News Kannada
Thursday, October 06 2022

ಕರಾವಳಿ

ಸಾಮಾಜಿಕ ಜಾಲತಾಣಗಳ ವದಂತಿಗೆ ಕಿವಿಗೊಡಬೇಡಿ:ರಮಾನಾಥ ರೈ - 1 min read

Photo Credit :

ಸಾಮಾಜಿಕ ಜಾಲತಾಣಗಳ ವದಂತಿಗೆ ಕಿವಿಗೊಡಬೇಡಿ:ರಮಾನಾಥ ರೈ

ಮಂಗಳೂರು: ಸಾಮಾಜಿಕ ಸಾಮರಸ್ಯವನ್ನು ಉಳಿಸಿಕೊಳ್ಳುವ ದೃಷ್ಟಿಯಿಂದ ನಾಗರಿಕರು ಸಂಯಮದಿಂದ, ಯಾವುದೇ ರೀತಿಯ ವದಂತಿಗಳಿಗೆ ಕಿವಿಗೊಡದೆ ನೈಜ ವಿಚಾರಗಳನ್ನು ತಿಳಿದುಕೊಳ್ಳಬೇಕು ಎಂದು ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದರು.

ಮಂಗಳೂರು ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ವರ್ತಮಾನ ದಿನದಲ್ಲಿ ಹಲವಾರು ವರ್ಷಗಳಿಂದ ಮನುಷ್ಯ ಮನುಷ್ಯನಲ್ಲಿ ಇದ್ದ ಅಪನಂಬಿಕೆಗಳು, ಅವಿಶ್ವಾಸಗಳನ್ನು ಹುಟ್ಟುಹಾಕುವ ಪ್ರಯತ್ನದಿಂದ ಸಾಮರಸ್ಯಕ್ಕೆ ತೊಡಕಾಗುವ ಅನೇಕ ಘಟನೆಗಳು ನಡೆದಿವೆ. ಇದರ ಕುರಿತು ನಾಗರಿಕರು ಸಾಮಾಜಿಕ ಜಾಲತಾಣಗಳಲ್ಲಿ ಬರುವ ವದಂತಿಗಳಿಗೆ ಕಿವಿಗೊಡದೆ ನಿಜಾಂಶವನ್ನು ತಿಳಿದು ಸಂಯಮದಿಂದ ವರ್ತಿಸಬೇಕು ಎಂದು ವಿನಂತಿಸಿದರು.

ಕಲ್ಲಡ್ಕದಲ್ಲಿ ನಡೆದ ಘಟನೆಯ ನಂತರ ಕೆಲವು ನಿಯೋಗಗಳು ಕೇಳಿಕೊಂಡ ಕಾರಣ ಮತೀಯ ಗುಂಪುಗಳ ಮಧ್ಯೆ ಸಾಮರಸ್ಯದ ತೊಡಕಾಗುತ್ತಿದ್ದ ವಿಷಯದ ಕುರಿತು ಎಸ್.ಪಿ.ಅವರ ಜೊತೆ ಮಾತನಾಡಿದ್ದೇನೆ. ನಾನು ಹೇಳಿರುವುದರಲ್ಲಿ ಏನೂ ತಪ್ಪಿಲ್ಲ. ಸಾಮರಸ್ಯವನ್ನು ಉಳಿಸಿಕೊಳ್ಳುವ, ಇನ್ನು ಮುಂದೆ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳುವ ಸಲುವಾಗಿ ಕೆಲವು ವಿಚಾರಗಳನ್ನು ಅವರ ಬಳಿ ಮಾತನಾಡಿದ್ದೇನೆ. ಆದರೆ, ಕೇವಲ ಒಂದು ವಿಷಯವನ್ನು ಮುಂದಿಟ್ಟುಕೊಂಡು ಚರ್ಚೆ ನಡೆಯಿತು. ನಾನು ಸಾಮರಸ್ಯಕ್ಕೆ ಒತ್ತು ನೀಡುವ ಕಾರ್ಯವನ್ನಷ್ಟೇ ಮಾಡುತ್ತಿದ್ದೇನೆ ಎಂದು ತಿಳಿಸಿದರು.

ಪ್ರಚೋದನಕಾರಿ ಭಾಷಣಗಳು ಘರ್ಷಣೆಗಳಿಗೆ ಪ್ರಮುಖ ಕಾರಣವಾಗಿವೆ. ಮತೀಯ ಭಾವನೆಗಳಿಂದ ಜಿಲ್ಲೆಯಲ್ಲಿ ಘರ್ಷಣೆಗಳು ಆಗಬೇಕು ಎನ್ನುವ ಪ್ರಯತ್ನವನ್ನು ಮಾಡುವವರು ಸಾಮಾಜಿಕ ಸಾಮರಸ್ಯಕ್ಕೆ ತೊಡಕಾಗುತ್ತಿದ್ದಾರೆ ಎಂದು ಖಂಡಿಸಿದರು. ನಾನು ಒಬ್ಬ ಜಾತ್ಯಾತೀತವಾದಿ. ನಾನು ವಿಚಲಿತನನಾಗುವುದಿಲ್ಲ. ಆದ್ದರಿಂದ ಅಲ್ಪಸಂಖ್ಯಾತ ಮತೀಯವಾದಿಗಳನ್ನು ದ್ವೇಷಿಸುತ್ತೇನೆ. ಬಿಜೆಪಿ ಪ್ರಚೋದನಕಾರಿ ಮಾತುಗಳನ್ನಾಡಿ ಜನರ ದಾರಿ ತಪ್ಪಿಸಿ ಮತವನ್ನು ತನ್ನೆಡೆ ಸೆಳೆಯುವ ಕಾರ್ಯತಂತ್ರ ರೂಪಿಸುತ್ತಿದೆ. ಕಾಂಗ್ರೆಸ್ ಅಭಿವೃದ್ಧಿ ಕೆಲಸಗಳನ್ನು ಮಾಡಿ ಅದಕ್ಕೆ ಕೂಲಿ ಕೇಳುತ್ತಿದೆ ಎಂದು ನುಡಿದರು.

ಕೊಲೆಗಾರರ ಹಿಂದಿರುವ ಪಿತೂರಿದಾರರನ್ನು ಮೊದಲು ಬಂಧನ ಮಾಡಬೇಕು. ಆಗ ಜಿಲ್ಲೆಯಲ್ಲಿ ಸಾಮರಸ್ಯ ನೆಲೆಗೊಳ್ಳುತ್ತದೆ ಎಂದರು. ಈ ವೇಳೆ ದ.ಕ.ಜಿಲ್ಲಾ ಕಾಂಗ್ರೆಸ್ ನ ನೂತನ ಅಧ್ಯಕ್ಷರಾಗಿ ಹರೀಶ್ ಕುಮಾರ್ ನ್ನು ನೇಮಕ ಮಾಡಲಾಯಿತು.

ಈ ಸಂದರ್ಭ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಕಾಂಗ್ರೆಸ್ ಮುಖಂಡ ಶಶಿಧರ್ ಹೆಗ್ಡೆ, ಜಗದೀಶ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲಿಟ್ ಪಿಂಟೋ, ಕೋಡಿಕಲ್ ಇಬ್ರಾಹಿಂ, ಹರೀಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

See also  ಕಾಮಗಾರಿ ಬಗ್ಗೆ ಅಪೂರ್ಣ ಮಾಹಿತಿ‌ ನೀಡಿದ ಅಧಿಕಾರಿಗಳು ತರಾಟೆಗೆ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು