ಕಾಸರಗೋಡು: ಜಿಲ್ಲೆಯಲ್ಲಿ ಮಳೆಗಾಲ ಆರಂಭವಾದ 14 ದಿನಗಳ ಅವಧಿಯಲ್ಲಿ ಹತ್ತು ಲಕ್ಷ ರೂ. ಗಳ ನಾಶ ನಷ್ಟ ಉಂಟಾಗಿದ್ದು, ನಾಲ್ವರು ಬಲಿಯಾಗಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಮೇ 30 ರಿಂದ ಜೂನ್ 13 ರ ತನಕ 48 ಸೆ. ಮೀ ಮಳೆ ಲಭಿಸಿದೆ. ಕಳೆದ 24 ಗಂಟೆಗಳಲ್ಲಿ 37 ಮಿ. ಮೀ ಮಳೆ ಲಭಿಸಿದೆ. 24 ಗಂಟೆಗಳ ಅವಧಿಯಲ್ಲಿ 10 ಮನೆಗಳು ಪೂರ್ಣವಾಗಿ , 14 ಮನೆಗಳು ಬಾಗಶ: ವಾಗಿ ಕುಸಿದಿದೆ. ಇದುವರೆಗೆ ಒಟ್ಟು 52 ಮನೆಗಳು ಹಾನಿಗೊಂಡಿದೆ. ಈ ಪೈಕಿ 14 ಪೂರ್ಣವಾಗಿ 38 ಮನೆಗಳು ಭಾಗಶ:ವಾಗಿ ಹಾನಿಗೊಂಡಿದೆ. ಮನೆ ಹಾನಿಯಿಂದ 9,58,435 ರೂ . ನಷ್ಟ ಉಂಟಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಕಂಟ್ರೋಲ್ ರೂ. ನಿಂದ ಮಾಹಿತಿ ಲಭಿಸಿದೆ . ಮಂಗಳವಾರ ಮಳೆ ಪ್ರಮಾಣ ಕುಸಿತ ಉಂಟಾಗಿದೆ.