ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ವೇಣೂರು ಠಾಣಾ ವ್ಯಾಪ್ತಿಯ ಗೋಳಿಯಂಗಡಿ ಬಳಿಯ ಅಂಗಡಿಗೆ ನುಗ್ಗಿ ಕಳ್ಳತನ ಮಾಡಿದ ಆರೋಪಿಯನ್ನು ವೇಣೂರು ಪೊಲೀಸರು ಮೂಡಬಿದ್ರೆಯ ನಿವಾಸಿ ಪ್ರಸಾದ್ ಪೂಜಾರಿಯನ್ನು ಬಂಧಿಸಿ ಆತನ ಬಳಿಯಿದ್ದ ಮೂರು ಮೊಬೈಲ್ ಮತ್ತು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿ ಪ್ರಸಾದ್ ಈ ಹಿಂದೆ ಮೂಡಬಿದ್ರೆ ಕಳವು ಕೇಸಿನಲ್ಲಿ 4 ವರ್ಷ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಜೈಲು ಶಿಕ್ಷೆ ಅನುಭವಿಸಿ ಇತ್ತಿಚೆಗೆ ಹೊರಬಂದಿದ್ದ.