News Kannada
Sunday, September 25 2022

ಕರಾವಳಿ

ಗಾಂಧಿ ಮೈದಾನ ಆಸುಪಾಸು ಬಾವಿಗಳಿಗೆ ಲೀನವಾಗುತ್ತಿದೆ ಒಳಚರಂಡಿ ತ್ಯಾಜ್ಯ - 1 min read

Photo Credit :

ಗಾಂಧಿ ಮೈದಾನ ಆಸುಪಾಸು ಬಾವಿಗಳಿಗೆ ಲೀನವಾಗುತ್ತಿದೆ ಒಳಚರಂಡಿ ತ್ಯಾಜ್ಯ

ಕಾರ್ಕಳ: ಪುರಸಭಾ ವ್ಯಾಪ್ತಿಯಲ್ಲಿ ಅಸಮರ್ಪಕ ಒಳಚರಂಡಿ ದುರವ್ಯಸ್ಥೆಯಿಂದ ಗಾಂಧಿಮೈದಾನ ಪರಿಸರದಲ್ಲಿರುವ ಕುಡಿಯುವ ನೀರಿನ ಬಾವಿಗಳು ಕಲುಷಿತಗೊಂಡು ಗಬ್ಬುನಾತ ಬೀರುತ್ತಿದೆ.

ಸ್ಥಳಿಯ ನಾಗರಿಕರು ದೈನಂದಿನ ಚಟುವಟಿಕೆಗೆ ಅದೇ ಬಾವಿಯ ನೀರನ್ನು ಸದ್ಬಾಳಕೆ ಮಾಡುತ್ತಿದ್ದು ಮನೆಮಂದಿಗೆ ಕಾಣಿಸಿಕೊಂಡ ವಾಂತಿ ಬೇಧಿಯಿಂದಾಗಿ ಈ ಅಂಶ ಬೆಳಕಿಗೆ ಬರಲು ಕಾರಣವೆನ್ನಲಾಗಿದೆ.
ಅವೈಜ್ಞಾನಿಕ ನಿರ್ಮಾಣ
ಸುಮಾರು 27 ವರ್ಷಗಳ ಹಿಂದೆ  ಆರು ಕಿ.ಮೀ ವ್ಯಾಪ್ತಿಗೆ ಸೀಮಿತವಾಗಿ ನಿರ್ಮಿಸಲಾಗಿದ್ದ ಒಳಚರಂಡಿಯು ಅವೈಜ್ಞಾನಿಕವಾಗಿರುವುದು ಈ ಎಲ್ಲಾ ಸಮಸ್ಯೆಗೆ ಪೀಠಿಕೆಯಾಗಿದೆ. ಪರಿಣಾಮವಾಗಿ ಆನೆಕೆರೆ, ಹಿರಿಯಂಗಡಿ, ಕಾಬೆಟ್ಟು ಪರಿಸರಗಳಲ್ಲಿ ಫಲವತ್ತಾದ ಕೃಷಿ ಭೂಮಿ ನಶಿಸಿದ್ದು ಮಾತ್ರವಲ್ಲದೇ ಕುಡಿಯಲು ಉಪಯೋಗಿಸುತ್ತಿದ್ದ ಸಂಪತ್ತ್ಭರಿತ ಬಾವಿನೀರು ಕಲುಷಿತಗೊಂಡು ಗಬ್ಬುನಾತ ಬೀರುತ್ತಿದೆ. ಇದರಿಂದ ಸ್ಥಳೀಯ ಹಲವು ನಾಗರಿಕರು  ಸಾಂಕ್ರಾಮಿಕ ರೋಗಕ್ಕೆ ಅಗ್ಗಿಂದಾಗೆ ತುತ್ತಾಗಿ ನರಕಸದೃಶ ಬದುಕು ನಿರ್ವಹಿಸುತ್ತಿದ್ದಾರೆ.

ಆನೆಕೆರೆ ಪರಿಸರದಲ್ಲಿ ಹರಿದುಬರುತ್ತಿದೆ ತ್ಯಾಜ್ಯ
ನಗರದ ಪ್ರಮುಖ ತ್ಯಾಜ್ಯ ಹರಿದು ಹೋಗುವಂತಹ ಭಾರೀಗಾತ್ರದ ಪೈಪ್ವೊಂದು ಆನೆಕೆರೆ ಮೂಲಕವಾಗಿ ಕಾಬೆಟ್ಟು ಸಂಪರ್ಕಿಸುತ್ತಿದೆ. ಆನೆಕೆರೆ ಪರಿಸರದಲ್ಲಿ ತ್ಯಾಜ್ಯ ಹರಿದು ಹೋಗುವ ಪೈಪ್ ಬಿರುಕು ಕಾಣಿಸಿಕೊಂಡು ಪಕ್ಕದ ಕಲುವೆಯಲ್ಲಿ ಶೇಖರಣೆಗೊಂಡು ಗಬ್ಬುನಾತ ಬೀರುತ್ತಿದೆ. ತ್ಯಾಜ್ಯನೀರು ಮತ್ತೊಂದು ಪಾಶ್ರ್ವದಲ್ಲಿ ಇರುವಂತಹ ಗಾಂಧಿಮೈದಾನ ಪಕ್ಕದ ವೀರಭದ್ರ ದೇವಾಲಯದ ಬಲಪಾಶ್ರ್ವದ ಹಲವು ಮನೆಗಳ ಬಾವಿಗಳಿಗೂ ಲೀನವಾಗಿದೆ.  ತ್ಯಾಜ್ಯದ ಹೊರಸೋಸುವ ವಿಷದ ಅಂಶದಿಂದಾಗಿ ಬಾವಿಯಲ್ಲಿರುವ ಜಲಚರಗಳು ಜೀವಕಳೆದುಕೊಂಡು ತೇಲುತ್ತಿರುವುದು ಕಂಡುಬಂದಿದೆ.
ಒಳಚರಂಡಿ ದುಸ್ಥಿತಿಯಿಂದಲೇ ಕೆಟ್ಟು ಹೋದ ಬಾವಿಗಳು
ಪುರಸಭಾ ವ್ಯಾಪ್ತಿಯಲ್ಲಿ ಹಾದು ಹೋಗಿರುವ ಒಳಚರಂಡಿ ದುರವಸ್ಥೆಯಿಂದಾಗಿ ಅದರ ಅಸುಪಾಸುಗಳ ಬಹುತೇಕ ಬಾವಿಗಳ ನೀರು ಕಲುಷಿತ ಹೋಗಿರಲು ಕಾರಣವಾಗಿದೆ. ಅನಂತಶಯನ, ಮಾರ್ಕೇಟ್ ರಸ್ತೆ, ಮೂರು ಮಾರ್ಗ, ವೆಂಕಟರಮಣ ದೇವಳ, ಆನೆಕರೆ, ಕಾಬೆಟ್ಟು,ಬಂಡಿಮಠ ಪರಿಸರದ ಬಹುತೇಕ ಬಾವಿಗಳು ಸ್ಥಿತಿ-ಗತಿ ಇದಕ್ಕೆ ತಾಜ ನಿದರ್ಶನವಾಗಿದೆ. ಕೆಲಭಾಗಗಳಲ್ಲಿ ಕಾರ್ಕಳ ಪುರಸಭೆ ಒಳಚರಂಡಿ ದುರಸ್ಥಿ ಪಡಿಸಿ ಬಾವಿಗಳ ಶುಚಿತ್ವ ಕಾರ್ಯ ನಡೆಸಿರುವುದರಿಂದ ಪ್ರಸ್ತುವ ಕೆಲ ಬಾವಿಗಳ ನೀರು ಮರುಬಳಕೆ ಮಾಡಲಾಗುತ್ತಿದೆ.
ತರಿತ್ವವಾಗಿ ದುರಸ್ಥಿ ಕಾರ್ಯ ನಡೆಸಲಾಗುವುದು-ಮೇಬಲ್ ಡಿಸೋಜಾ  
ಒಳಚರಂಡಿ ದುರಸ್ಥಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಕಲುಷಿತಗೊಂಡಿರುವ ಬಾವಿಗಳ ಬಗ್ಗೆ ಗಮನಹರಿಸಲಾಗುವುದು. ಇಂತಹ ಸಮಸ್ಸೆ ತಲೆದೋರಿರುವುದು ಇದು ಮೊದಲ ಬಾರಿ.-ತಾರಾನಾಥ ರುದ್ರಶೆಟ್ಟಿಗಾರ್ ಕಂಪೌಂಡ್
ಇಂತಹ ಸಮಸ್ಯೆ ಇದು ಮೊದಲ ಬಾರಿಗೆ ತಲೆದೋರಿದೆ. ಒಂದೆಡೆಯಲ್ಲಿ ಕುಡಿಯುವು ನೀರಿನ ತಾತ್ವಾರ ಎದುರಾಗಿದ್ದು ಇನ್ನೊಂದೆಡೆಯಲ್ಲಿ ಕುಡಿಯುವ ನೀರಿನ ಬಾವಿ ಕಲುಷಿತಗೊಂಡಿದೆ. ಕಾರ್ಕಳ ಪುರಸಭೆ ಸಮಸ್ಯೆಗೆ ನೇರ ಕಾರಣವಾಗಿದೆ.  
ಮರೀಚಿಕೆಯಾಗಿ ಉಳಿದ ಸಮಗ್ರ ಒಳಚರಂಡಿ ಯೋಜನೆ
ಕರ್ನಾಟಕ ರಾಜ್ಯ ಸರಕಾರವು ನಗರ ನೈರ್ಮಲ್ಯಕರಣ ಯೋಜನೆಯಡಿಯಲ್ಲಿ ಸುಮಾರು 55 ಕೋಟಿ ರೂ. ವೆಚ್ಚದಲ್ಲಿ ಉದ್ದೇಶಿಲಾಗಿದ್ದ ಸಮಗ್ರ ಒಳಚರಂಡಿ ಯೋಜನೆಗೆ ಮುಂದಾಗಿ ಮೊದಲ ಹಂತ ಸಮಲೋಚನಾ ಹಾಗೂ ವಿಶೇಷ ಸಭೆಯು 2014 ನವಂಬರ್ 24ರಂದು ಪುರಸಭಾ ಸಭಾಂಗಣದಲ್ಲಿ ಶಾಸಕ ಸುನೀಲ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದಿತ್ತು.
2011ರ ಜನಗಣತಿ ಪ್ರಕಾರ 25,800 ಜನಸಂಖ್ಯೆಗನುಗುಣವಾಗಿ ಜತೆಗೆ ಭವಿಷ್ಯದ ದೃಷ್ಟಿಕೋನವನ್ನು ಮುಂದಿಟ್ಟುಕೊಂಡು ಯೋಜನೆಯನ್ನು ಸಿದ್ದಪಡಿಸಲಾಗಿತ್ತಾದರೂ ಇನ್ನೂ ಮರೀಚಿಕೆಯಾಗಿ ಉಳಿದಿದೆ.

See also  ಸುಳ್ಯ ನಗರದಲ್ಲಿ ನಡೆಯದ ಕಸ ಸಂಗ್ರಹ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು