ಮೂಡುಬಿದಿರೆ: ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಸಹ ಪ್ರಾಧ್ಯಾಪಕ ಮಹೇಶ್ ಕಲ್ಲೂಟಿ ಅವರು ಮಂಡಿಸಿದ `ಗ್ಲೋಬಲ್ ಕಾಂಟ್ರಿಬೂಷನ್ ರೋಬೊಸ್ಟ್ ಸೆಕ್ಯೂರ್ ಮಲ್ಟಿಚಾನೆಲ್ ರೂಟಿಂಗ್ ಪ್ರೋಟೋಕಾಲ್ ಎಂಬ ಕಂಪ್ಯೂಟರ್ ಸೈನ್ಸ್ ವಿಷಯಾಧಾರಿತ ಮಹಾಪ್ರಬಂಧಕ್ಕೆ ರಾಜಸ್ಥಾನದ ಡಾ.ಕೆ.ಎನ್. ಮೋದಿ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಮಹೇಶ್ ಕಲ್ಲೂಟಿ ಅವರು ಡಾ.ಮೋದಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಹರ್ಷಕುಮಾರ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು. ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ಟ್ರಸ್ಟಿ ವಿವೇಕ್ ಆಳ್ವ, ಪ್ರಾಂಶುಪಾಲ ಡಾ.ಪೀಟರ್ ಫೆರ್ನಾಂಡೀಸ್, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಪ್ರೊ. ಮಂಜುನಾಥ ಕೊಠಾರಿ, ಕಾಲೇಜಿನ ಪ್ರಾಧ್ಯಾಪಕರು ಪ್ರೊ. ಮಹೇಶ್ ಕಲ್ಲೂಟಿ ಅವರನ್ನು ಅಭಿನಂದಿಸಿದ್ದಾರೆ.