ಬಂಟ್ವಾಳ: ಸಂಘಟನೆಯೊಂದರಲ್ಲಿ ಸಕ್ರೀಯನಾಗಿದ್ದ ರಿಕ್ಷಾಚಾಲಕನೋರ್ವನನ್ನು ದುಷ್ಕರ್ಮಿಗಳ ತಂಡವೊಂದು ಬರ್ಬರವಾಗಿ ಹತ್ಯೆಗೈದ ಘಟನೆ ಬುಧವಾರ ಹಾಡುಹಗಲೇ ತಾಲೂಕಿನ ಬೆಂಜನಪದವಿನಲ್ಲಿ ನಡೆದಿದೆ.
ಪೊಳಲಿ ಸಮೀಪದ ಅಮ್ಮುಂಜೆ ನಿವಾಸಿ,ಎಸ್ ಡಿ ಪಿ ಐ ಕಾರ್ಯಕರ್ತ ಅಶ್ರಫ್ (30) ಕೊಲೆಯಾದವ ದುರ್ದೈವಿ. ಬೈಕಿನಲ್ಲಿ ಬಂದ ಮುಸುಕುಧಾರಿಗಳು ಈ ಕೃತ್ಯ ಎಸಗಿ ಪರಾರಿಯಾಗಿದ್ದಾರೆಂದು ಹೇಳಲಾಗಿದ್ದು, ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಪೂರ್ವ ದ್ವೇಷದಿಂದಲೇ ಕೊಲೆ ನಡೆಸಿರುವ ಶಂಕೆ ವ್ಯಕ್ತವಾಗಿದ್ದು, ಮೃತ ಅಶ್ರಫ್ ಎಸ್ಡಿಪಿಐ ಸಂಘಟನೆಯ ಅಮ್ಮುಂಜೆ ವಲಯ ಅಧ್ಯಕ್ಷ ರಾಗಿದ್ದು, ಇಂದು ಬೆಳಿಗ್ಗೆ ಪಕ್ಷದ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ಕಾಲಯಿಯಲ್ಲಿ ಧ್ವಜಾರೋಹಣ ನೆರೆವೇರಿಸಿ,ಕಲಾಯಿ ರಸ್ತೆಯ ಗುಂಡಿಗಳಿಗೆ ಕಲ್ಲುಗಳನ್ನು ಹಾಕಿ ಸರಿಪಡಿಸುವ ಸಮಾಜ ಸೇವೆ ನಿರ್ವಹಿಸಿ ವಾಪಾಸಾದ ಬಳಿಕ ಈ ಘಟನೆ ನಡೆದಿದೆ. ಸ್ಪಷ್ಟವಿವರ ಇನ್ನಷ್ಟೇ ತಿಳಿದು ಬರಬೇಕಿದೆ.