ಉಳ್ಳಾಲ: ಕಡಲ್ಕೊರೆತಕ್ಕೆ ತಾತ್ಕಾಲಿಕ ತಡೆಗೋಡೆಯಾಗಿ ಕಲ್ಲು ಹಾಕುವ ಕಾಮಗಾರಿಯಲ್ಲಿ ನಿರತ ಟಿಪ್ಪರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ಸಮುದ್ರ ಬದಿಯಲ್ಲೇ ಉರುಳಿಬಿದ್ದು ಸ್ವಲ್ಪದರಲ್ಲೇ ಅಪಾಯದಿಂದ ತಪ್ಪಿದ ಘಟನೆ ಉಳ್ಳಾಲದ ಕೈಕೋ ಪ್ರದೇಶದಲ್ಲಿ ಶುಕ್ರವಾರ ನಡೆದಿದೆ.
ಕೈಕೋ, ಕಿಲಿರಿಯಾನಗರ ಪ್ರದೇಶದಲ್ಲಿ ಕಲ್ಲು ಹಾಕುವ ಕೆಲಸ ಭರದಿಂದ ಸಾಗುತ್ತಿದೆ. ವಾರದ ಹಿಂದೆ ಇದೇ ಪ್ರದೇಶದಲ್ಲಿ ಮಹಿಳೆಯೊಬ್ಬರ ಮನೆ ಭಾಗಶ: ಸಮುದ್ರಪಾಲಾಗಿತ್ತು. ಆ ಬಳಿಕ ಕಲ್ಲು ಹಾಕುವ ಕಾಮಗಾರಿ ಭರದಿಂದ ಆರಂಭವಾಗಿತ್ತು. ಶುಕ್ರವಾರ ಸಮುದ್ರದ ದಂಡೆಗೆ ಕಲ್ಲು ಹಾಕುವ ವೇಳೆ ನಿಯಂತ್ರಣ ಕಳೆದುಕೊಂಡ ಟಿಪ್ಪರ್ ಲಾರಿ ಸಮುದ್ರಕ್ಕೆ ಬೀಳುವುದರಿಂದ ಮೀ. ಅಂತರದಲ್ಲಿ ಉರುಳಿಬಿದ್ದಿದೆ. ಘಟನೆಯಲ್ಲಿ ಲಾರಿ ಚಾಲಕನಿಗೆ ಸ್ವಲ್ಪ ಗಾಯಗಳಾಗಿವೆ. ಮುಳುಗುವ ಭೀತಿಯಲ್ಲಿರುವ ಬಾರ್ಜ್ ಎದುರುಗಡೆಯೇ ಲಾರಿ ಕೂಡಾ ಮಗುಚಿರುವುದರಿಂದ ಇದನ್ನು ನೋಡಲು ಜನ ಜಮಾಯಿಸಿದ್ದರು.