News Kannada
Wednesday, October 05 2022

ಕರಾವಳಿ

ಕೇಂದ್ರ ಸರ್ಕಾರದ ಸಶಕ್ತೀಕರಣ ರಾಷ್ಟ್ರಪ್ರಶಸ್ತಿಗೆ ಕೊಡಗು ಸಂಪಾಜೆ ಗ್ರಾಮ ಪಂಚಾಯಿತಿ ಆಯ್ಕೆ - 1 min read

Photo Credit :

 ಕೇಂದ್ರ ಸರ್ಕಾರದ ಸಶಕ್ತೀಕರಣ ರಾಷ್ಟ್ರಪ್ರಶಸ್ತಿಗೆ ಕೊಡಗು ಸಂಪಾಜೆ ಗ್ರಾಮ ಪಂಚಾಯಿತಿ ಆಯ್ಕೆ

ಸುಳ್ಯ: ಕೇಂದ್ರ ಸರಕಾರ ನೀಡುವ ಸಶಕ್ತೀಕರಣ ರಾಷ್ಟ್ರಪ್ರಶಸ್ತಿಗೆ ದ.ಕ. ಗಡಿ ಪ್ರದೇಶದಲ್ಲಿರುವ ಕೊಡಗು ಸಂಪಾಜೆ ಗ್ರಾಮ ಪಂಚಾಯಿತಿ ಆಯ್ಕೆಯಾಗಿದೆ.

ಗ್ರಾಮ ವ್ಯಾಪ್ತಿಯಲ್ಲಿ ಕೈಗೆತ್ತಿಕೊಳ್ಳಲಾದ ಅಭಿವೃದ್ಧಿಕಾರ್ಯಗಳಿಗಾಗಿ ಈ ಪ್ರಶಸ್ತಿಯು ದೊರೆತಿದೆ. ಕೊಡಗು ಸಂಪಾಜೆ ಗ್ರಾಮ ಪಂಚಾಯಿತಿನಲ್ಲಿ ನೈಸರ್ಗಿಕ ನೀರನ್ನು ಉಪಯೋಗಿಸಿಕೊಂಡು ಗ್ರಾಮಕ್ಕೆ ಹೆಚ್ಚಾಗಿ ಸರ ಬರಾಜು ಮಾಡಲಾಗುತ್ತಿದೆ. ಕೊಯನಾಡಿನ ಪಾಂಬೆಚ್ಚಾಲ್, ಚಿಟ್ಟೆಗಾನ, ಕುಂಟಿಕಾನ,  ಮಂಞಡ್ಕ, ಗುಡ್ಡೆಗದ್ದೆ, ಅರೆಕಲ್ಲು, ಕಲ್ಯಾಳ ಈ ಭಾಗದಲ್ಲಿ  ಗುಡ್ಡದಲ್ಲಿ ಬರುವ ನೀರಿಗೆ ಪೈಪ್ ಅಳವಡಿಸಿ, ಟ್ಯಾಂಕ್ ಮೂಲಕ ಗ್ರಾಮಸ್ಥರಿಗೆ ನೀಡಲಾಗುತ್ತಿದೆ. ಇನ್ನುಳಿದಂತೆ ಅಭಿವೃದ್ಧಿ ಅನುದಾನ ಮತ್ತು ಸ್ವಂತ ನಿಧಿಯನ್ನು ಸದ್ಭಳಕೆ, ವಸತಿ ಯೋಜನೆಗಳ ಗುರಿ ಸಾಧನೆ, ಗ್ರಾಮ ವ್ಯಾಪ್ತಿಯಲ್ಲಿ ಆಡಳಿತ ಸಮಿತಿ ಸಭೆ, ಗ್ರಾಮ ನೈರ್ಮಲ್ಯ ಸಮಿತಿ ಸಭೆ, ವಿವಿಧ ಸೌಕರ್ಯ ಸಮಿತಿ ಸಭೆ, ಗ್ರಾಮ ಸಭೆ, ವಾರ್ಡ್ ಸಭೆ, ಅಂಗನವಾಡಿಗಳ ಸಭೆ, ಆರೋಗ್ಯ ಜಾಥಾ, ಮಾಹಿತಿ ಕಾರ್ಯಾಗಾರವನ್ನು ಕ್ರಮ ಬದ್ಧವಾಗಿ ನಿರ್ವಹಿಸಿರುವುದು. ಸರಕಾರದಿಂದ ಬರುವ ಎಲ್ಲಾ ಅನುದಾನವನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆಯೊಂದಿಗೆ ಯೋಜನೆಗಳ ಯಶಸ್ವಿ ಅನುಷ್ಠಾನ, ಶೇ.100 ಮನೆಗಳಲ್ಲಿಯೂ ಶೌಚಾಲಯ ಇರುವುದು ಇತ್ಯಾದಿ ಕಾರ್ಯ ಕ್ರಮಗಳನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಗ್ರಾಮದಲ್ಲಿ 776 ಕುಟುಂಬ ಗಳಿದ್ದು ಒಟ್ಟು 3859 ಮಂದಿ ಜನರಿದ್ದಾರೆ. ರಾಜ್ಯದಲ್ಲಿ ನಾಲ್ಕು ಗ್ರಾಮ ಪಂಚಾಯಿತಿಗಳನ್ನು ಕೇಂದ್ರ ಸಕರ್ಾರ ಆಯ್ಕೆ ಮಾಡಲಾಗಿದ್ದು, ಅದರಲ್ಲಿ ಕೊಡಗು ಸಂಪಾಜೆ ಗ್ರಾಮ ಪಂಚಾಯಿತಿ ಕೂಡಾ ಸೇರಿದೆ. ಪಂಚಾಯಿತಿ ಆಡಳಿತ: ಕೊಡಗು ಸಂಪಾಜೆ ಗ್ರಾಮ ಪಂಚಾಯಿತಿನ ಅಧ್ಯಕ್ಷರಾಗಿ ಬಾಲಚಂದ್ರ ಕಳಗಿಯವರು ಸೇವೆ ಸಲ್ಲಿಸುತ್ತಿದ್ದಾರೆ. ಪಂಚಾಯಿತಿನ ಉಪಾಧ್ಯಕ್ಷರಾಗಿ ಸುಂದರ್ ಬಿ.ಆರ್., ಸದಸ್ಯರುಗಳಾಗಿ ಕುಮಾರ್ ಚಿದ್ಗಾರ್, ರಾಜೇಶ್ ಬಿ.ಎನ್., ಗಿರಿಜಾ ಮೋಹನ ಸಂಪಾಜೆ, ಮಾಲತಿ ನಾರಾಯಣ ಕೊಯನಾಡು, ಯಮುನಾ ನಾರಾಯಣ ಕೊಯನಾಡು, ರಾಜೇಶ್ವರಿ ವಿದ್ಯಾಸಾಗರ್ ಕೊಯನಾಡು ಆಡಳಿತ ಸಮಿತಿಯಲ್ಲಿದ್ದಾರೆ.

ಸಿಬ್ಬಂದಿ ವರ್ಗ: ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಶ್ರೀಮತಿ ಶೋಭಾ ರಾಣಿ ಪಿ.ಎಲ್., ಕರ ವಸೂಲಿಗಾರರಾಗಿ ಹರೀಶ್ ಪಿ.ಎಸ್., ವಾಟರ್ ಮ್ಯಾನ್ ದೇವಪ್ಪ ಕೆ.ಎಸ್., ಕ್ಲಕರ್್ ಕಂ ಕಂಪ್ಯೂಟರ್ ಆಪರೇಟರ್ ಲಸಿತಾ ಎ.ಎಸ್., ಕಚೇರಿ ಸಹಾಯಕ ಗಣೇಶ್ ಎ.ಎಸ್. ಕರ್ತವ್ಯದಲ್ಲಿದ್ದಾರೆ.

ಅದ್ದೂರಿ ಸ್ವಾಗತಕ್ಕೆ ನಿರ್ಧಾರ:
ಎ.24ರಂದು ಸೋಮವಾರ ಲಕ್ನೋದಲ್ಲಿ ನಡೆದ ಸಮಾರಂಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಲಚಂದ್ರ ಕಳಗಿ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶೋಭಾರಾಣಿಯವರು ಪ್ರಶಸ್ತಿ ಸ್ವೀಕರಿಸಿದ್ದಾರೆ. ಪ್ರಶಸ್ತಿ ಸ್ವೀಕರಿಸಿ ಹಿಂತಿರುಗುವ ಸಂದರ್ಭದಲ್ಲಿ ಗ್ರಾಮದಲ್ಲಿ  ಅದ್ದೂರಿ ಸ್ವಾಗತ ನೀಡಲು ನಿರ್ಧರಿಸಲಾಗಿದೆ. ಗ್ರಾಮದ ಜನರಿಗೆ ಅಗತ್ಯವೆನಿಸಿರುವ ರಸ್ತೆ, ನೀರಿನ ಸೌಲಭ್ಯ ಗಳನ್ನು ಸಮರ್ಪಕವಾಗಿ ಎಲ್ಲರ ಸಹಕಾರದಿಂದ ಮಾಡಲಾಗಿದೆ. ಶೇ.100 ಮನೆಗಳಿಗೆ ವಿದ್ಯುತ್ ಸಂಪರ್ಕವಿದೆ. ವಿದ್ಯುತ್ ಬಳಸದೆ ಸುಮಾರು 600 ಮನೆಗಳಿಗೆ ನೈಸರ್ಗಿಕ ನೀರನ್ನು ಸರಬರಾಜು ಮಾಡಲಾಗುತ್ತಿದೆ. ವಸತಿ ಯೋಜನೆಯಲ್ಲಿ ಶೇ.100 ಗುರಿ ಸಾಧಿಸಿದ್ದೇವೆ. ಸರಕಾರ ನೀಡುವ ಎಲ್ಲ ಅನುದಾನಗಳನ್ನು ಬಳಸಿಕೊಂಡು ಗ್ರಾಮದ ಅಭಿವೃದ್ದಿಗೆ ಶ್ರಮಿಸಿದ್ದೇವೆ. ಶಾಸಕರಾಗಿರುವ ಕೆ.ಜಿ.ಬೋಪಯ್ಯ ಹಾಗೂ ಎಲ್ಲ ಜನಪ್ರತಿನಿಧಿಗಳು, ಪಂಚಾಯಿತಿ ಸದಸ್ಯರುಗಳು, ಅಧಿಕಾರಿಗಳು, ಸಿಬ್ಬಂದಿಗಳು, ಗ್ರಾಮಸ್ಥರ ಸಹಕಾರದಿಂದ ಈ ಪ್ರಶಸ್ತಿ ಲಭಿಸಿದೆ.
-ಬಾಲಚಂದ್ರ ಕಳಗಿ, ಅಧ್ಯಕ್ಷ, ಗ್ರಾಮ ಪಂಚಾಯಿತಿ ಸಂಪಾಜೆ

See also  ಆನ್ ಲೈನ್ ಪಾಠಕ್ಕಾಗಿ ಮರ ಏರಿ ಕುಳಿತ ವಿದ್ಯಾರ್ಥಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು