News Kannada
Wednesday, March 22 2023

ಕರಾವಳಿ

ತುಂಡರಿಸಿದ ಪೈಪ್ ಬದಲು ಹೊಸ ಪೈಪ್:ಕುಡಿಯುವ ನೀರಿನ ಸಂಪರ್ಕ ಮರು ಜೋಡಣೆ

Photo Credit :

ತುಂಡರಿಸಿದ ಪೈಪ್ ಬದಲು ಹೊಸ ಪೈಪ್:ಕುಡಿಯುವ ನೀರಿನ ಸಂಪರ್ಕ ಮರು ಜೋಡಣೆ

ಸುಳ್ಯ: ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಡಿದು ತುಂಡರಿಸಿದ ಕುಡಿಯುವ ನೀರಿನ ಪೈಪ್ಗಳಿಗೆ ಬದಲಾಗಿ ಹೊಸ ಪೈಪ್ ಗಳನ್ನು ತಂದು ನೀಡಲಾಗಿದ್ದು ಪೈಪ್ ಗಳನ್ನು ಅಳವಡಿಸಿ ಕುಡಿಯುವ ನೀರಿನ ಸಂಪರ್ಕವನ್ನು ಮರು ಜೋಡಿಸಲಾಗಿದೆ. ಇದರಿಂದ ಪೈಪ್ ತುಂಡರಿಸಿದ ಕಾರಣ ನೀರಿನ ಸಂಪರ್ಕ ಕಡಿತಗೊಂಡು ಸಂಕಷ್ಟಕ್ಕೀಡಾಗಿದ್ದ ಸುಳ್ಯ ತಾಲೂಕಿನ ಮರ್ಕಂಜ ಮತ್ತು ಅರಂತೋಡು ಗ್ರಾಮದ ಗಡಿ ಪ್ರದೇಶವಾದ  ಅಜ್ಜಿಕಲ್ಲು, ಕಟ್ಟಕೋಡಿ,  ಬಾಜಿನಡ್ಕ ಪ್ರದೇಶದ 15 ಕ್ಕೂ ಹೆಚ್ಚು ಕುಟುಂಬದ ಜನರು  ನಿಟ್ಟುಸಿರು ಬಿಡುವಂತಾಗಿದೆ.

ಮೈರಾಜೆ ಅರಣ್ಯದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದೆ ಎಂಬ ಕಾರಣಕ್ಕೆ ಸ್ಥಳಕ್ಕೆ ಆಗಮಸಿದ ಅರಣ್ಯ ಇಲಾಖೆಯ ಕೆಲವು ಸಿಬ್ಬಂದಿಗಳು ಪೈಪ್ ಗಳನ್ನು  ಕಡಿದು  ತುಂಡರಿಸಿದ ಕಾರಣ ನೀರು ಸರಬರಾಜು ಸಂಪೂರ್ಣ ಸ್ಥಗಿತಗೊಂಡು ಜನರು ನೀರಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಪೈಪ್ ಕಡಿದು ನೀರು ಸರಬರಾಜಿಗೆ ತಡೆಯೊಡ್ಡಿರುವುದಕ್ಕೆ ತೀವ್ರ ವಿರೋಧ ಉಂಟಾದ ಹಿನ್ನಲೆಯಲ್ಲಿ ಹೊಸ ಪೈಪ್ ಗಳನ್ನು ತಂದು ಅಳವಡಿಸಿ ಕೊಡುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಭರವಸೆ ನೀಡಿದ್ದರು. ಈ ಹಿನ್ನಲೆಯಲ್ಲಿ ಕಡಿದ ಪೈಪ್ ಗಳಿಗೆ ಬದಲಾಗಿ ಅಗತ್ಯ ಇರುವಷ್ಟು ಪೈಪ್ ಗಳನ್ನು ತಂದು ನೀಡಲಾಗಿದ್ದು ಇದನ್ನು ಅಳವಡಿಸಿ ಮನೆಗಳಿಗೆ ನೀರು ಬರಲಾರಂಭಿಸಿದೆ. ಕಳೆದ ಒಂದು ವಾರದಿಂದ ನೀರಿಲ್ಲದೆ ಪರದಾಡಿದ್ದ ಜನತೆಗೆ ಮರ್ಕಂಜ ಗ್ರಾಮ ಪಂಚಾಯಿತಿ ವತಿಯಿಂದ ವಾಹನಗಳಲ್ಲಿ ನೀರು ತಂದು ಸರಬರಾಜು ಮಾಡಲಾಗುತ್ತಿತ್ತು.

ಸುಮಾರು 15 ವರ್ಷಗಳಿಂದ ಮೈರಾಜೆ ಅರಣ್ಯ ಪ್ರದೇಶದ ಹೊಂಡಗಳಲ್ಲಿ ತುಂಬುವ ನೀರನ್ನು ಪೈಪ್ ಹಾಕಿ ತಂದು  ಕುಡಿಯಲು ಮತ್ತು ಇತರ ಉಪಯೋಗಕ್ಕೆ ಬಳಸುತ್ತಿದ್ದರು. ಇವರಿಗೆ ಸಮೀಪದಲ್ಲಿ ಬೇರೆ ನೀರಿನ ಮೂಲಗಳು ಇಲ್ಲ. ಈ ಪ್ರದೇಶಕ್ಕೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದಾಗಿ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಎಸ್.ಅಂಗಾರ ಮತ್ತು ಇತರ ಜನಪ್ರತಿನಿಧಿಗಳು ಭರವಸೆ ನೀಡಿದ್ದಾರೆ.
 

See also  ಪ್ರೀತಿಸಿ ಕೈ ಹಿಡಿದವಳ ಕೈ-ಕಾಲನ್ನೇ ಕಡಿದ ಪಾಪಿ ಪತಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು