News Kannada
Monday, September 26 2022

ಕರಾವಳಿ

ನೂತನ ನಿರ್ದೇಶಕರಾಗಿ ಫಾದರ್ ವಿಲ್ಫ್ರೆಡ್ ಪ್ರಕಾಶ್ ಡಿಸೋಜಾ ಆಯ್ಕೆ - 1 min read

Photo Credit :

ನೂತನ ನಿರ್ದೇಶಕರಾಗಿ ಫಾದರ್ ವಿಲ್ಫ್ರೆಡ್ ಪ್ರಕಾಶ್ ಡಿಸೋಜಾ ಆಯ್ಕೆ

ಮಂಗಳೂರು: ವಾಮಂಜೂರಿನ ಸೈಂಟ್ ಜೋಸೆಫ್ ಎಂಜಿಯರಿಂಗ್ ಕಾಲೇಜಿನಲ್ಲಿ ಗುರುವಾರ ಧಾರ್ಮಿಕ ಸೇವಾ ಪದವಿ ಹಸ್ತಾಂತರ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಫಾದರ್ ವಿಲ್ಫ್ರೆಡ್ ಪ್ರಕಾಶ್ ಡಿಸೋಜಾ ನೂತನವಾಗಿ ಸೈಂಟ್ ಜೋಸೆಫ್ ಇಂಜಿನಿಯರ್ ಕಾಲೇಜಿನ ನಿರ್ದೇಶಕರಾಗಿ ಪ್ರಮಾಣ ವಚನ ಸ್ವೀಕರಿಸಿ ಬಳಿಕ ಮಾತನಾಡಿದ ಅವರು ಈ ಹುದ್ದೆ ತುಂಬಾ ಜವಾಬ್ದಾರಿಯಿಂದ ಕೂಡಿದೆ. ಒಂದು ಸಿಂಹಾಸನದಲ್ಲಿ ಸಿಂಹ ಹೇಗೆ ಪ್ರಾಮುಖ್ಯತೆಯನ್ನು ಹೊಂದಿರುತ್ತದೆಯೋ ಅದೇ ರೀತಿ ಸಿಂಹದಂತೆ ನನಗೆ ನೀಡಲಾದ ಎಲ್ಲಾ ಜವಾಬ್ದಾರಿಗಳನ್ನು ಪದವಿಗೆ ಚ್ಯುತಿ ಬಾರದಂತೆ ನಡೆದುಕೊಳ್ಳುತ್ತೇನೆ. ಕಾಲೇಜಿನ ಸರ್ವಾಂಗೀಣ ಅಭಿವೃದ್ಧಿಗೆ ನ್ಯಾಯವಾದ ರೀತಿಯ ಶ್ರಮ ವಹಿಸಿ ಕಾರ್ಯ ನಿರ್ವಹಿಸುತ್ತೇನೆ ಎಂದು ಹೇಳಿದರು.

ನಿರ್ದೇಶಕ ಹುದ್ದೆಯಿಂದ ಪದಗ್ರಹಣ ಹೊಂದಿ ಮಾತನಾಡಿದ ಫಾದರ್ ಪೀಟರ್ ಮಚಾದೊ, ನಿರ್ದೇಶಕ ಹುದ್ದೆ ಹಲವಾರು ಅನುಭವಗಳನ್ನು ನೀಡಿದೆ. ಸಂತೋಷ, ದುಃಖ, ಬೇಸರ ಎಂಬ ಭಾವನೆಗಳ ಮೂಲಕ ಜೀವನದ ಪಾಠವನ್ನು ತಿಳಿಸಿದೆ ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡರು. ಜೊತೆಗೆ ನೂತನ ನಿರ್ದೇಶಕರಾಗಿ ನೇಮಕಗೊಂಡ ಫಾದರ್ ವಿಲ್ಫ್ರೆಡ್ ಪ್ರಕಾಶ್ ಡಿಸೋಜಾ ಅವರಿಗೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಫಾದರ್ ವಿಲ್ಫ್ರೆಡ್ ಪ್ರಕಾಶ್ ಡಿಸೋಜಾಗೆ ಫಾದರ್ ವಿಕ್ಟರ್ ಮಚಾದೊರಿಂದ ಪವಿತ್ರ ಧಾರ್ಮಿಕ ಗ್ರಂಥ ಬೈಬಲ್ ನ್ನು ಓದಿಸಲಾಯಿತು.

 

See also  ಹತ್ರಾಸ್ ಸಾಮೂಹಿಕ ಅತ್ಯಾಚಾರ ಖಂಡಿಸಿ ಎಬಿವಿಪಿ ಪ್ರತಿಭಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು