಮತ್ತು ನಾಗರ ಹಾವುಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು. ಮಾರ್ಚ್ ಟುವಡ್ಸ್ ನೇಚರ್ ಎಂಬ ಘೋಷವಾಕ್ಯದಡಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಡಿ ಕೆಲಸ ನಿರ್ವಹಿಸುತ್ತಿರುವ ಅಂಗಸಂಸ್ಥೆಗಳ ವಿದ್ಯಾರ್ಥಿಗಳಿಗೆ ನಡೆಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಪ್ರಾಂಶುಪಾಲ ಪ್ರೊ.ಕುರಿಯನ್, ವಿಭಾಗದ ಮುಖ್ಯಸ್ಥೆ ಡಾ.ಮೌಲ್ಯ ಜೀವನರಾಮ್, ಉಪನ್ಯಾಸಕ ಶ್ರೀನಿವಾಸ್ ಪೆಜತ್ತಾಯ, ದೇವೀಶ್ರೀ ಶೆಟ್ಟಿ, ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.   
 
 

See also  ಬೆಂಕಿ ಆಕಸ್ಮಿಕ: ಸಂಪಿಗೆಯಲ್ಲಿ ಕೊಟ್ಟಿಗೆ ಭಸ್ಮ, ಪೇಟೆಯಲ್ಲಿ ಎಟಿಎಂ ಯಂತ್ರಗಳಿಗೆ ಹಾನಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು