News Kannada
Thursday, September 29 2022

ಕರಾವಳಿ

ಜಲೀಲ್ ಹತ್ಯೆ: ದೇಹದಲ್ಲಿ 23 ಗಾಯದ ಗುರುತುಗಳು ಪತ್ತೆ - 1 min read

Photo Credit :

ಜಲೀಲ್ ಹತ್ಯೆ: ದೇಹದಲ್ಲಿ 23 ಗಾಯದ ಗುರುತುಗಳು ಪತ್ತೆ

ಬಂಟ್ವಾಳ: ದುಷ್ಕರ್ಮಿಗಳ ತಂಡದಿಂದ ಬರ್ಬರವಾಗಿ ಹತ್ಯೆಗೀಡಾದ ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಬ್ದುಲ್ ಜಲೀಲ್ ಕರೋಪಾಡಿ ಅವರ ಮೃತದೇಹ  ದೇರಳಕಟ್ಟೆ ಆಸ್ಪತ್ರೆಯಿಂದ ಮನೆಗೆ ಆಗಮಿಸಿದ್ದು, ಸಚಿವರು, ಶಾಸಕರು, ವಿವಿಧ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ವಿವಿಧ ಪಕ್ಷದ ಮುಖಂಡರು ಸಮ್ಮಖದಲ್ಲಿ ದಫನ ಮಾಡಲಾಯಿತು.

ಬೆಳಿಗ್ಗೆ 9 ಗಂಟೆಗೆ ಮೃತದೇಹವನ್ನು ಆಂಬ್ಯುಲೆನ್ಸ್ ಮೂಲಕ ಮನೆ ತರಲಾಯಿತು. ಬಳಿಕ ಕರೋಪಾಡಿ ಗ್ರಾಮದ ಸಮ್ಮಡ್ಕ ಮಸೀದಿಯಲ್ಲಿ ಧರ್ಮಗುರುಗಳ ವಿಧಿವಿಧಾನಗಳ ಮೂಲಕ ದಫನ ಮಾಡಲಾಯಿತು. ಜಲೀಲ್ ಅವರ ಸಂಬಂಧಿರಲ್ಲಿ ದುಃಖ ಮುಗಿಲು ಮುಟ್ಟಿದೆ. ತಾಲ್ಲೂಕು ಪಂಚಾಯಿತಿ ಸದಸ್ಯ, ಜಲೀಲ್ ಅವರ ತಂದೆ ಉಸ್ಮಾನ್ ಹಾಜಿ ಕರೋಪಾಡಿ ಹಾಗೂ ಮೂವರು ಸಹೋದರರು  ಜಲೀಲ್ ಅವರನ್ನು ನೆನೆಸಿಕೊಂಡು ಕಣ್ಣೀರು ಸುರಿಸುತ್ತಿರುವ ದೃಶ್ಯ ಎಲ್ಲರ ಮನಸ್ಸನ್ನು ಕರಗುವಂತೆ ಮಾಡಿದೆ. ಜಲೀಲ್ ಅವರ ಮನೆಗೆ ವಿವಿಧ ಪಕ್ಷಗಳ ಹಾಗೂ ವಿವಿಧ ಧರ್ಮಗಳ ಮುಖಂಡರು ಆಗಮಿಸಿ ಅಂತಿಮ ದರ್ಶನ ಪಡೆದರು.

ಸಯ್ಯಿದ್ ಮುಖ್ತಾರ್ ತಂಙಳ್ ಕುಂಬೋಳ್, ಕಾವಳಕಟ್ಟೆ ಹಝ್ರತ್ ತಂಙಳ್, ಅಲಿ ತಂಙಳ್ ಕುಂಬೋಳ್ ಮೊದಲಾದವರು ಭೇಟಿ ನೀಡಿ ವಿಧಿವಿಧಾನಗಳನ್ನು ನಡೆಸಿದರು.  ಜಿಲ್ಲಾ ಉಸ್ತುವಾರಿ ರಮಾನಾಥ ರೈ ಅವರು ಈ ಸಂದರ್ಭ ಮಾಧ್ಯಮದವರ ಜತೆ ಮಾತನಾಡಿ ಜಲೀಲ್ ಅವರ ನನ್ನ ಪ್ರೀತಿಯ ಹುಡುಗ, ಊರಿನ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸಿದವರು. ಯಾರ ಜತೆಯೂ ಹಗೆತನ ಇಟ್ಟವರಲ್ಲ. ಅವರ ಸಾವಿನ ನೋವು ಮರೆಯಲು ಸಾಧ್ಯವಾಗುತ್ತಿಲ್ಲ. ಇದು ನನ್ನ ಮನಸ್ಸಿಗೆ ತುಂಬ ಬೇಸರ ತಂದಿದೆ. ಈ ಪ್ರಕರಣವನ್ನು ಶ್ರೀಘ್ರವೇ ಪತ್ತೆ ಹಚ್ಚುವಂತೆ ಪೊಲೀಸ್ ಇಲಾಖೆಗೆ ಒತ್ತಡ ಹಾಕಲಾಗಿದೆ. ಎರಡು ದಿನದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚುವಂತೆ ಪೊಲೀಸ್ ಇಲಾಖೆ ಭರವಸೆ ನೀಡಿದ್ದಾರೆ ಎಂದು ತಿಳಿಸುತ್ತಾ ದುಃಖ ತಾಳಲಾರದೇ ಕಣ್ಣೀರು ಸುರಿಸಿದರು.

ಆಹಾರ ಸಚಿವ ಯು.ಟಿ ಖಾದರ್, ಗೇರು ನಿಗಮದ ಅಧ್ಯಕ್ಷ ಬಿ.ಎಚ್ ಖಾದರ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಂ.ಎಸ್ ಮಹಮ್ಮದ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪದ್ಮಶೇಖರ್ ಜೈನ್, ಅಕ್ರಮ-ಸಕ್ರಮ ಸಮಿತಿಯ ಮಾಯಿಲಪ್ಪ ಸಾಲ್ಯಾನ್,  ಕಾಸರಗೋಡು ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷದ್ ವರ್ಕಾಡಿ, ಬಂಟ್ವಾಳ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ವಿವಿಧ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರುಗಳು ಸ್ಥಳಕ್ಕೆ ಬೇಟಿ ನೀಡಿ ಅಂತಿಮ ದರ್ಶನ ಪಡೆದರು.

23 ಗಾಯದ ಗುರುತುಗಳು:
ಜಲೀಲ್ ಅವರ ಮೇಲೆ ದುಷ್ಕರ್ಮಿಗಳ ತಂಡ ತಲವಾರ್ ನಿಂದ ಯದ್ವಾತದ್ವಾ ಹಲ್ಲೆ ನಡೆಸಿದ ಪರಿಣಾಮ ದೇಹದಲ್ಲಿ 23 ಗಾಯದ ಗುರುಗಳು ಕಾಣಿಸಿಕೊಂಡಿದೆ. ಕುತ್ತಿಗೆ ಮುಂಭಾಗಕ್ಕೆ ತಲ್ವಾರ್ ಬೀಸಿದ್ದರಿಂದ ಬಲವಾದ ಹೊಡೆತ ಬಿದ್ದು  ಅವರು ಮೃತಪಟ್ಟಿದ್ದಾರೆ ಹೊರತು ಬೇರೆ ಕಡೆಯಾದ ಗಾಯಗಳಿಂದ ಅವರ ಜೀವಕ್ಕೆ ಅಪಾಯವಿರಲಿಲ್ಲ ಎಂದು ವೈದ್ಯರು ತಿಳಿಸಿರುವುದಾಗಿ ಕುಟುಂಬಿಕರು ತಿಳಿಸಿದ್ದಾರೆ.

See also  ಕ್ರಿಸ್ಮಸ್ ಸಂದರ್ಭ ಭಜನಾ ಮಂದಿರಕ್ಕೆ ಭೇಟಿಯಿತ್ತ ಮಂಗಳೂರು ಬಿಷಪ್

ಈ ಪ್ರಕರಣ ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ ಜಿಲ್ಲಾ ಎಸ್.ಪಿ ಭೂಷಣ್ ರಾವ್ ಬೊರಸೆ ನೇತೃತ್ವದಲ್ಲಿ ಐದು ತಂಡಗಳನ್ನು ರಚಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಹಲವು ಕ್ರಿಮಿನಲ್ ಹಿನ್ನೆಲೆಯುಳ್ಳ ಹಾಗೂ ಹಲವು ಸಮಾಜ ದ್ರೋಹಿ ಚಟುವಟಿಕೆಯಲ್ಲಿ ಭಾಗಿಯಾಗಿರುವ ಆರೋಪಿಗಳಿಂದ ಕೃತ್ಯ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು