News Kannada
Friday, September 30 2022

ಕರಾವಳಿ

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ತಂತ್ರಿ ಬದಲಾವಣೆಗೆ ತಡೆಯಾಜ್ಞೆ ನೀಡಿದ ಹೈಕೋರ್ಟ್! - 1 min read

Photo Credit :

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ತಂತ್ರಿ ಬದಲಾವಣೆಗೆ ತಡೆಯಾಜ್ಞೆ ನೀಡಿದ ಹೈಕೋರ್ಟ್!

ಪುತ್ತೂರು: ಪುತ್ತೂರು ಸೀಮೆಯ ಇತಿಹಾಸ ಪ್ರಸಿದ್ಧ ಪುತ್ತೂರು ಮಹಾಲಿಂಗೇಶ್ವರ ದೇವಾಲಯದಲ್ಲಿ ತಂತ್ರಿ ಬದಲಾವಣೆಗೆ  ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ.

Puttur Mahalingeshwara Temple priest gets notice for contesting Kerala polls-1ಕಳೆದ ಕೆಲ ವರ್ಷದಿಂದ ತಂತ್ರಿಯಾಗಿದ್ದ ಕುಂಟಾರು ರವೀಶ ತಂತ್ರಿ ಅವರ ಬದಲಿಗೆ ಕೆಮ್ಮಿಂಜೆ ನಾಗೇಶ್ ತಂತ್ರಿ ಅವರಿಗೆ ಜಾತ್ರೋತ್ಸವದ ನೇತೃತ್ವ ವಹಿಸಲು ಆಮಂತ್ರಣ ನೀಡಲಾಗಿತ್ತು. ಕಳೆದ ವರ್ಷ ಜಾತ್ರೋತ್ಸವ ಸಂದರ್ಭದಲ್ಲಿ ಆಮಂತ್ರಣ ಪತ್ರ ಹಾಗೂ ಚಪ್ಪರ ವಿಚಾರದಲ್ಲಿ ಗೊಂದಲ ಎದ್ದಿದ್ದರೆ ಈ ಬಾರಿ ‘ತಂತ್ರಿ’ ಬದಲಾವಣೆ ವಿಚಾರದಲ್ಲಿ ವಿವಾದ ನಡೆದಿತ್ತು.

ಕುಂಬಳೆ ಸೀಮಿಗೆ ಸೇರಿದ ಕುಂಟಾರು ರವೀಶ್ ತಂತ್ರಿ ಅವರು ಕಳೆದ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಾಸರಗೋಡು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಅವರು ರಾಜಕೀಯವಾಗಿ ಗುರುತಿಸಿಕೊಂಡಿರುವುದು ಒಂದು ವರ್ಗದ ಕೆಲ ಭಕ್ತಾಧಿಗಳ ಮತ್ತು ಆಡಳಿತ ವರ್ಗದ ಅಸಮಾಧಾನಕ್ಕೆ ಕಾರಣವಾಗಿತ್ತು. ರಾಜಕೀಯದಲ್ಲಿ ತೊಡಗಿಸಿಕೊಂಡ ಹಿನ್ನಲೆಯಲ್ಲಿ ತಂತ್ರಿ ಬದಲಾವಣೆ ಮಾಡಬೇಕೆಂದು ಆಗ್ರಹಿಸಿ ಭಕ್ತಾಧಿಯೊಬ್ಬರು ಸಂಬಂಧಪಟ್ಟ ಇಲಾಖೆಗೆ ದೂರು ಕೂಡ ನೀಡಿದ್ದರು. ಆದರೆ ತಂತ್ರಿ ಬದಲಾವಣೆ ವಿಚಾರದಲ್ಲಿ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಈ ಬಾರಿಯ ಜಾತ್ರಾ ಮಹೋತ್ಸವವು ಎಪ್ರಿಲ್ 10ರಿಂದ ನಡೆಯಲಿದೆ.

See also  ಸ್ವಾತಂತ್ರ್ಯ ಸಂರಕ್ಷಣಾ ಪಾದಯಾತ್ರೆ ಮೇಲೆ ಕಲ್ಲು ತೂರಾಟ: ಹಿಂಸಾಚಾರಕ್ಕೆ ತಿರುಗಿದ ಕಾಸರಗೋಡು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು