ಬಂಟ್ವಾಳ: ತಾಲೂಕಿನ ಜಕ್ರಿಬೆಟ್ಟು ನೇತ್ರಾವತಿ ನದಿ ಕಿನಾರೆಯಲ್ಲಿ ಸಿಡಿಲು ಬಡಿದ ಪರಿಣಾಮ ನಾಲ್ಕು ವರ್ಷದ ಮಗು ಸಹಿತ ಮೂವರು ಮೃತಪಟ್ಟ ದಾರುಣ ಘಟನೆ ಬುಧವಾರ ಸಂಜೆ ನಡೆದಿದೆ.
ತುಮಕೂರು ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡ ಹಳ್ಳಿ ಹೋಬಳಿಯ ಜಾಗರೆ ಎಂಬಲ್ಲಿನ ನಿವಾಸಿಗಳಾದ ಹನುಮಕ್ಕ, ಜಯಮ್ಮ ಹಾಗೂ ನಾಲ್ಕುವರ್ಷದ ಮಗು ಮೃತ ದುರ್ದೈವಿಯಾಘಿದ್ದು, ಸಿಡಿಲಿನ ತೀವ್ರತೆಗೆ ಗಾಯಗೊಂಡಿರುವ ಇನ್ನೊಂದು ಮಗುವಿಗೆ ಆಸ್ಪತೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಂಟ್ವಾಳದ ಜಕ್ರಿಬೆಟ್ಟುವಿನಲ್ಲಿ ಪುರಸಭೆ ವತಿಯಿಂದ ನಿರ್ಮಾಣಗೊಳ್ಳುತ್ತಿರುವ 52 ಕೋಟಿ ರೂ ವೆಚ್ಚದ ಎರಡನಢ ಹಂತದ ಕುಡಿಯುವ ನೀರಿನ ಯೋಜನೆಯ ಕಾಮಗಾರಿಗೆ ಕೆಸಲಕ್ಕೆಂದು ಹಲವು ಮಂದಿ ವಲಸೆ ಕಾರ್ಮಿಕರು ಬಂದಿದ್ದು, ಈ ಪೈಕಿ ಹನುಮಕ್ಕ ಹಾಗೂ ಜಯಮ್ಮ ರವರು ಮಕ್ಕಳನ್ನು ಬಂಡೆಯ ಮೇಲೆ ಕುಳ್ಳಿರಿಸಿ, ನದಿಯಲ್ಲಿ ಬಟ್ಟೆ ಒಗೆಯುತಿದ್ದ ವೇಳೆ ಈ ದುರ್ಘಟನೆ ನಡೆದಿದೆ.
ಘಟನೆಯ ತೀವ್ರತೆಗೆ ಜಯಮ್ಮ ಹಾಗೂ ಹನುಮಕ್ಕ ನೀರಲ್ಲಿ ಮುಳುಗಿದ್ದರೆ, ಬಂಡೆ ಮೇಲೆ ಗಂಭೀರ ಗಾಯಗೊಂಡಿದ್ದ ಮಕ್ಕಳನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, 4 ವರ್ಷದ ಮಗು ಆದಾಗಲೇ ಮೃತಪಟ್ಟಿತ್ತು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ನದಿಯಲ್ಲಿ ಬಟ್ಟಜಕ್ರಿಬೆಟ್ಟು ಇಬ್ರು ಮಹಿಳೆಯರು ನೇತ್ರಾತಿ ನದಿಯಲ್ಲಿ ಸ್ನಾನ ಮಾಡುತ್ತಿದ್ದರು. ಘಟನಾ ಸ್ಥಳಕ್ಕೆ ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ, ನಗರ ಠಾಣಾಧಿಕಾರಿ ರಕ್ಷಿತ್ ಗೌಡ ಭೇಟಿ ನೀಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳದಲ್ಲಿ ನೂರಾರು ಜನ ಜಮಾಯಿಸಿದ್ದಾರೆ