ಕಾಸರಗೋಡು: ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗ ಹರಡುತ್ತಿರುವ ಈ ಸಂದರ್ಭದಲ್ಲಿ ಸರಕಾರ ಸಂಪೂರ್ಣ ಮಾಲಿನ್ಯ ನಿರ್ಮೂಲನೆ ಬಗ್ಗೆ ಘೋಷಣೆ ಮಾಡುತ್ತಿದ್ದರೂ ಕಾಸರಗೋಡು ಸರಕಾರಿ ಜನರಲ್ ಆಸ್ಪತ್ರೆಯ ಪರಿಸರ ಸೊಳ್ಳೆ ಉತ್ಪತ್ತಿ ಕೇಂದ್ರವಾಗಿ ಪರಿಣಮಿಸಿದೆ.
ಪರಿಸರದಲ್ಲಿ ಮಾಲಿನ್ಯಗಳ ರಾಶಿ ಕಂಡು ಬರುತ್ತಿದೆ. ಆಸ್ಪತ್ರೆ ಕಟ್ಟಡದ ಹಿಂಭಾಗದಲ್ಲಿ ಮಾಲಿನ್ಯ ಅಲ್ಲಲ್ಲಿ ಕಂಡು ಬರುತ್ತಿದೆ. ಪ್ಲಾಸ್ಟಿಕ್ ಸೇರಿದಂತೆ ಮಾಲಿನ್ಯ ಗಳನ್ನು ಎಸೆಯಲಾಗಿದ್ದು, ಇದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಒಂದೆಡೆ ದಿನನಿತ್ಯ ಮಲೇರಿಯಾ, ಡೆಂಗ್ಯೂ, ಚಿಕುನ್ ಗುನ್ಯಾ, ಎಚ್ ವನ್ ಎನ್ ವನ್ ಸೇರಿದಂತೆ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿ ಸಾವಿರಾರು ಮಂದಿ ಸರಕಾರಿ ಆಸ್ಪತ್ರೆಗಳಿಗೆ ತಲುಪುತ್ತಿದ್ದು, ಆದರೆ ಆಸ್ಪತ್ರೆ ಪರಿಸರವೇ ಸಾಂಕ್ರಾಮಿಕ ರೋಗ ಹರಡುವ ಕೇಂದ್ರವಾಗಿ ಪರಿಣಮಿಸುತ್ತಿದೆ.
ಸ್ವಚ್ಛತಾ ಆಂದೋಲನಕ್ಕೆ ಸರಕಾರ ಯೋಜನೆ ಹಾಕಿದ್ದರೂ ಸರಕಾರೀ ಆಸ್ಪತ್ರೆ ಮಾಲಿನ್ಯ ಪರಿಸರ ಸ್ವಚ್ಛತೆಗೆ ಗಮನ ನೀಡದಿರುವುದು ರೋಗ ಇನ್ನಷ್ಟು ಉಲ್ಬಣಗೊಳ್ಳಲು ಕಾರಣವಾಗಲಿದೆ .