ಬಂಟ್ವಾಳ: ಕುಡಿಯುವ ನೀರಿನ ಸಮಸ್ಯೆ ಕಳೆದ ವರ್ಷ ಮಂಗಳೂರನ್ನು ಬಾಧಿಸಿತ್ತು. ಈ ಬಾರಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿರವುದರಿಂದ ಕಳೆದ ಬಾರಿಯಷ್ಟು ನೀರಿನ ಸಮಸ್ಯೆ ಬಾಧಿಸಿಲ್ಲ. ಆದರೂ ನಾಗರೀಕರು ನೀರನ್ನು ಅನಗತ್ಯ ಪೋಲುಮಾಡದೆ ಜಾಗರೂಕತೆಯಿಂದ ಬಳಸಬೇಕು ಎಂದು ವಿಧಾನಪರಿಷತ್ತಿನ ಮುಖ್ಯ ಸಚೇತಕ ಐವನ್ ಡಿ’ಸೋಜ ಹೇಳಿದರು.
ಅವರು ಗುರುವಾರ ತುಂಬೆ ವೆಂಟೆಡ್ ಡ್ಯಾಂಗೆ ಭೇಟಿ ನೀಡಿದ ನಂತರ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿದ ಮಾತನಾಡಿದ ಅವರು, ಕಳೆದ ವರ್ಷ ಎಎಂಆರ್ ಡ್ಯಾಂನಲ್ಲಿ 0.ಮೀಟರ್ ಇತ್ತು ಆದರೆ ಈ ವರ್ಷ 3.99 ಮೀಟರ್ ನೀರಿದೆ. ತುಂಬೆ ವೆಂಟೆಡ್ ಡ್ಯಾಂನಲ್ಲಿ ಕಳೆದ ವರ್ಷ 1.9 ಮೀಟರ್ ಇತ್ತು ಈ ವರ್ಷ 5 ಮೀಟರ್ ನೀರಿದೆ ಈಗ ಸಂಗ್ರಹಿಸಿದ ನೀರು ಒಂದು ತಿಂಗಳು ಪೂರ್ತಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ದಿನಂಪ್ರತಿ ನೀರು ಬಿಡಲಾಗುವುದು ಎಂದರು.
ಸಮುದ್ರ ನೀರು ಶುದ್ದೀಕರಣ: ಈಗ ತುಂಬೆ ಡ್ಯಾಂನಲ್ಲಿ ಸಂಗ್ರಹಿಸಿದ್ದ ನೀರು ಪ್ರಕೃತಿದತ್ತವಾದ ಆಗಿದ್ದು ಒಂದು ವೇಳೆ ಮಳೆ ಬಾರದಿದ್ದರೆ ಸಮುದ್ರದ ನೀರನ್ನು ಶುದ್ದೀಕರಿಸಿ ಕುಡಿಯುವ ನೀರಾಗಿ ಪರಿವರ್ತಿಸುವ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಉದ್ದೇಶ ನಮ್ಮಲ್ಲಿದೆ. ಇದಕ್ಕೆ ಸರಕಾರ ಸುಮಾರು 8.71 ಕೋಟಿ ಹಣವನ್ನು ತೆಗೆದಿರಿಸಿದೆ. ಈ ಯೋಜನೆಯಿಂದ ನಿರಂತರ ನೀರು ಲಭ್ಯವಾಗುತ್ತಿದೆ. ಆದರೆ ಇದು ದುಬಾರಿಯಾಗಿರುತ್ತದೆ. ಲೀಟರಿಗೆ ಸುಮಾರು 4 ರೂಪಾಯಿ ವೆಚ್ಚ ತಗುಲಲಿದೆ. ತುಂಬೆ ವೆಂಟೆಡ್ ಡ್ಯಾಂನ್ನು ಈಗ ನಿಲ್ಲಿಸಿದ 5.0 ಮೀಟರನ್ನು 6 ಮೀಟರ್ ನಷ್ಟು ಎತ್ತರಕ್ಕೆ ಮಾಡಿದರೆ ಮುಂದೆ ನಿರಂತರ ದ.ಕ. ಜಿಲ್ಲೆಗೆ ಕುಡಿಯುವ ನೀರು ನೀಡಬಹುದು ಈ ಯೋಜನೆಗೆ ಇದಕ್ಕೆ 25 ಕೋಟಿಯಷ್ಟು ಹಣ ಬೇಕಾಗಿದ್ದು ಮುಖ್ಯಮಂತ್ರಿಯವರ ಜೊತೆ ಅಧಿಕಾರಿ ವರ್ಗದವರೊಂದಿಗೆ ಒತ್ತಡ ಮಾಡಿ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಕೆರೆ ಸಂಜೀವಿನಿ ದುರಸ್ಥಿ: ಕೆರೆ ನೀರನ್ನು ಕುಡಿಯುವ ನೀರನ್ನಾಗಿ ಮಾಡಲು ಸರಕಾರದ ವತಿಯಿಂದ ಅಮೃತ ಯೋಜನೆಯಲ್ಲಿ ಜಿಲ್ಲೆಯ ಹೆಚ್ಚಿನ ಕೆರೆಯನ್ನು ಪುನರುಜ್ಜೀವನಗೊಳಿಸಿ ಕುಡಿಯಲು ಯೋಗ್ಯವಾಗುವಂತೆ ನೀರನ್ನು ಬದಲಾಯಿಸಲಾಗುವುದು. ಜಿಲ್ಲೆಯಲ್ಲಿ 128 ಬೋರ್ವೆಲ್ ಕುಡಿಯಲು ಯೋಗ್ಯವಾದಂತಹದಾಗಿದ್ದು ಸುಸ್ಥಿತಿಯಲ್ಲಿಲ್ಲ 1.12 ಲಕ್ಷ ಹಣ ಇಟ್ಟಿದೆ. ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ನಿವಾರಿಸಲು ದುಡ್ಡಿನ ಸಮಸ್ಯೆ ಇಲ್ಲ. ಅಧಿಕಾರಿಗಳೊಂದಿಗೆ ಚರ್ಚಿಸಿ ಸರಿಯಾಗಿ ಜಾರಿಗೊಳಿಸಲಾಗುವುದು. ಜಿಲ್ಲೆಯಲ್ಲಿ 579 ಕಿಂಡಿ ಅಣೆಕಟ್ಟುಗಳಿದ್ದು 431 ಕಿಂಡಿ ಅಣೆಕಟ್ಟು ಸುಸ್ಥಿತಿಯಲ್ಲಿದೆ. 21 ಅಣೆಕಟ್ಟು ದುಸ್ಥಿತಿಯಲ್ಲಿದ್ದು ಎನ್ಆರ್ಇಜಿ ಮೂಲಕ ದುರಸ್ಥಿ ಮಾಡಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಡೆಪ್ಯೂಟಿ ಮೇಯರ್, ಸಚೇತಕರು, ಇಂಜಿನಿಯರ್, ಸುಪರಿಡೆಂಟ್, ಸಹಾಯಕ ಇಂಜಿನಿಯರ್ ಉಪಸ್ಥಿತರಿದ್ದರು.