News Kannada
Thursday, March 23 2023

ಕರಾವಳಿ

ಉರ್ವ ಪೊಲೀಸ್ ಎಎಸ್ಐ ಮೇಲಿನ ಹಲ್ಲೆಯೂ ಭಯೋತ್ಪಾದನೆಗೆ ಸಮಾನ: ನಳಿನ್ ಕುಮಾರ್ ಕಟೀಲು

Photo Credit :

ಉರ್ವ ಪೊಲೀಸ್ ಎಎಸ್ಐ ಮೇಲಿನ ಹಲ್ಲೆಯೂ ಭಯೋತ್ಪಾದನೆಗೆ ಸಮಾನ: ನಳಿನ್ ಕುಮಾರ್ ಕಟೀಲು

ಮಂಗಳೂರು: ಗನ್ ಹಿಡಿಯೋದೆ ಮಾತ್ರ ಭಯೋತ್ದಾದನೆಯಲ್ಲ. ಪೊಲೀಸರರನ್ನು ಭಯಗ್ರಸ್ಥರನ್ನಾಗಿಸಿ ತಮ್ಮ ಕೆಲಸವನ್ನು ಮಾಡುವುದು ಕೂಡ ಭಯೋತ್ಪಾದನೆಗೆ ಸಮಾನ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

Attack on Urwa police PSI is an act of terrorism: MP Kateel-1ನಗರದ ಎಜೆ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಉರ್ವ ಠಾಣೆಯ ಎಎಸ್ಐ ಐತಪ್ಪ ಅವರ ಆರೋಗ್ಯ ವಿಚಾರಣೆಗೆ ಭೇಟಿ ನೀಡಿದ ಸಂದರ್ಭ ಎಪ್ರಿಲ್ 5ರಂದು  ನಗರದ ಲೇಡಿಹಿಲ್ ವೃತ್ತದಲ್ಲಿ ನಡೆದಿದ್ದ ಎಎಸ್ಐ ಐತಪ್ಪ ಅವರ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಸಿದ್ದರಾಮಯ್ಯನವರ ಸರ್ಕಾರ ಬಂದ ಮೇಲೆ ಜನಸಾಮಾನ್ಯರಿಗೆ ರಕ್ಷಣೆ ಇಲ್ಲ. ಇದರ ಬಗ್ಗೆ ಗಂಭೀರ ಯೋಚನೆ ಗೃಹ ಇಲಾಖೆಯಿಂದ ಇದುವರೆಗೂ ಬಂದಿಲ್ಲ. ರುದ್ರೇಶ್ ನಿಂದ ಹಿಡಿದು ಪ್ರಶಾಂತ್ ನವರೆಗಿನ ಹತ್ಯೆ ನಡೆದರೂ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ ಎಂದರು.

ಗಣಪತಿ ಆತ್ಮಹತ್ಯೆಯ ನಂತರವಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು. ಇಲಾಖೆಯ ಮತ್ತು ಸರ್ಕಾರದ ಮೌನದಿಂದಾಗಿ ಇವತ್ತು ಇಲ್ಲಿ ಗೂಡಂಗಿರಿಯ ಪ್ರವೃತ್ತಿ, ಭಯೋತ್ಪಾದನೆ ಮಾನಸಿಕತೆ ಜಾಸ್ತಿಯಾಗುತ್ತಿದೆ. ಇದರ ಹಿಂದಿರುವ ತುಷ್ಠೀಕರಣ ನೀತಿಯಿಂದಾಗಿ ಹತ್ಯೆಗಳು, ಹಲ್ಲೆಗಳು ನಿರಂತರವಾಗಿ ನಡೆದಾಗಲೂ ನಿಯಂತ್ರಣ ಮಾಡಲಾಗದ ಸರ್ಕಾರದ ಮೌನ ನೀತಿಯಿಂದಾಗಿ ನಮಗೆ ರಕ್ಷಣೆ ನೀಡುವಂತಹ ರಕ್ಷಕರ ಮೇಲಿನ ಹಲ್ಲೆಗಳು ನಡೆಯುತ್ತಿದೆ. ಮಂಗಳೂರಿನ ಇತಿಹಾಸದಲ್ಲಿ ಇಂತಹ ಮೂರ್ನಾಲ್ಕು ಘಟನೆಗಳು ನಡೆದರೂ ಸರ್ಕಾರ ಮೌನವಾಗಿದೆ ಎಂದರು.

ಗೂಡಂಗಿರಿಯ ಕೆಲಸವನ್ನು ಯಾವುದೇ ಸಂಘಟನೆಯಿಂದ ನಡೆದರೂ ಅದಕ್ಕೆ ಸರ್ಕಾರ ಅವಕಾಶ  ಕೊಡಬಾರದು. ಸೂಕ್ತ ಕ್ರಮ ಕೈಗೊಂಡು ಆರೋಪಿಗಳನ್ನು ಬಂಧಿಸಬೇಕು. ಕೇರಳದಲ್ಲಿರುವ ಐಸಿಎಸ್ ಚಟುವಟಿಕೆಯು ಈಗ ಕರಾವಳಿ ಪ್ರದೇಶಕ್ಕೆ ಬಂದು,ಇಲ್ಲಿ ದಾಂದಳೆ ನಡೆಸುತ್ತಿದೆ. ಮೊನ್ನೆ ನಡೆದ ಪಿಎಸ್ ಮೇಲಿನ ಹಲ್ಲೆಯೂ ಕೂಡ ಇದೇ ರೀತಿಯದ್ದು. ಪೊಲೀಸ್ ಇಲಾಖೆ ಮೇಲೆ ಇಂತಹ ಕೆಲಸ ಮಾಡೋ ಧೈರ್ಯ ಇದುವರೆಗೂ . ಬಂದಿಲ್ಲ. ಇಂತಹ ಧೈರ್ಯ ಬರಬೇಕಾದರೆ ಅದರ ಹಿಂದೆ ಶಕ್ತಿ ಇದೆ. ಆ ಶಕ್ತಿ, ಷಡ್ಯಂತರ ಯಾವುದು ಎಂದು ಕಂಡು ಹಿಡಿದು ಇಂತಹ ಘಟನೆಗಳು ಮುಂದೆ ನಡೆಯದಂತೆ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದರು.

ಈ ಸಂದರ್ಭ ಭಜರಂಗದ ದಳದ ನಾಯಕ ಶರಣ್ ಪಂಪ್ ವೆಲ್ ಹಾಜರಿದ್ದರು.

See also  ಸುರತ್ಕಲ್ ನಲ್ಲಿ ವ್ಯಕ್ತಿಯ ತುಂಡರಿಸಿದ ಮೃತದೇಹ ಪತ್ತೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು