News Kannada
Friday, October 07 2022

ಕರಾವಳಿ

ಅಪಾಯದ ಸ್ಥಿತಿಯಲ್ಲಿರುವ ಚಿಬಿದ್ರೆ ಗ್ರಾಮದ ಸಾರ್ವಜನಿಕ ಕೆರೆ - 1 min read

Photo Credit :

ಅಪಾಯದ ಸ್ಥಿತಿಯಲ್ಲಿರುವ ಚಿಬಿದ್ರೆ ಗ್ರಾಮದ ಸಾರ್ವಜನಿಕ ಕೆರೆ

ಬೆಳ್ತಂಗಡಿ: ಚಾರ್ಮಡಿಗ್ರಾಮ ಪಂಚಾಯತ್ ವ್ಯಾಪ್ತಿಗೊಳಪಟ್ಟ ಚಿಬಿದ್ರೆಗ್ರಾಮದಲ್ಲಿ ಇತ್ತೀಚೆಗಷ್ಟೇ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಬೃಹತ್ ಕೆರೆಯೊಂದು ಕುಸಿಯತೊಡಗಿದ್ದು ಅಪಾಯದ ಸ್ಥಿತಿಯಲ್ಲಿದೆ.ಕುಸಿತ ತಡೆಯಲು ಕಲ್ಲುಕಟ್ಟದಿರುವದರಿಂದಲೇ ಈ ಸನ್ನಿವೇಶ ನಿರ್ಮಾಣವಾಗಿದ್ದು ಇದಕ್ಕೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಅಭಿಪ್ರಾಯಪಡಲಾಗಿದೆ.

ಚಾರ್ಮಡಿ ಗ್ರಾಪಂ ಆಡಳಿತಕ್ಕೊಳಪಟ್ಟ ಚಿಬಿದ್ರೆ ಬಳಿ ಸುಮಾರು 22 ಲಕ್ಷ ರೂಪಾಯಿ ವೆಚ್ಚದಲ್ಲಿ ಬೃಹತ್ ಸಾರ್ವಜನಿಕ ಕೆರೆಯೊಂದು ಇತ್ತೀಚೆಗಷ್ಟೆ ನಿರ್ಮಾಣಗೊಂಡಿದ್ದು ಅದರ ಕುಸಿತ ತಡೆಯಲು ಕಲ್ಲು ಜೋಡಿಸದ ಪರಿಣಾಮ ದಿನೇ ದಿನೇ ಕುಸಿಯುತ್ತಿದೆ. ಕೆಲ ಸಮಯದ ಹಿಂದೆ ದ.ಕ ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ| ಎಂ. ಆರ್.ರವಿ ಚಿಬಿದ್ರೆ ಕೆರೆ ಕಾಮಗಾರಿ ವೀಕ್ಷಣೆಗೆ ಭೇಟಿ ನೀಡಿದ್ದು ಇಲಾಖಾಧಿಕಾರಿಗಳ ಸಮ್ಮುಖದಲ್ಲಿ ಕೆರೆಯ ಬದಿಯಲ್ಲಿ ಅಪಾಯದಲ್ಲಿರುವ ಬೃಹತ್ ಮರಗಳನ್ನು ಮೆಸ್ಕಾಂ ಅಧಿಕಾರಿಗಳ ಸಹಕಾರದಿಂದ ಅರಣ್ಯ ಇಲಾಖೆ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದ್ದರು.

ಈ ಸಂದರ್ಭ ತಾ.ಪಂ ಇಓ, ಗ್ರಾಪಂ ಪಿಡಿಓ ಮತ್ತು ಜಿಪಂ ಸದಸ್ಯರು, ಗ್ರಾಪಂ ಅಧ್ಯಕ್ಷೆಯೂ ಇದ್ದರು. ಜಿಪಂ ಮುಖ್ಯಕಾರ್ಯ ನಿರ್ವಹಣಾಧಿಕಾರಿಯವರು ಅಪಾಯದಲ್ಲಿರುವ ಮರಗಳನ್ನು ಕಡಿದು ಮುಂದಿನ ಕಾಮಗಾರಿಗೆ ಸ್ಪಂದಿಸುವಂತೆ ಸೂಚನೆ ನೀಡಿದ ಕಾರಣ ಇದೀಗ ಮರಗಳನ್ನು ಕಡಿಯಲಾಗಿದೆ. ಆದರೆ ಕೆರೆಯ ಬದಿಯ ಮನೆಯಲ್ಲಿರುವ ಪಿಕೆ ಇಸ್ಮಾಯಿಲ್ ಬಡ ಕುಟುಂಬ ಆತಂಕದಲ್ಲಿದೆ.

ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಅನುದಾನ ಮತ್ತು ಜಿಪಂ ಸದಸ್ಯರ ಅನುದಾನದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿರುವ ಚಿಬಿದ್ರೆ ಕೆರೆಯು ಕುಸಿಯುತ್ತಿದ್ದು ಸಂಪೂರ್ಣ ಕುಸಿದಲ್ಲಿ ಕೆರೆಯೂ ಮುಚ್ಚಿ ಹೋಗಿ ಪ್ರಮುಖ ರಸ್ತೆಯೊಂದು ಕೆರೆ ಪಾಲಾಗುವ ಅಪಾಯದಲ್ಲಿದೆ.

 

See also  ಕೆಪಿಸಿಸಿ ಅಧ್ಯಕ್ಷರಿಗೆ ನೈತಿಕತೆ ಇದ್ದರೆ ಸಂಪತ್ ರಾಜ್ ಶರಣಾಗಿಸಲಿ: ನಳಿನ್ ಕುಮಾರ್ ಕಟೀಲ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು