ಕಾಸರಗೋಡು: ಲಾರಿಯಲ್ಲಿ ಬಚ್ಚಿಟ್ಟು ಸಾಗಾಟ ಮಾಡುತ್ತಿದ್ದ ಒಂದೂವರೆ ಟನ್ ಸುಡುಮದ್ದು ( ಪಟಾಕಿ )ನ್ನು ಕಾಸರಗೋಡು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಕಾಸರಗೋಡು ನಗರ ಠಾಣಾ ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಲಾಯಿತು. ಮಂಗಳೂರಿನಿಂದ ಕಾಸರಗೋಡು ಮಾರುಕಟ್ಟೆಗೆ ಸರಕು ಹೇರಿಕೊಂಡು ಬಂದ ಲಾರಿಯನ್ನು ತಪಾಸಣೆ ನಡೆಸಿದಾಗ ಸಾಮಾಗ್ರಿಗಳ ಮಧ್ಯೆ ಬಾಕ್ಸ್ ಗಳಲ್ಲಿ ಸುಡುಮದ್ದುಗಳನ್ನು ಬಚ್ಚಿಟ್ಟು ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. ಘಟನೆಗೆ ಸಂಬಂಧಪಟ್ಟಂತೆ ಲಾರಿ ಚಾಲಕ ಸಂತೋಷ್ ಮಲ್ಯ ಮತ್ತು ಕ್ಲೀನರ್ ಶಿವಪ್ರಸಾದ್ ರನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.